ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೊಸ ಚಿತ್ರ “ಟ್ಯಾಕ್ಸಿಕ್” : ಕುತೂಹಲ ಹೆಚ್ಚಳ
ಕೆಜಿಎಫ್-2 ಚಿತ್ರದ ನಂತರ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದಿದ್ದೆ. ನಟ ಯಶ್ ಅವರ 19 ನೇ ಚಿತ್ರಕ್ಕೆ “ಟ್ಯಾಕ್ಸಿಕ್” ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಮೂಲಕ ಅಭಿಮಾನಿಗಳಲ್ಲಿ ಕಥೆ ಏನಿರುಬಹುದು ಎನ್ನುವ ಕುತೂಹಲ ಹೆಚ್ಚಳ ಮಾಡಲಾಗಿದೆ.
ಕೆ. ವೆಂಕಟ ನಾರಾಯಣ- ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ “ಟ್ಯಾಕ್ಸಿಕ್” ಚಿತ್ರಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದು ಚಿತ್ರ 2025ರ ಏಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ ಎನ್ನುವ ದಿನಾಂಕವನ್ನೂ ಘೋಷಿಸಲಾಗಿದೆ.
ಒಂದೂವರೆ ವರ್ಷಗಳ ಕಾಲ ತಮ್ಮ ಹೊಸ ಚಿತ್ರದ ಬಗ್ಗೆ ಮೌನ ವಹಿಸಿದ್ದ ನಟ ಯಶ್ ದೊಡ್ಡ ಮಟ್ಟದಲ್ಲಿ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದ್ದಾರೆ. ಟಾಕ್ಸಿಕ್ – ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಎನ್ನುವ ಅಡಿ ಬರಹವಿದೆ
ಈ ಚಿತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಿರ್ದೇಶಕಿ ಗೀತು ಮೋಹನ್‍ದಾಸ್ ಮತ್ತು ದೇಶದ ಅತ್ಯಂತ ಪ್ರೀತಿಯ ಸೂಪರ್‍ಸ್ಟಾರ್‍ಗಳಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದ್ದು ಇದರಿಂದ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಚಿತ್ರದ ನಿರ್ಮಾಪಕ ವೆಂಕಟ್ ಕೆ ನಾರಾಯಣ ಪ್ರತಿಕ್ರಿಯೆ ನೀಡಿ “ಇಲ್ಲಿಯವರೆಗಿನ ನಮ್ಮ ಮಹತ್ವಾಕಾಂಕ್ಷೆಯ ಯೋಜನೆಗೆ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಯಶ್ ಮತ್ತು ಗೀತು ಮೋಹನ್ ದಾಸ್ ಜೋಡಿ ಮೋಡಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ನಿರ್ದೇಶಕ ಗೀತು ಮೋಹನ್‍ದಾಸ್ ಪ್ರತಿಕ್ರಿಯೆ ನೀಡಿ ಯಾವಾಗಲೂ ನನ್ನ ನಿರೂಪಣೆಯ ಶೈಲಿಯಲ್ಲಿ ಪ್ರಯೋಗ ಮಾಡಿದ್ದೇನೆ. ಲೈಯರ್ಸ್ ಡೈಸ್ ಮತ್ತು ಮೂಥೋನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಚೆನ್ನಾಗಿ ಸ್ವೀಕರಿಸಲ್ಪಟ್ಟಿದ್ದರೂ, ದೇಶದಲ್ಲಿ ನನ್ನದೇ ಆದ ಪ್ರೇಕ್ಷಕರನ್ನು ಹುಡುಕಲು ಯಾವಾಗಲೂ ಹಂಬಲಿಸುತ್ತೇನೆ. ಆ ಚಿಂತನೆಯಿಂದಲೇ ಈ ಯೋಜನೆ ಹುಟ್ಟಿಕೊಂಡಿದೆ. ಈ ಚಿತ್ರ ಎರಡು ವಿರುದ್ಧ ಪ್ರಪಂಚಗಳ ಸಮ್ಮಿಲನವಾಗಿದೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ
ನಟ ಯಶ್ ನಾನು ಕಂಡ ಅತ್ಯಂತ ಅದ್ಭುತ ಮನಸ್ಸಿನವರಲ್ಲಿ ಒಬ್ಬರು ಮತ್ತು ನಮ್ಮ ತಂಡ ಈ ಮಾಂತ್ರಿಕ ನಾಯಕನ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದಿದ್ಧಾರೆ
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ – ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್, ಗೀತು ಮೋಹನ್‍ದಾಸ್ ಬರೆದು ನಿರ್ದೇಶಿಸಿದ್ದಾರೆ, ಕೆವಿಎನ್ ಪೆÇ್ರಡಕ್ಷನ್ಸ್ ಮತ್ತು ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ ನಿರ್ಮಾಣ ಮಾಡಲಿದೆ. ಚಿತ್ರ 2025 ರ ಏಪ್ರಿಲ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.