Priyanka is a good artist. There is a lot to learn from her - Upendra

ಪ್ರಿಯಾಂಕ ಒಳ್ಳೆಯ ಕಲಾವಿದೆ. ಅವರಿಂದ ಕಲಿಯುವುದು ಸಾಕಷ್ಟಿದೆ – ಉಪೇಂದ್ರ - CineNewsKannada.com

ಪ್ರಿಯಾಂಕ ಒಳ್ಳೆಯ ಕಲಾವಿದೆ. ಅವರಿಂದ ಕಲಿಯುವುದು ಸಾಕಷ್ಟಿದೆ – ಉಪೇಂದ್ರ

ಆಕ್ಷನ್ ಕ್ವೀನ್ ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬದವನ್ನು ‘ಲೈಫ್ ಈಸ್ ಬ್ಯುಟಿಫುಲ್’ ಚಿತ್ರತಂಡ ಅರ್ಥಪೂರ್ಣವಾಗಿ ಆಚರಿಸಿದೆ.

ಈ ವೇಳೆ ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾದ ತುಣುಕುಗಳನ್ನು ನೋಡಿದ್ದೇನೆ. ಚೆನ್ನಾಗಿ ಬಂದಿದೆ. ಲಿಫ್ಟ್ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಅದೇ ರೀತಿ ನಮ್ಮ ಜೀವನ ಕೂಡ ಹಾಗೇ ಇರುತ್ತದೆ. ಒಮ್ಮೆ ಮೇಲೆ, ಕೆಳಗೆ. ಹಾಗಾಗಿಯೇ ಇದಕ್ಕೆ ಈ ಟೈಟಲ್ ಇಟ್ಟಿದ್ದಾರೆ ಅನಿಸುತ್ತದೆ. ಪೃಥ್ವಿಅಂಬರ್ ‘ದಿಯಾ’ದಲ್ಲಿ ನಟನೆ ಸೂಪರ್. ಅವರಿಗೆ ಭವಿಷ್ಯವಿದೆ. ಪ್ರಿಯಾಂಕ ಒಳ್ಳೆಯ ಕಲಾವಿದೆ ಕಲಿಯುವುದು ಸಾಕಷ್ಟು ಇದೆ ಎಂದರು

ಪ್ರಿಯಾಂಕ ಮನೇಲಿ ಬೈಯುತ್ತಾರೆ. ಆಕೆ ಅದ್ಬುತ ಕಲಾವಿದೆ. ಅವರಿಂದ ಇನ್ನು ಸಾಕಷ್ಟು ಕಲಿಯುವುದಿದೆ ಎಂದು ನಗಿಸುತ್ತಲೇ ಪ್ರಿಯಾಂಕ ಉಪೇಂದ್ರ ಕಾಲೆಳೆದರು

ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಶೂಟಿಂಗ್ ಮೊದಲೇ ಸ್ಕ್ರಿಪ್ಟ್ ರೀಡಿಂಗ್, ವರ್ಕ್‍ಶಾಪ್ ಮಾಡಿ ತುಂಬಾ ಪರ್ಫೆಕ್ಟ್ ಆಗಿ ಕೆಲಸ ಮಾಡಿಸಿದ್ದಾರೆ. ಡಿಸೆಂಬರ್ 14 ನಮ್ಮ ಮದುವೆ ವಾರ್ಷಿಕೋತ್ಸವ ಇದೆ. ಆ ಸಂಭ್ರಮಕ್ಕೆ ಮುನ್ನದಿನ ಚಿತ್ರ ತೆರೆ ಕಾಣುತ್ತಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬನ್ನಿ ಎಂದರು

ನಟ ಪೃಥ್ವಿ ಅಂಬಾರ್ ಮಾತನಾಡಿ ‘ದಿಯಾ’ ಆದಮೇಲೆ ಬಂದ ಅವಕಾಶ ಇದಾಗಿದೆ. ಮೇಡಂ ನನ್ನ ಜತೆಗೆ ಅಭಿನಯಿಸುತ್ತಾರೆಂದು ತಿಳಿದು ಭಯ ಆಗಿತ್ತು. ಆದರೆ ಅವರು ಮೊದಲ ದಿನದಂದೇ ಅದನ್ನು ಹೋಗಲಾಡಿಸಿದರು. ನಮ್ಮ ಸಿನಿಮಾಕ್ಕೆ ಹರಸಲು ಉಪೇಂದ್ರ ಬಂದಿದ್ದಾರೆ. ಇದಕ್ಕಿಂತ ಭಾಗ್ಯ ಇನ್ನೇನು ಬೇಕು. ಮೇಡಂ ಹುಟ್ಟುಹಬ್ಬದಂದೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವುದು ಸಂತಸವಾಗಿದೆ ಎಂದರು

ತಾರಾಗಣದಲ್ಲಿ ಲಾಸ್ಯನಾಗರಾಜ್, ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಾಂತೇಶ್ ಮುಂತಾದವರು ನಟಿಸಿದ್ದಾರೆ. ಸಂಗೀತ ನೊಬಿನ್‍ಪೌಲ್ ಅವರದಾಗಿದೆ. ಸಾಬು ಅಲೋಶಿಯಸ್ ಮತ್ತು ಅರುಣ್‍ಕುಮಾರ್.ಎಂ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಬಿಜಿ ಅರುಣ್, ಕಿಶೋರ್ ನರಸಿಂಹಯ್ಯ, ಪುನೀತ್.ಹೆಚ್ ಮತ್ತು ಜೊನಾತನ್ ಅಗಸ್ಟಿನ್ ಬಂಡವಾಳ ಹೂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin