"Rave Party" Filming Wraps Up; Released in August

ರೇವ್ ಪಾರ್ಟಿ ಚಿತ್ರೀಕರಣ ಮುಕ್ತಾಯ; ಆಗಸ್ಟ್ ನಲ್ಲಿ ಬಿಡುಗಡೆ - CineNewsKannada.com

ರೇವ್ ಪಾರ್ಟಿ ಚಿತ್ರೀಕರಣ ಮುಕ್ತಾಯ; ಆಗಸ್ಟ್ ನಲ್ಲಿ ಬಿಡುಗಡೆ

ರಾಜು ಬೋನಗಾನಿ ನಿರ್ದೇಶನದ ವಿಭಿನ್ನ ಕಥಾಹಂದರದ ‘ರೇವ್ ಪಾರ್ಟಿ’ ಚಿತ್ರದ ಚಿತ್ರೀಕರಣವು ಯಶಸ್ವಿಯಾಗಿ ಮುಗಿದಿದ್ದು, ಚಿತ್ರವು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ.


ಬೋನಗಾನಿ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ರಾಜು ಬೋನಗಾನಿ ನಿರ್ಮಿಸುತ್ತಿರುವ ‘ರೇವ್ ಪಾರ್ಟಿ’ ಚಿತ್ರದಲ್ಲಿ ಕ್ರಿಶ್ ಸಿದ್ದಿಪಲ್ಲಿ, ರಿತಿಕಾ ಚರ್ಕವರ್ತಿ, ಐಶ್ವರ್ಯಾ ಗೌಡ, ಸುಚೇಂದ್ರ ಪ್ರಸಾದ್, ತಾರಕ್ ಪೊನ್ನಪ್ಪ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಉಡುಪಿಯಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.


ಈ ಚಿತ್ರಕ್ಕೆ ರಾಜು ಬೋನಗಾನಿ ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ.ಯಶಸ್ವಿಯಾಗಿ ಚಿತ್ರೀಕರಣ ಮುಕ್ತಾಯವಾಗಲು ಸಹಕರಿಸಿದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ರಾಜು ಬೋನಗಾನಿ ಧನ್ಯವಾದ ತಿಳಿಸಿದ್ದಾರೆ.

ಸಾಮಾನ್ಯವಾಗಿ ರೇವ್ ಪಾರ್ಟಿಗಳು ಬೆಂಗಳೂರು, ಉಡುಪಿ ಮತ್ತು ಗೋವಾದಲ್ಲಿ ನಡೆಯುತ್ತವೆ. ಈ ಪಾರ್ಟಿಗಳು ಹೇಗೆ ನಡೆಯುತ್ತವೆ? ಅದರ ಹಿಂದೆ ಯಾರೆಲ್ಲಾ ಇರುತ್ತಾರೆ? ಈ ಪಾರ್ಟಿಗಳು ಯುವ ಜನತೆಯ ಮೇಲೆ ಏನೆಲ್ಲಾ ದುಷ್ಪರಿಣಾಮಗಳು ಬೀರುತ್ತವೆ ಎಂಬ ಅಂಶಗಳನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ. ‘ರೇವ್ ಪಾರ್ಟಿ’ ಚಿತ್ರವು ಇಂದಿನ ಯುವ ಜನತೆಗೆ ಬಹಳ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ನಿರ್ದೇಶಕ ರಾಜು ಬೋನಗಾನಿ.

‘ರೇವ್ ಪಾರ್ಟಿ’ ಚಿತ್ರಕ್ಕೆ ದಿಲೀಪ್ ಭಂಡಾರಿ ಸಂಗೀತ ಸಂಯೋಜಿಸಿದ್ದು, ವೆಂಕಟ್ ಮನ್ನಂ ಛಾಯಾಗ್ರಹಣ ಮಾಡಿದ್ದಾರೆ. ರವಿಕುಮಾರ್ ಅವರ ಸಂಕಲನ, ವೆಂಕಟ್ ಆರೆ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin