Special screening of "Krishnam Pranaya Sakhi" in Dubai: Fans rave about actor Ganesh's performance

ದುಬೈನಲ್ಲಿ ” ಕೃಷ್ಣಂ ಪ್ರಣಯ ಸಖಿ” ವಿಶೇಷ ಪ್ರದರ್ಶನ : ನಟ ಗಣೇಶ್ ನಟನೆಗೆ ಅಭಿಮಾನಿಗಳು ಫಿದಾ - CineNewsKannada.com

ದುಬೈನಲ್ಲಿ ” ಕೃಷ್ಣಂ ಪ್ರಣಯ ಸಖಿ” ವಿಶೇಷ ಪ್ರದರ್ಶನ : ನಟ ಗಣೇಶ್ ನಟನೆಗೆ ಅಭಿಮಾನಿಗಳು ಫಿದಾ

ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಿಯದ “ಕೃಷ್ಣಂ ಪ್ರಯಣ ಸಖಿ” ಚಿತ್ರ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಈ ನಡುವೆ ದೂರದ ದುಬೈನಲ್ಲಿ ಕನ್ನಡಿಗರು ಚಿತ್ರ ನೋಡಿ ಫಿಧಾ ಆಗಿದ್ದಾರೆ.

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಈ ಯಶಸ್ವಿ ಚಿತ್ರ ಅಬುದಾಬಿ ಹಾಗೂ ದುಬೈನಲ್ಲೂ ಪ್ರದರ್ಶನಗೊಂಡಿದೆ. ಅಲ್ಲಿನ ಕನ್ನಡಿಗರು ಅಪ್ಪಟ ಮನೋರಂಜನೆಯ ಈ ಚಿತ್ರಕ್ಕೆ ಫಿದಾ ಆಗಿದ್ದಾರೆ.

ದುಬೈನಲ್ಲಿ ರಶ್ಮಿ ವೆಂಕಟೇಶ್ , ಸೆಂದಿಲ್ ಮತ್ತು ತಂಡ ಅಲ್ಲಿನ ಕನ್ನಡಿಗರಿಗಾಗಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ನಾಯಕಿ ಮಾಳವಿಕ ನಾಯರ್, ನಟ ರಂಗಾಯಣ ರಘು, ನಿರ್ದೇಶಕ ಶ್ರೀನಿವಾಸರಾಜು, ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ಸೇರಿದಂತೆ ಚಿತ್ರತಂಡದ ಸದಸ್ಯರು ಈ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಸುಮಾರು 750ಕ್ಕೂ ಅಧಿಕ ಕನ್ನಡಿಗರು ಈ ಚಿತ್ರ ನೋಡಿ ಸಂಭ್ರಮಿಸಿದರು. ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದರು.

ಈ ವೇಳೆ ಮಾತನಾಡಿದ ನಟ ಗಣೇಶ್ ಚಿತ್ರಕ್ಕೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ಮನ ತುಂಬಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin