Shivanna celebrates 40 years in the film industry: Chamber of Commerce honors couple
ಚಿತ್ರರಂಗದಲ್ಲಿ ಶಿವಣ್ಣ 40 ವರ್ಷ: ದಂಪತಿಗೆ ವಾಣಿಜ್ಯ ಮಂಡಳಿ ಸನ್ಮಾನ
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಕನ್ನಡ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ನಲವತ್ತು ವರ್ಷಗಳಾಗಿದೆ.ಜೊತೆಗೆ ಇತ್ತೀಚೆಗಷ್ಟೇ ಗೀತಾ ಶಿವರಾಜಕುಮಾರ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ದಂಪತಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗಿದೆ.
ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ, ಉಪಾಧ್ಯಕ್ಷರಾದ ಶಿಲ್ಪಾಶ್ರೀನಿವಾಸ್, ಗೌರವ ಕಾರ್ಯದರ್ಶಿ ಡಿ.ಕೆ.ರಾಮಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

