"Salar- Seas Fire" is a hit on OTT even after a year

ವರ್ಷ ಕಳೆದರೂ ಒಟಿಟಿಯಲ್ಲಿ “ಸಲಾರ್- ಸೀಸ್ ಫೈರ್” ಅಬ್ಬರ - CineNewsKannada.com

ವರ್ಷ ಕಳೆದರೂ ಒಟಿಟಿಯಲ್ಲಿ “ಸಲಾರ್- ಸೀಸ್ ಫೈರ್” ಅಬ್ಬರ

ಹೊಂಬಾಳೆ ಫಿಲ್ಮ್ಸ್‍ನ ಆಕ್ಷನ್-ಪ್ಯಾಕ್ಡ್ ಬ್ಲಾಕ್‍ಬಸ್ಟರ್ “ಸಲಾರ್; ಸೀಸ್‍ಫೈರ್” ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 366 ದಿನಗಳಿಂದ ಜಿಯೋ ಹಾಟ್‍ಸ್ಟಾರ್‍ನಲ್ಲಿ (ಹಿಂದೆ ಡಿಸ್ನಿ+ ಹಾಟ್‍ಸ್ಟಾರ್) ಈ ಸಿನಿಮಾ ಟ್ರೆಂಡಿಂಗ್‍ನಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ನಟಿಸಿದ್ದಾರೆ.

ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‍ಗಳಿಂದಲೇ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದ ಈ ಸಿನಿಮಾ, ಜಿಯೋಹಾಟ್‍ಸ್ಟಾರ್‍ನಲ್ಲಿ ಬಿಡುಗಡೆ ಆಗಿ ಭಾನುವಾರಕ್ಕೆ ಸರಿಯಾಗಿ ಒಂದು ವರ್ಷವಾಗಿದೆ. ಅಂದಿನಿಂದಲೂ ಸ್ಟ್ರೀಮಿಂಗ್ ವೇದಿಕೆಯಲ್ಲಿ ಸಲಾರ್ ಸಿನಿಮಾ ತನ್ನ ಪ್ರಾಬಲ್ಯ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಜತೆಗೆ ಸಲಾರ್ ಚಿತ್ರದ ಆಯ್ದ ಕಟ್ಟಾ 366 ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನೂ ನೀಡಿದೆ ಹೊಂಬಾಳೆ ಫಿಲಂಸ್.

ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಹೊಂಬಾಳೆ ಫಿಲಂಸ್, “#ಸಲಾರ್ ಬಿರುಗಾಳಿ ಮುಂದುವರೆದಿದೆ.. ವರ್ಷದ ನಂತರವೂ ಬೆಂಕಿ ಇನ್ನೂ ಉರಿಯುತ್ತಿದೆ.. ಮುಂದಿನ ಅಧ್ಯಾಯ ತೆರೆದುಕೊಳ್ಳುವವರೆಗೆ… ಸಲಾರ್ ಚೈತನ್ಯವನ್ನು ಜೀವಂತವಾಗಿರಿಸಿಕೊಳ್ಳಿ ಎಂದಿದೆ.

ನಟ ಪ್ರಭಾಸ್ ಮಾತನಾಡಿ ” ಜಿಯೋ ಹಾಟ್‍ಸ್ಟಾರ್‍ನಲ್ಲಿ ಸಲಾರ್‍ಗೆ ನೀವು ತೋರಿದ ಪ್ರೀತಿ ಖುಷಿ ನೀಡಿದೆ. ಕಾನ್ಸಾರ್‍ಗೆ ಶೀಘ್ರದಲ್ಲಿ ಮತ್ತೆ ಕಾಲಿಡೋಣ” ದಂತಕಥೆ ಮುಂದುವರಿಯುತ್ತದೆ. ಆಕ್ಷನ್ ತೀವ್ರಗೊಳ್ಳುತ್ತದೆ ಮತ್ತು ಸಾಹಸಗಾಥೆ ಇನ್ನೂ ಹೆಚ್ಚಿನ ಎತ್ತರವನ್ನು ತಲುಪುತ್ತದೆ. ಮುಂದಿನ ಅಧ್ಯಾಯ ಹಿಂದೆಂದೂ ಕಾಣದ ಮಿತಿಗಳನ್ನು ಮೀರಿದ ಸಿನಿಮೀಯ ಅನುಭವ ನೀಡುತ್ತದೆ ಎಂದಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin