Producer Ashwini Puneeth Rajkumar released the trailer of the movie "Kubusa".

“ಕುಬುಸ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ - CineNewsKannada.com

“ಕುಬುಸ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳು ಬರುತ್ತಿವೆ. ಕೆಲವು ಸಿನಿಮಾಗಳು ಟೈಟಲ್ ನಿಂದ ಗಮನ ಸೆಳೆಯೋಕೆ ಶುರುಮಾಡಿವೆ. ಸಿನಿಮಾ ಕಂಟೆಂಟ್ ಕೂಡ ಗಮನ ಸೆಳೆಯುತ್ತವೆ. ಇಂತಹ ಸಿನಿಮಾಗಳಲ್ಲಿ ‘ಕುಬುಸ ‘ ಕೂಡ ಒಂದು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ‘ಕುಬುಸ ‘ ಟ್ರೈಲರ್ ಅನಾವರಣ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಡಾ. ಮಂಜಮ್ಮ ಜೋಗತಿ ಹೊಸಪೇಟೆಯ ಸಮಾಜ ಸೇವಕಿ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಹೋಂ ಆಫ್ ಹೋಪ್ ಸಂಸ್ಥಾಪಕರಾದ ಆಟೋರಾಜ್ ಡ್ಯಾನ್ಸ್ ಹರಿಪ್ರಸಾದ್, ಕೃಷ್ಣ ರಿತ್ತಿ ,ಯೂಸುಫ್ ,ಇಮ್ತಿಯಾಜ್, ರಾಜು ಉಪ್ಪರ್, ನಂದೀಶ ಇತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಒಬ್ಬ ಮಹಿಳೆ ನಿರ್ಮಾಪಕರಾಗಿ ಉತ್ತಮ ಚಲನಚಿತ್ರ ಕಷ್ಟಪಟ್ಟು ನಿರ್ಮಿಸಿದ್ದಾರೆ ನಾವೆಲ್ಲರೂ ಅವರಿಗೆ ಪ್ರೋತ್ಸಾಹಿಸುವುದರ ಮೂಲಕ ಅವರಿಗೆ ಮತ್ತಷ್ಟು ಬಂದಂತಾಗುವುದು ಯಾವತ್ತಿಗೂ ಕಲಾವಿದರಿಗೆ ಬೆಂಬಲವಾಗಿ ಇರುತ್ತೇನೆಂದು ಅಪ್ಪು ಅಭಿಮಾನಿಗಳಾದ ಯೂತ್ ಐಕಾನ್ ಎಂದು ಹೆಸರು ಪಡೆದಿರುವ ಸಮಾಜ ಸೇವಕ ಶ್ರೀಯುತ ಸಿದ್ದಾರ್ಥ್ ಸಿಂಗ್ ಅಪ್ಪು ಆದರ್ಶಗಳನ್ನು ಪಾಲಿಸಿಕೊಂಡು ಬರುವಂತೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತ ಈ ಚಲನಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು

ನಾಯಕ ನಟರಾಜ್ ಎಸ್ ಭಟ್ ಮಾತನಾಡಿ, ಸಿನಿಮಾದ ಆಮಂತ್ರಣ ಹಾಡುಗಳು ಟೀಚರ್, ಟ್ರೈಲರ್ ಇನ್ನಷ್ಟು ಇನ್ವಿಟೇಶನ್ ಎಂದು ಕೊಟ್ಟಿದ್ದೇವೆ. ತುಂಬಾ ರೂಟ್‍ಇಂದ ಬಂದ ಕಾನ್ಸೆಪ್ಟ್ ಇದು. ಇಂತಹ ಚಲನಚಿತ್ರ ನಿರ್ಮಾಣ ಮಾಡಲು ವಿ ಶೋಭಾ ಆದಿ ನಾರಾಯಣರವರಂತಹ ಒಳ್ಳೆಯ ವ್ಯಕ್ತಿ ಮತ್ತೆ ಸಿಗುವುದಿಲ್ಲ. ಈ ರೀತಿ ಚಿತ್ರಗಳು ಗೆಲ್ಲಬೇಕು ಈ ಸಿನಿಮಾ ಗೆದ್ದಾಗ ನಿರ್ಮಾಪಕರು ಮತ್ತೆ ಸಿನಿಮಾ ಮಾಡಲು ಮುಂದಾಗುತ್ತಾರೆ. ಇಡೀ ತಂಡ ಈ ಚಿತ್ರಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ .ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಸಹಕಾರ ಕುಬುಸ ಸಿನಿಮಾ ಮೇಲೆ ಇರಲಿ ಎಂದರು.

ನಿರ್ದೇಶಕ ರಘುರಾಮ ಚರಣ್ ಮಾತನಾಡಿ ಪುಟ್ಟ ಕನಸು ದೊಡ್ಡದಾಗುತ್ತಾ ಬಂತು, ಅದು ಈಗ ಸಿನಿಮಾ ರೂಪತಾಳಿದೆ. ಇದು ಯಾವ ಜಾನರ್ ಎಂದು ಹೇಳಲು ಆಗುವುದಿಲ್ಲ . ಕಥೆ ಬರೆಯುವಾಗ ಏನು ವಿಜ್ವಲ್ ಬಂತು ಅದನ್ನು ಶೂಟ್ ಮಾಡಿದ್ದೇವೆ. 1960ರ ಕಾಲಘಟ್ಟದಲ್ಲಿ ಬರುವ ಕಥೆ ಇದು. ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ ಎಂದು ಮಾಹಿತಿ ನೀಡಿದರು.

ವಿ.ಶೋಭಾ ಆದಿನಾರಾಯಣವರ ಮಾತನಾಡಿ, ಕುಬುಸ ಚಲನಚಿತ್ರದಲ್ಲಿ ಹಳ್ಳಿ ಸೊಗಡಿನ ಚಿತ್ರಕಥೆಯಾಗಿದ್ದು ಈ ಚಿತ್ರದಲ್ಲಿ ನನಗೆ ತುಂಬಾ ಅನುಭವವಾಗಿದ್ದು, ಜನರ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುತ್ತೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಇದೇ ತಿಂಗಳು ಜುಲೈ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದರು

ಜನಪ್ರಿಯ ಲೇಖಕ ಕುಂ. ವೀರಭದ್ರಪ್ಪ ಕಥೆ ಆಧಾರಿಸಿದ ಸಿನಿಮಾ ‘ಕುಬುಸ’ ಬಿಡುಗಡೆಗೆ ರೆಡಿಯಾಗಿದೆ. ರಘುರಾಮ್ ಚರಣ್ ಹೂವಿನಹಡಗಲಿ ಚಿತ್ರ ನಿರ್ದೇಶಿಸಿದ್ದಾರೆ. ಆರ್ ಚಂದ್ರು ಗರಡಿಯಲ್ಲಿ ಪಳಗಿರುವ ರಘು ರಾಮ್ ಚರಣ್ ಹೂವಿನಹಡಗಲಿರ ನಿರ್ದೇಶನದ ಮೊದಲ ಸಿನಿಮಾ. ನಿರ್ದೇಶಕರಾದ ಟಿ.ಎಸ್ ನಾಗಾಭರಣ, ಪ್ರೇಮ್, ಸತ್ಯಪ್ರಕಾಶ್, ನಿರ್ದೇಶನದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕಲಾವಿದನಾಗಿ ಕೆಲಸ ಮಾಡಿದ್ದು ಕುಬುಸ ಅವರೇ ನಿರ್ದೇಶಿಸಿದ ಮೊದಲ ಸಿನಿಮಾ.

ತಾಯಿ – ಮಗನ ಸೆಂಟಿಮೆಂಟ್ ಸಿನಿಮಾವೇ ಕುಬುಸ. ಈ ಸಿನಿಮಾದಲ್ಲಿ ರಾಮ ರಾಮ ರೇ ಖ್ಯಾತಿಯ ನಟರಾಜ್ ಎಸ್ ಭಟ್, ಮಂಜು ಆರ್ಯ ಮೈಸೂರ್, ರಂಗಭೂಮಿ ಕಲಾವಿದೆ ಹನುಮಕ್ಕ, ಮರಿಯಮ್ಮನಹಳ್ಳಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಅಮ್ಮ ಕುಬುಸ ಸಿನಿಮಾದ ಪ್ರಮುಖ ಆಕರ್ಷಣೆ ನಟರಾಜ್ ಎಸ್ ಭಟ್ , ಚಿತ್ರದಲ್ಲಿ ಎರಡು ಸೇಡ್ ನಲ್ಲಿ ನಡೆಸಿದ್ದು, ಎರಡನೇ ನಾಯಕನಾಗಿ ಒಂದು ಸರಳ ಪ್ರೇಮಕಥೆ, ಪಟಾಕಿ, ಖ್ಯಾತಿಯ ನಾಯಕ ನಟನಾಗಿ ಮೈಸೂರಿನ ಮಂಜು ಆರ್ಯ, ಅನಿಕಾ ರಮ್ಯ, ಮಹಾಲಕ್ಷ್ಮಿ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ.

ಕುಬುಸ ಸಿನಿಮಾದ ಮೂಲ ಕತೆಯಲ್ಲಿ ಇರುವಂತೆ ಬಳ್ಳಾರಿಯ ಭಾಷಾ ಸೊಗಡನ್ನು ಕಾಣಬಹುದು. ಇದು ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ,ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿವೆ . ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ ಚಿತ್ರಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮ ಎ ಕ್ಯಾಮರಾ, ಕುಬುಸ ಸಿನಿಮಾದ ಎಲ್ಲ ತಾಂತ್ರಿಕ ವರ್ಗದವರು, ಶಿವಮೂರ್ತಿ ದೋಣಿಮಲೆ ಸಹ ನಿರ್ದೇಶನ ಚಿತ್ರಕ್ಕಿದೆ. ಕುಬುಸ ಸಿನಿಮಾಗೆ ಶ್ರೀಮತಿ ವಿ ಶೋಭಾ ಆದಿನಾರಾಯಣ ಚೊಚ್ಚಲ ನಿರ್ಮಾಣದ ಚಲನಚಿತ್ರವಾಗಿದೆ. ವಿ ಶೋಭಾ ಸಿನಿಮಾಸ್ ಬ್ಯಾನರ್ ನಡಿ ಕುಬುಸ ಚಿತ್ರ ನಿರ್ಮಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin