ಪವಿತ್ರಾ ಲೋಕೇಶ್ -ನರೇಶ್ ಮತ್ತೆ ಮದುವೆ: ಜೂನ್ 9ಕ್ಕೆ ಮುಹೂರ್ತ ನಿಗಧಿ
ತೆಲುಗು ಚಿತ್ರರಂಗದ ಖ್ಯಾತ ನಟ ಡಾ.ನರೇಶ್ ಮತ್ತು ಕನ್ನಡದ ನಟಿ ಪವಿತ್ರ ಲೋಕೇಶ್ ಅಭಿನಯದ “” ಮತ್ತೆ ಮದುವೆ” ಚಿತ್ರ ಜೂನ್ 9ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
“ಮತ್ತೆ ಮದುಗೆ” ಚಿತ್ರದ ಟ್ರೈಲರ್ ಮತ್ತು ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು.ಕಳೆದ ವಾರವೇ ತೆಲುಗಿನಲ್ಲಿ ಚಿತ್ರ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಚಿತ್ರದಲ್ಲಿ ಇದೇ 9ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಜೋಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.,
ನಿರ್ಮಾಪಕ ನಟ ಡಾ. ನರೇಶ್, ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಐವತ್ತು ವರ್ಷ ಆಗಿದೆ. ಇದೇ ವೇಳೆ ತಂದೆ ತಾಯಿ ಹುಟ್ಟುಹಾಕಿದ್ದ ವಿಜಯಕೃಷ್ಣ ಮೂವೀಸ್ ಸಂಸ್ಥೆಗೆ 50 ವರ್ಷ ಪೂರ್ಣಗೊಂಡಿದೆ. ಅದರ ಲೆಗಸಿಯನ್ನು ಮಳ್ಳಿ ಪೆಳ್ಳಿ ಮತ್ತು ಮತ್ತೆ ಮದುವೆ ಮೂಲಕ ಮತ್ತೆ ನಿರ್ಮಾಣ ಆರಂಭಿಸಿದ್ದೇವೆ.
ತೆಲುಗು ಭಾಷೆಯಲ್ಲಿ ಮಳ್ಳಿ ಪೆಳ್ಳಿ ಹೆಸರಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಭಿನ್ನ ಕಥೆಯನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.ಎಲ್ಲರಿಗೂ ಇಷ್ಡವಾಗಲಿದೆ ಎನ್ನುವ ವಿಶ್ವಾಸವಿದೆ. ಇದೇ 9ಕ್ಕೆ ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಇದೇ ವೇಳೆ ತೆಲುಗು ಭಾಷೆಯ ಚಿತ್ರ ಕೂಡ ಬಿಡುಗಡೆಯಾಗಲಿದೆ. ವಿಶ್ವದಾದ್ಯಂತ ಕನ್ನಡ ಚಿತ್ರಗಳು ಕನ್ನಡದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಸಿನಿಮಾ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳಬಹುದು ಎಂದರು
ಸರೋಜಾದೇವಿ ಸೇರಿದಂತೆ ಅನೇಕ ಮಂದಿ ಉತ್ತಮ ಪಾತ್ರ ಮಾಡಿದ್ದಾರೆ. ಅದರ ಸಾಲಿಗೆ ಪವಿತ್ರಾ ಲೋಕೇಶ್ ಕೂಡ ಸೇರ್ಪಡೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪವಿತ್ರಾ ಲೋಕೇಶ್ ಬೋಲ್ಡ್ ಪಾತ್ರ ಮಾಡಿದ್ದಾರೆ. ಚಿತ್ರ ನೋಡಿದರೆ ಪಾತ್ರದ ಬಗ್ಗೆ ಮಾತನಾಡುತ್ತೀರಿ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಂದ್ರದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತಮ ಚಿತ್ರ ನೀಡುವುದು ವಿಜಯ ಕೃಷ್ಣ ಸಂಸ್ಥೆಯ ಉದ್ದೇಶ, ಕನ್ನಡದಲ್ಲಿ ಚೆನ್ನಾಗಿ ಓಡಿದರೆ ಚಿತ್ರದ ಸೀಕ್ವಲ್ ಮಾಡುವ ಉದ್ದೇಶವಿದೆ. ಉತ್ತಮ ನಿರ್ಮಾಣ ಮೌಲ್ಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಕರ್ನಾಟಕದಲ್ಲಿ ಬಾಲ್ಯದಿಂದ ಬೆಳೆದಿದ್ದೇನೆ. ಕೋವಿಡ್ ನಂತರ ಕನ್ನಡ ವಿಶ್ವ ಮಟ್ಟದಲ್ಲಿ ಗಮನ ಸೆಳೆಯು ಚಿತ್ರ ನೀಡಿದೆ. ಕನ್ನಡದಲ್ಲಿ ಸಕ್ಸಸ್ ಅಂತ ಅಲ್ಲ. ಒಳ್ಳೆಯ ಸಿನಿಮಾ ನೀಡಿದ್ದೇವೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಲಿ ಎನ್ನುವ ಉದ್ದೇಶವಿದೆ. ಚಿತ್ರಮಂದಿರದಲ್ಲಿ ಓಡಿದ ನಂತರ ಒಟಿಟಿಗೆ ತರುವ ಉದ್ದೇಶವಿದೆ.
ದಂಪತಿಯ ಜೀವನದ ಕಥೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಹಲವು ಮಂದಿ ಮದುವೆ ಕುರಿತಾದ ಅನೇಕ ಸಮಸ್ಯೆ ಎದುರಿಸುತ್ತವೆ. ಸಮಾಜಕ್ಕೆ ಕನ್ನಡಿಯಾಗಿ ಸಿನಿಮಾ ಮಾಡಿದ್ದೇವೆ ಎಂದರು.
ನಾನೊಬ್ಬ ಮಹಿಳಾ ನಿರ್ದೇಶಕಿ ಪುತ್ರ.ನಾನು ಕೂಡ ಸಾಕ್ಷ್ಯ ಚಿತ್ರ ನಿರ್ದೇಶನ ಮಾಡಿದ್ದೇನೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ಮಾಹಿತಿ ನೀಡಿದರು.
ಕನ್ನಡ ಬರುತ್ತೆ. ನನ್ನ ಪಾತ್ರಕ್ಕೆ ಡಬ್ಬಂಗ್ ಮಾಡಲು ವರದರಾಜು ಚಿಕ್ಕಬಳ್ಳಾಪುರು ಅವರು ನನ್ನ ಗುರು,ಪವಿತ್ರ ಬೆಂಬಲಿಸಿದ್ದಾರೆ. ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೇನೆ. ಡಬ್ ಮಾಡಲು 3- 4 ದಿನ ತೆಗೆದುಕೊಂಡಿದ್ದೇನೆ ಎನ್ನುವ ವಿವರ ನೀಡಿದರು.
ನಟಿ ಪವಿತ್ರಾ ಲೋಕೇಶ್ ಮಾತನಾಡಿ ,ಇದೇ ತಿಂಗಳು 9 ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ವಿಜಯಕೃಷ್ಣ ಮೂವೀಸ್ ಸಂಸ್ಥೆಯ ಮೂಲಕ ಉತ್ತಮ ಚಿತ್ರ ಮಾಡುವ ಉದ್ದೇಶವಿದೆ. ನಿರ್ದೇಶಕರು ಹೇಳುವುದನ್ನು ನಟಿಸುವುದು ನಮ್ಮ ಕೆಲಸ. ಪಾತ್ರವಾಗಿ ,ಸಾಮಾನ್ಯ ಮಹಿಳೆಯಲ್ಲಿರುವ ತೊಳಲಾಟವನ್ನು ಚಿತ್ರದಲ್ಲಿ ತೋರಿಸುವ ಕೆಲಸ ಮಾಡಲಾಗಿದೆ .ಸಿನಿಮಾ ನೋಡಿದರೆ ಪಾತ್ರ ಏನು ಎನ್ನುವುದು ಇಷ್ಡವಾಗಲಿದೆ. ಸಿನಿಮಾ ನೋಡಿ ನನ್ನ ಜೀವನ ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದರು.
ಗೀತರಚನೆಕಾರ ವರದರಾಜ್ ಚಿಕ್ಕಬಳ್ಳಾಪುರ, ಮಾತನಾಡಿ ನಿರ್ಮಾಪಕರೂ ಆಗಿರುವ ನಟ ಡಾ. ನರೇಶ್ ಅವರು ಅವರದೇ ಸ್ಟುಡಿಯೋಗೆ ನಮ್ಮನ್ನು ಕರೆಸಿಕೊಂಡು ಪ್ರೀತಿಯಿಂದ ನಡೆಸಿಕೊಂಡರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 46 ಚಿತ್ರ ನಿರ್ದೇಶನ ಮಾಡಿದ ಹಿರಿಮೆ ನಟ ನರೇಶ್ ಅವರ ತಾಯಿ ವಿಜಯ ಕೃಷ್ಣ ಅವರು. ಅವರ ಮನೆತನಕ್ಕೆ ದೊಡ್ಡ ಇತಿಹಾಸವಿದೆ. ಕನ್ನಡ,ತೆಲುಗು ಚಿತ್ರರಂಗದಲ್ಲಿ ಇದುವರೆಗೂ 100ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.