ಶಿವಣ್ಣನ 125ನೇ ಚಿತ್ರ ವೇದ ವಿಭಿನ್ನ ಅವತಾರದಲ್ಲಿ ಮೋಡಿ
ಆನಂದ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ ಶಿವರಾಜ್ ಕುಮಾರ್ ಅವರಿಗೆ “ವೇದ” 125 ನೇ ಚಿತ್ರ.37 ವರ್ಷದ ಚಿತ್ರ ಜೀವನಲ್ಲಿ ಸೋಲು ಗೆಲುವು ಎರಡೂ ಕಂಡಿದ್ದಾರೆ.ಮೇಲಾಗಿ ಅಭಿಮಾನಿಗಳ ಪ್ರೀತಿ ಹೆಚ್ಚಾಗಿ ಕಂಡಿದ್ದಾರೆ.
” ವೇದ” ಚಿತ್ರವನ್ನು ಗೀತಾ ಶಿವರಾಜ್ ಕುಮಾರ್ ಅವರು ಗೀತಾ ಪಿಕ್ಚರ್ ಅಡಿ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಚಿತ್ರ ಇದು.
ಚಿತ್ರದ ಕುರಿತು ಮಾಹಿತಿ ನೀಡಿದ ಶಿವಣ್ಣ, 125 ನೇ ಸಿನಿಮಾ, 200 ಅಷ್ಟೇ ಅಲ್ಲ ಸಾವಿರ ಸಿನಿಮಾ ಮಾಡುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಆನಂದ್ ಚಿತ್ರದಿಂದ ಆರಂಭವಾದ ವೇದ ಚಿತ್ರದವರೆಗೆ “ಆನಂದ ವೇದ” ಎಂದು ತಮ್ಮದೇ ದಾಟಿಯಲ್ಲಿ ಮಾಹಿತಿ ಹಂಚಿಕೊಂಡರು.
ಈ ಮಟ್ಟಕ್ಕೆ ಬರಲು ಪ್ರತಿಯೊಬ್ಬ ನಿರ್ಮಾಪಕ, ನಿರ್ದೇಶಕ ಸಹಕಲಾವಿದರು ಕಾರಣ,ಎಲ್ಲರ ಪ್ರೀತಿ ಪೆÇ್ರೀತ್ಸಾಹದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ವೇದ ಅಭಿಮಾನಿಗಳಿಗೆ ನಿರಾಸೆ ಮೂಡಿಸಲ್ಲ. ಒಳ್ಳೆಯ ಚಿತ್ರವಾಗಲಿದೆ. ಅದಿತಿ, ಶ್ವೇತಾ ಚೆಂಗಪ್ಪ ಸೇರಿ ಸಿಂಹಿಣಿಯರು.
ವೇದ ಒಂದು ಗ್ರಂಥ, ಪ್ರೀತಿ, ಸಂತೋಷ, ಕ್ರೌರ್ಯ,ಆತನ ಬದುಕಲ್ಲಿ ಯಾವ ರೀತಿ ಆಡ್ತಾ ಆಡುತ್ತವೆ .ಕ್ರೌರ್ಯ, ಅದರ ಹಿಂದೆ ಪ್ಲವರ್ ಇಧೆ. ಬಾಡುತ್ತಾ ಬೆಳೆಯುತ್ತಾ ಎನ್ನುವುದು ಚಿತ್ರದ ತಿರುಳು ಎಂದರು.
ನಾರ್ಮಲ್ ವ್ಯಕ್ತಿ ಎರಡು ಹಳ್ಳಿ ನಡುವಿನ ಕಥನ. ಫ್ಯಾಮಿಲಿ ವಿಷಯ ಸೇರಿ ಹಲವು ಮಿಶ್ರಣ ಚಿತ್ರದಲ್ಲಿದೆ ಎಂದು ಮಾಹಿತಿ ಹಂಚಿಕೊಂಡರು
ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್, ಇಡೀ ತಂಡ ಸೇರಿ ಒಳ್ಳೆಯ ಚಿತ್ರ ಮಾಡಿದ್ದೇವೆ ಇದೇ ವಾರ ಬಿಡುಗಡೆಯಾಗಲಿದೆ ಹರಸಿ ಹಾರೈಸಿ ಎಂದರು
ನಿರ್ದೇಶಕ ಹರ್ಷ, ಶಿವಣ್ಣನ 125 ನೇ ಚಿತ್ರ ನಿರ್ದೇಶನ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ.ನನ್ನ 10ನೇ ಹಾಗು ಶಿವಣ್ಣ ಜೊತೆ 4 ನೇ ಸಿನಿಮಾ, ಹಳ್ಳಿಯಲ್ಲಿ ನಡೆಯುವ ಸಿನಿಮಾ. 60 ಮತ್ತು 80 ರ ಕಾಲ ಘಟ್ಟವನ್ನು ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.ಬೆಂಗಳೂರು,ಮೈಸೂರು ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ ಎಂದರು.
ಕಾರ್ಯಕಾರಿ ನಿರ್ಮಾಪಕ ಲಕ್ಕಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ನಟಿ ಗಾನವಿ ಲಕ್ಷಣ್ ,ಶ್ವೇತಾ ಚೆಂಗಪ್ಪ ಸೇರಿದಂತೆ ಇಡೀ ತಂಡ ಮಾಹಿತಿ ಹಂಚಿಕೊಂಡಿತು
ಗಾನವಿ ನಾಯಕಿ
ಮಗಳು ಜಾನಕಿ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ನಟಿ ಗಾನವಿ ಲಕ್ಷಣ್ ವೇದ ಚಿತ್ರದಲ್ಲಿ ಪುಷ್ಪ ಪಾತ್ರದ ಮೂಲಕ ಗಮನ ಸೆಳೆಯಲು ಮುಂದಾಗಿದ್ಧಾರೆ.
ಗಾನವಿ ಅವರ ನಟನೆಗೆ ಶಿವಣ್ಣ ಫಿಧಾ ಆಗಿದ್ದು ಕನ್ನಡದಲ್ಲಿ ಮತ್ತಷ್ಟು ಚಿತ್ರಗಳು ಹುಡುಕಿಕೊಂಡು ಬರಲಿವೆ ಎನ್ನುವ ಮಾತುಗಳು ಚಿತ್ರತಂಡದಿಂದ ಕೇಳಿ ಬಂದಿವೆ.