"Satyam Shivam" directed by Yathiraj releases on February 2.

ಫೆಬ್ರವರಿ 2 ರಂದು ಯತಿರಾಜ್ ನಿರ್ದೇಶನದ “ಸತ್ಯಂ ಶಿವಂ” ಬಿಡುಗಡೆ - CineNewsKannada.com

ಫೆಬ್ರವರಿ 2 ರಂದು ಯತಿರಾಜ್ ನಿರ್ದೇಶನದ “ಸತ್ಯಂ ಶಿವಂ” ಬಿಡುಗಡೆ

ಪತ್ರಕರ್ತ ಹಾಗೂ ಕಲಾವಿದ ಯತಿರಾಜ್ ನಿರ್ದೇಶನದ “ಸತ್ಯಂ ಶಿವಂ” ಚಿತ್ರ ಫೆಬ್ರವರಿ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಈ ಚಿತ್ರ ಈಗಾಗಲೇ ಜನಪ್ರಿಯವಾಗಿದೆ.

ನಿರ್ದೇಶಕ ಯತಿರಾಜ್ , ವಿಭಿನ್ನ ಕಥಾಹಂದರ ಹೊಂದಿರುವ “ಸತ್ಯಂ ಶಿವಂ” ಚಿತ್ರ ಫೆಬ್ರವರಿ 2ರಂದು ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರದ ನಿರ್ಮಾಪಕ ಬುಲೆಟ್ ರಾಜು ಅವರೆ ನಾಯನಾಗೂ ನಟಿಸಿದ್ದಾರೆ. ಸಂಜನ ನಾಯ್ಡು ಈ ಚಿತ್ರದ ನಾಯಕಿ. ಮೈಕೋ ನಾಗರಾಜ್, ಬಾಲ ರಾಜವಾಡಿ, ಅರವಿಂದ್ ರಾವ್, ಸಂಗೀತ, ಸುಂದರಶ್ರೀ, ತೇಜಸ್ವಿನಿ, ತನುಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಾನು ಕೂಡ ನಟಿಸಿದ್ದೇನೆ. ವಿದ್ಯಾ ನಾಗೇಶ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸಸ್ಪೆನ್ಸ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಫೆಬ್ರವರಿ 2 ರಂದೆ ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೋಡಿ. ಪ್ರೊತ್ಸಾಹ ನೀಡಿ ಎಂದರು.

ನಾನು ಈ ಹಿಂದೆ ಬಿಕ್ಷುಕ ಎಂಬ ಸಿನಿಮಾ ಮಾಡಿದ್ದೆ. ಇದು ಎರಡನೇ ಸಿನಿಮಾ. ಯತಿರಾಜ್ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೆ ಯು,ಎ ಅರ್ಹತಾಪತ್ರ ನೀಡಿದೆ ಎಂದು ತಿಳಿಸಿದ ನಿರ್ಮಾಪಕ ಮತ್ತು ನಾಯಕ ಬುಲೆಟ್ ರಾಜು, ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.

ನಾಯಕಿ ಸಂಜನಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ ಎಂದರು. ಛಾಯಾಗ್ರಾಹಕ ವಿದ್ಯಾ ನಾಗೇಶ್, ಸಹ ನಿರ್ದೇಶಕರಾದ ಅರುಣ್ ಕುಮಾರ್ ಮತ್ತು ಸೋನು ಸಾಗರ , ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು “ಸತ್ಯಂ ಶಿವಂ” ಬಗ್ಗೆ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin