Shine Shetty - Ankita Amar starrer "Just Married" wraps up

ಶೈನ್ ಶೆಟ್ಟಿ – ಅಂಕಿತ ಅಮರ್ ಅಭಿನಯ ದ “ಜಸ್ಟ್ ಮ್ಯಾರೀಡ್” ಚಿತ್ರೀಕರಣ ಮುಕ್ತಾಯ - CineNewsKannada.com

ಶೈನ್ ಶೆಟ್ಟಿ – ಅಂಕಿತ ಅಮರ್ ಅಭಿನಯ ದ “ಜಸ್ಟ್ ಮ್ಯಾರೀಡ್” ಚಿತ್ರೀಕರಣ ಮುಕ್ತಾಯ

ಸಂಗೀತ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸುತ್ತಿರುವ, ಸಿ.ಆರ್.ಬಾಬಿ ಅವರ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಕೆಲಸಗಳು ಬಿರುಸಿನಿಂದ ಸಾಗಿದೆ.

ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿ ಜನಮನಸೂರೆಗೊಂಡಿರುವ ಅಜನೀಶ್ ಲೋಕನಾಥ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಸಿ.ಆರ್.ಬಾಬಿ ಅವರು ಚಿತ್ರ ನಿರ್ಮಾಣಕ್ಕೆ ಅಜನೀಶ್ ಅವರಿಗೆ ಸಾಥ್ ನೀಡಿದ್ದಾರೆ. ಸಿ.ಆರ್.ಬಾಬಿ ಅವರೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಷ್ಟು ದಿವಸ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಿ.ಆರ್ ಬಾಬಿ ಅವರು ಈ ಚಿತ್ರದ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಚಿತ್ರದಲ್ಲಿ ಆರು ಸುಮಧುರ ಹಾಡುಗಳಿದ್ದು ಅಜನೀಶ್ ಲೋಕನಾಥ್ ಅವರೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಪೈಕಿ ಪ್ರಮೋದ್ ಮರವಂತೆ ಅವರು ಬರೆದು, ವಿಜಯ್ ಪ್ರಕಾಶ್ ಹಾಡಿರುವ “ಅಭಿಮಾನಿಯಾಗಿ ಹೋದೆ” ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ.

“ಜಸ್ಟ್ ಮ್ಯಾರೀಡ್” ಪ್ರೇಮಕಥೆಯ ಚಿತ್ರವಾಗಿದ್ದರೂ, ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಸಿ.ಆರ್ ಬಾಬಿ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಸಿ.ಆರ್ ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು.

ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್, ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ “ಜಸ್ಟ್ ಮ್ಯಾರೀಡ್” ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ಮತ್ತು ಧನಂಜಯ್ ಬರೆದಿದ್ದಾರೆ.

ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin