“ಗರಡಿ”ಚಿತ್ರದ ಹೊಡಿರೆಲೆ ಹಲಗಿ “ಹಾಡಿನ ಮಾಧುರ್ಯಕ್ಕೆ ಮನಸೋತ ಮಂದಿ

ನಿರ್ದೇಶಕ ಯೋಗರಾಜ್ ಭಟ್ ತಾವು ನಿರ್ದೇಶನ ಮಾಡುವ ಚಿತ್ರ ಇರಲಿ ಅಥವಾ ಬೇರೆ ನಿರ್ದೇಶಕ ಚಿತ್ರವಿರಲಿ ಅಲ್ಲೊಂದು ಹಿಟ್ ಹಾಡು ಗ್ಯಾರಂಟಿ. ಇನ್ನು ಹೇಳಿ ಕೇಳಿ ತಮ್ಮದೇ ನಿರ್ದೇಶನ ಅಂದ ಮೇಲೆ ಒಂಚೂರು ಹೆಚ್ಚಿಗೆ ಪ್ರೀತಿ.

ಕೌರವ ಪ್ರೋಡಕ್ಷನ್ಸ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಮೊದಲ ಹಾಡು “ಹೊಡಿರೆಲೆ ಹಲಗಿ” ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಈ ಹಾಡಿನ ಮಾಧುರ್ಯಕ್ಕೆ ಕನ್ನಡಿಗರು ಮನ ಸೋತ್ತಿದ್ದಾರೆ. ಹಾಡು ಎಲ್ಲೆಡೆ ವೈರಲ್ ಆಗಿದೆ.

” ಹೊಡಿರೆಲೆ ಹಲಗಿ” ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡನ್ನು 16 ಲಕ್ಷಕ್ಕೂ ಹೆಚ್ಚು ಮಂದಿ ಜನ ವೀಕ್ಷಿಸಿದ್ದಾರೆ. ಜೊತೆಗೆ ಹಾಡಿಗೆ ಪ್ರಶಂಸೆಯ ಮಳೆಯೇ ಸುರಿಸುತ್ತಿದ್ದಾರೆ.
ಮುಂದಿನ ಹಾಡು ಯಾವಾಗ ಬಿಡುಗಡೆಯಾಗುವುದೊ ಎನ್ನುವ ನಿರೀಕ್ಷೆ ಮತ್ತು ಕುತೂಹಲ ಹೆಚ್ಚುವಂತೆ ಮಾಡಿದೆ. ” ಹೊಡಿರೆಲೆ ಹಲಗಿ ಮೊದಲ ಹಾಡಿಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ “ಗರಡಿ” ತಂಡ ಸಂತಸ ವ್ಯಕ್ತಪಡಿಸಿದೆ.

ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಸೂರ್ಯ, ಸೋನಾಲ್ ಮಾಂಟೆರೊ, ಬಿ.ಸಿ.ಪಾಟೀಲ್, ಸುಜಯ್, ರಾಘವೇಂದ್ರ, ಧರ್ಮಣ್ಣ ಮುಂತಾದವರು “ಗರಡಿ” ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಹಾಡು ಆ ಚಿತ್ರದ ಯಶಸ್ಸಿನ ಮುನ್ಸೂಚನೆ ಎನ್ನುವ ಮಾತಿದೆ. ಅದಕ್ಕೆ ಪೂರಕ ಎನ್ನುವಂತೆ ಗರಡಿ ಚಿತ್ರದ ಹಾಡು ಹಿಟ್ ಆಗಿದ್ದು ಚಿತ್ರ ಕೂಡ ಹಿಟ್ ಆಗುವ ಎಲ್ಲಾ ಮುನ್ಸೂಚನೆ ತೋರಿಸಿದೆ.