Sashidhar Action Cut for Malayalam Movie: Manjummel Boys Actor Srinath Basi Lead

ಮಲೆಯಾಳಂ ಚಿತ್ರಕ್ಕೆ ಶಶಿಧರ್ ಆಕ್ಷನ್ ಕಟ್: ‘ಮಂಜುಮ್ಮೆಲ್ ಬಾಯ್ಸ್’ ನಟ ಶ್ರೀನಾಥ್ ಬಾಸಿ ನಾಯಕ - CineNewsKannada.com

ಮಲೆಯಾಳಂ ಚಿತ್ರಕ್ಕೆ ಶಶಿಧರ್ ಆಕ್ಷನ್ ಕಟ್: ‘ಮಂಜುಮ್ಮೆಲ್ ಬಾಯ್ಸ್’ ನಟ ಶ್ರೀನಾಥ್ ಬಾಸಿ ನಾಯಕ

ಮಂಜುಮ್ಮೆಲ್ ಬಾಯ್ಸ್ ಚಿತ್ರ ಮಲೆಯಾಳಂ ಭಾಷೆಯ ಮಾಲಿವುಡ್ ಇಂಡಸ್ಟ್ರಿಗೆ ಈ ವರ್ಷ ಸಿಕ್ಕ ಸೂಪರ್ ಡೂಪರ್ ಹಿಟ್ ಸಿನಿಮಾ.. ಭಾಷೆ ಗಡಿಯಿಲ್ಲದೆ ವಿಶ್ವದಾದ್ಯಂತ ಪ್ರೇಕ್ಷಕರು ಸಿನಿಮಾವನ್ನ ನೋಡಿ ಇಷ್ಟಪಡ್ತಿದ್ದಾರೆ.. ಪಾತ್ರದಾರಿಗಳ ಬಗ್ಗೆ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಚಿಚೂ ಮಾತನಾಡ್ತಿದ್ದಾರೆ..

ಡಾಟರ್ ಆಫ್ ಪಾರ್ವತಮ್ಮ, ವೀರಂ, ಶುಗರ್ ಲೆಸ್ ಚಿತ್ರ ನಿರ್ಮಾಣ ಮಾಡಿದ್ದ ಶಶಿಧರ, ಶುಗರ್ ಲೆಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಮಲಯಾಳಂನಲ್ಲಿ ಮೊದಲ ಚಿತ್ರ ನಿರ್ದೇಶನ ಮಾಡಲು ಹೊರಟಿದ್ದಾರೆ.

ಮಂಜುಮ್ಮೆಲ್ ಬಾಯ್ಸ್ ಚಿತ್ರದ ಪಾತ್ರದಾರಿ ಶ್ರೀನಾಥ್ ಭಾಸಿ ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಮಾಲಿವುಡ್ ಸ್ಟಾರ್ ನಟ ಮತ್ತು ಕನ್ನಡದ ನಿರ್ಮಾಪಕ ,ನಿರ್ದೇಶಕ ಶಶೀಧರ ಕೆ ಎಮ್ ನಿರ್ದೇಶನ ಮಾಡ್ತಿರೋ ಚೊಚ್ಚಲ ಮಲಯಾಳಂ ಸಿನಿಮಾ “ಸಿಬಿಲ್ ಸ್ಕೋರ್” ನಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

ಈ ಸಿನಿಮಾವನ್ನು ಕನ್ನಡದ ನಿರ್ದೇಶಕ ಡೈರೆಕ್ಟ್ ಮಾಡ್ತಿರೋ ಕಾರಣ, ಹಾಗೆ ಮಲಯಾಳಂ ಸಿನಿಮಾ ಆಗಿರೋದ್ರಿಂದ ಈ ಸಿನಿಮಾದಲ್ಲಿ ಟೆಕ್ನಿಶಿಯನ್ಸ್ ಆರ್ಟಿಸ್ರ್ಟ್ ಕನ್ನಡ ಹಾಗೂ ಮಲಯಾಳಂ ನವರಾಗಿರುತ್ತಾರೆ.. ಸೋಹನ್ ಸೀನುಲಾಲ್, ದೀಪಕ್ ಪ್ರಿನ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ದಿ ಎಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಪ್ರೊಡಕ್ಷನ್ಸ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರ್ತಿರೋ ಸಿನಿಮಾಗೆ ವಿವೇಕ್ ಶ್ರೀಕಂಠಯ್ಯ ಬಂಡವಾಳ ಹೂಡ್ತಿದ್ದಾರೆ. ಕೋ ಪ್ರೊಡ್ಯೂಸರ್ ಆಗಿ ವಿಕ್ರಮ್, ಲೈನ್ ಪ್ರೊಡ್ಯೂಸರ್ ಆಗಿ ದೀಪು ಕರುಣಾಕರಣ್ ಎಕ್ಸೆಕ್ಯೂಟೀವ್ ಪ್ರೊಡ್ಯೂಸರ್ ಆಗಿ ಶಾಜಿ ಫ್ರಾನ್ಸಿಸ್ ಕೈ ಜೋಡಿಸಿದ್ದಾರೆ.

ಸಿನಿಮಾದ ಛಾಯಾಗ್ರಾಹಕ ಪ್ರದೀಪ್ ನಾಯರ್, ಡೈಲಾಗ್ಸ್ ಅರ್ಜುನ್ ಟಿ ಸತ್ಯನ್, ಎಡಿಟರ್ ಸೋಬಿನ್ ಕೆ ಸೋಮನ್. ಇನ್ನೂ ಕ್ರಿಯೇಟಿವ್ ಹೆಡ್ ಆಗಿ ಶರತ್ ವಿನಾಯಕ್ ಸಿನಿಮಾಗೆ ಜೊತೆಯಾಗಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin