Pepe Film Reviw : ಜಾತಿ ಸಂಘರ್ಷ, ಕ್ರೌರ್ಯದಲ್ಲಿ ಅರಳಿದ “ಪೆಪೆ”
ಚಿತ್ರ: ಪೆಪೆ
ನಿರ್ದೇಶನ: ಶ್ರೀಲೇಶ್ ಎಸ್. ನಾಯರ್
ತಾರಾಗಣ: ವಿನಯ್ ರಾಜಕುಮಾರ್, ಕಾಜಲ್ ಕುಂದರ್, ಮಯೂರ್ ಪಟೇಲ್, ಯಶ್‍ಶೆಟ್ಟಿ, ಮೇದಿನಿ ಕೆಳಮನೆ, ಬಲ ರಾಜವಾಡಿ, ಅರುಣ ಬಾಲರಾಜ್, ನವೀನ್ ಡಿ. ಪಡೀಲ್ ಮತ್ತಿತರರು
ರೇಟಿಂಗ್ : * 3.5 / 5
ಲವ್ವರ್ ಬಾಯ್ ಪಾತ್ರದಲ್ಲಿ ಗಮನ ಸೆಳೆದಿದ್ದ ನಟ ವಿನಯ್ ರಾಜ್‍ಕುಮಾರ್ ಇದೇ ಮೊದಲಬಾರಿ ಆಕ್ಷನ್ ಹೀರೋ ಆಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕಎಂತಹ ಪಾತ್ರ ಕೊಟ್ಟರೂ ಸರಿ ಎನ್ನುವುದನ್ನು “ಪೆಪೆ” ಮೂಲಕ ನಿರೂಪಿಸಿದ್ದಾರೆ.
ಶ್ರೀಲೇಶ್ ನಾಯರ್ ನಿರ್ದೇಶನ ಮಾಡಿರುವ ವಿಭಿನ್ನ ಕಥೆ ಹೊಂದಿರುವ ನೆಲಮೂಲದ ಕಥೆಗೆ ವಿನಯ್ ರಾಜ್‍ಕುಮಾರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕುಟುಂಬ,ಜಾತಿ ಸಂಘರ್ಷ, ತೊರೆ, ಮರಳು ಸಾಗಿಸುವುದು, ಸೇಡಿನ ಕಥೆಯ ಜೊತೆ ಜೊತೆಗೆ ರಕ್ತಪಾತವಿಲ್ಲದೆ ಎಲ್ಲರೂ ಸ್ನೇಹ ಸಹಭಾಳ್ವೆಯಿಂದ ಬಾಳುವ ಎನ್ನುವ ಸಂದೇಶವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.
ಜಾತಿ ಸಂಘರ್ಷದ ಬೆಂಕಿ ತಾತನಿಂದ ಮೊಮ್ಮೊಗನ ತನಕ ಮುಂದುವರಿಯುತ್ತದೆ. ಕೆಳಜಾತಿಯ ರಾಯಪ್ಪನ ಮೊಮ್ಮಗ ಪ್ರದೀಪ ಅಲಿಯಾಸ್ ಪೆಪೆ ( ವಿನಯ್ ರಾಜ್ ಕುಮಾರ್ ) ಮೇಲ್ಜಾತಿಯ ಮಲಬಾರಿಗೂ ಸಂಘರ್ಷ ಮುಂದುವರಿಯುತ್ತದೆ. ಹೀಗಾಗಿ ಚಿತ್ರ ಸಂಘರ್ಷ ಮತ್ತು ಕ್ರೌರ್ಯದಲ್ಲಿ ಅನಾವರಣಗೊಂಡಿದೆ.
ಸಂಘರ್ಷದ ಕಥನ ಹೇಳುವ ಉದ್ದೇಶದಿಂದಲೋ ಏನೋ ನಿರ್ದೇಶಕರು ಚಿತ್ರಕ್ಕೆ ಅಗತ್ಯಕ್ಕಿಂತೆ ಹೆಚ್ಚಾಗಿ ತುಸು ಕ್ರೌರ್ಯ, ಹಿಂಸೆ, ರಕ್ತಪಾತ, ಅಶ್ಲೀಲ ಪದಗಳ ಪ್ರಯೋಗಕ್ಕೆ ಆದ್ಯತೆ ನೀಡಿದ್ದಾರೆ. ಚಿತ್ರಕ್ಕೆ “ಎ” ಪ್ರಮಾಣ ಪತ್ರ ಕೊಟ್ಟಿರುವ ಸೆನ್ಸಾರ್ ಮಂಡಳಿ ಆ ಕಾರಣಕ್ಕೆ ಅವಕಾಶ ಮಾಡಿಕೊಟ್ಟಿರಬಹುದು. ಅದು ಏನೇ ಇರಲಿ.
ಕಥೆ ಹೇಳುವ ಕಾರಣಕ್ಕಾಗಿ ಒಂದಷ್ಟು ಫ್ಲಾಷ್ ಬ್ಯಾಕ್ ಮತ್ತು ವಾಸ್ತವಕ್ಕೆ ಆಗಾಗ ಕತೆ ಹಿಂದೆ ಮುಂದೆ ಸಾಗಿದೆ, ನಟ ವಿನಯ್ ರಾಜ್‍ಕುಮಾರ್ ಆಕ್ಷನ್ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಅಲ್ಲಲ್ಲಿ ಹಿಂಸೆ ಮತ್ತು ಕ್ರೌರ್ಯ ಹೆಚ್ಚಾಗಿಯೇ ವಿಜೃಂಬಿಸಿದೆ.ಜಾತಿ ಸಂಘರ್ಷವಾಗಿರುವ ಹಿನ್ನೆಲೆಯಲ್ಲಿ ದ್ವಿತೀಯಾರ್ದದಲ್ಲಿಯೂ ಎಗ್ಗಿಲ್ಲದೆ ಮುಂದುವರಿದಿದೆ ಯಾಕೆ ಎನ್ನುವುದನ್ನು ಚಿತ್ರ ನೋಡಿದರೆ ಚೆಂದ.
ನಾಲ್ಕು ಕುಟುಂಬಗಳ ಸುತ್ತ ಕಥೆ ಸಾಗಿದೆ.ಜೊತೆಗೆ ಹೆಚ್ಚಿನ ಪಾತ್ರಗಳು ತುಂಬಿವೆ. ಇದರ ನಡುವೆ ಮಯೂರ್ ಪಟೇಲ್, ಕಿಟ್ಟಿ, ಕಾಜಲ್ ಕುಂದರ್, ಮೇದಿನಿ ಅರುಣಾ ಬಾಲರಾಜ್ ಗಮನಸೆಳೆಯುತ್ತಾರೆ.ಪೂರ್ಣಚಂದ್ರ ತೇಜಸ್ವಿ ಸಂಗೀತ, ತಪಸ್ವಿ ಹಿನ್ನೆಲೆ ಸಂಗೀತ,ಅಭಿಷೇಕ್ ಕಾಸರಗೋಡು ಛಾಯಾಗ್ರಹವಿದೆ.
ಪೆಪೆ ಚಿತ್ರದಲ್ಲಿ ಕೆಲವು ಪಾತ್ರಗಳು ಸನ್ನಿವೇಶಗಳು ಟು ಬಿ ಕಂಟಿನ್ಯೂಡ್ ಅಂತ ಅಡಿ ಬರಹವಿದ್ದು ಎರಡನೇ ಭಾಗ ಬರಬಹುದು..
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****