The film "Dheera Bhagat Roy", a story of the struggle for soil, will hit the screens across the state on December 6

ನೆಲದ ಮಣ್ಣಿನ ಹೋರಾಟದ ಕಥೆಯ “ಧೀರ ಭಗತ್ ರಾಯ್” ಚಿತ್ರ ಡಿಸೆಂಬರ್ 6ಕ್ಕೆ ರಾಜ್ಯಾದ್ಯಂತ ತೆರೆಗೆ - CineNewsKannada.com

ನೆಲದ ಮಣ್ಣಿನ ಹೋರಾಟದ ಕಥೆಯ “ಧೀರ ಭಗತ್ ರಾಯ್” ಚಿತ್ರ ಡಿಸೆಂಬರ್ 6ಕ್ಕೆ ರಾಜ್ಯಾದ್ಯಂತ ತೆರೆಗೆ

ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಲವು ಸಾಮಾಜಿಕ ವಿಷಯವನ್ನು ಮುಂದಿಟ್ಟುಕೊಂಡು ಕಟ್ಟಿಕೊಟ್ಟಿರುವ “ಧೀರ ಭಗತ್ ರಾಯ್ ” ಚಿತ್ರ ಡಿಸೆಂಬರ್ 6 ರಂದು ತೆಲುಗಿನ ಪುಷ್ಪ-2 ಚಿತ್ರದ ಎದುರು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಮೂಲಕ ಕನ್ನಡ ನೆಲದಲ್ಲಿ ಕನ್ನಡದ ಉತ್ತಮ ಚಿತ್ರವನ್ನು ಪ್ರೇಕ್ಷಕರು ಕೈಬಿಡುವುದಿಲ್ಲ ಎನ್ನುವ ನಂಬಿಕೆ ಚಿತ್ರತಂಡದ್ದು.

ನಿರ್ದೆಶಕ ಕರ್ಣನ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ರಾಕೇಶ್ ದಳವಾಯಿ ನಾಯಕನಾಗಿ ಕಾಣಿಸಿಕೊಂಡಿದ್ದು ಸುಚರಿತಾ ನಾಯಕಿ. ಹೋರಾಟದ ಹಿನ್ನೆಲೆ ಇರುವ ಚಿತ್ರ ಬಿಡುಗಡೆ ದಿನಾಂಕವನ್ನು ತಂಡ ಪ್ರಕಟಿಸಿತು. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಕರ್ಣನ್ ಮಾತನಾಡಿ ಒಳ್ಳೆಯ ಸಿನಿಮಾ ಮಾಡಿದರೆ ಕನ್ನಡದ ಜನ ಯಾವತ್ತೂ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ. ನಟ ದುನಿಯಾ ವಿಜಯ್ ಚಿತ್ರದ ಕಂಟೆಂಟ್ ನೋಡಿ ಇಷ್ಟ ಪಟ್ಟು ಸಹಕಾರ ನೀಡಿದ್ದಾರೆ. ಚಿತ್ರ ತಮಿಳಿನ ಜೈ ಭೀಮ್ ,ವಿಸಾರಣೈ ನಂತಹ ನೆಲ ಮೂಲದ ಕಥೆ ಒಳಗೊಂಡಿದೆ. ಭೂ ಸುಧಾರಣಾ ಕಾಯ್ದೆ ಬಗ್ಗೆ ಹೇಳಿದ್ದೇವೆ. ಊರಲ್ಲಿ ಭೂ ಪಡೆಯಲು ಏನೆಲ್ಲಾ ಮಾಡ್ತಾರೆ ಎನ್ನಬಹುದು ಚಿತ್ರದ ಕಥೆ.ಕೋರ್ಟ್ ಡ್ರಾಮದ ಕಥೆ. ಎಲ್ಲರಿಗೂಗೂ ಇಷ್ಟವಾಗಲಿದೆಕಾಯ್ದೆ ಕಾನೂನು ಎಲ್ಲರಿಗೂ ಗೊತ್ತಾದಾಗ, ಆಗ ತಪ್ಪು ಮಾಡದೇ ಇರಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾಟೇರ ಚಿತ್ರ ನೆಲ ಮೂಲದ ಕಥೆಯನ್ನು ಚಿತ್ರದ ಮೂಲಕ ತೋರಿಸಲಾಗಿತ್ತು. ಅದರಲ್ಲಿ ಕೆಲ ಗೊಂದಲಗಳೂ ಇದಕ್ಕೆ ಅದಕ್ಕೆ ಧೀರ ಭಗತ್ ರಾಯ್ ಚಿತ್ರ ಉತ್ತರ ನೀಡಲಿದೆ ಎನ್ನುವ ನಂಬಿಕೆ. ನನ್ನೂರಿನಲ್ಲಿ ನಡೆದ ಘಟನೆ ಆಧರಿಸಿ ಕಮರ್ಷಿಯಲ್ ವಿಷಯವನ್ನು ಮುಂದಿಟ್ಡುಕೊಂಡು ಸಿನಿಮಾ ಮಾಡಲಾಗಿದೆ.ಕಂಟೆಂಟ್ ಜೊತೆಗೆ ಸಿನಿಮಾದಲ್ಲಿ ಲವ್, ರೋಮಾನ್ಸ್, ಪ್ರೀತಿ ಐದು ಸಾಹಸ ದೃಶ್ಯಗಳಿವೆ. ಒದೊಂದು ಆಕ್ಷನ್ ಸನ್ನಿವೇಶ್ ಹಿನ್ನೆಲೆ ಇದೆ. ವರ್ಷಕ್ಕೆ ಎರಡು ಸಿನಿಮಾ ಮಾಡುವ ಉದ್ದೇಶ ಚಿತ್ರ ನಿರ್ಮಾಣ ಸಂಸ್ಥೆಗಿದೆ ಚಿತ್ರದಲ್ಲಿ ಬರುವ ಪಾತ್ರಗಳು ಎಲ್ಲರನ್ನೂ ಕಾಡುತ್ತದೆ ಎಂದು ಹೇಳಿಕೊಂಡರು.

ನಟ ರಾಕೇಶ್ ದಳವಾಯಿ ಮಾತನಾಡಿ, ಸಿನಿಮಾ ಮಾಡುತ್ತೇವೆ ಎಂದಾಗಲೇ ಆಶ್ಚರ್ಯ ಚಕಿತನಾಗಿದ್ದೆ. ಮಲೆಗಳಲ್ಲಿ ಮದುಮದುಳು ನಾಟಕದಲ್ಲಿ ನಾಯಿಗುತ್ತಿ ಎನ್ನುವ ಪಾತ್ರ ನೋಡಿ ನಿರ್ಮಾಪಕರು ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟರು. 2014ರಲ್ಲಿ ಬೆಂಗಳೂರಿಗೆ ರಾಷ್ಟ್ರೀಯ ನಾಟಕ ಶಾಲೆ -ಎನ್‍ಎಸ್‍ಡಿ ಬಂದ ಮೊದಲ ತಂಡದ ವಿದ್ಯಾರ್ಥಿಯಾಗಿದ್ದೆ. 10 ವರ್ಷದಲ್ಲಿ 30 ನಾಟಕ, ಬೀದಿ ನಾಟಕದಲ್ಲಿ ನಟಿಸಿದ್ದೇನೆ, ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟಿಸುವ ಆಸೆ ಇತ್ತು.ಮೊದಲ ಸಿನಿಮಾದಲ್ಲಿ ನಾಯಕನಾಗುವ ಆಸೆ ಈಡೇರಿದೆ. ಜನ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಚಿತ್ರದಲ್ಲಿ ವಕೀಲನ ಪಾತ್ರ ಮಾಡಿದ್ದೇನೆ. ಪಾತ್ರಕ್ಕೆ ಅಳವಡಿಸಿಕೊಂಡು ಮಾಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು

ನಾಯಕಿ ಸುಚಾರಿತಾ ಒಳ್ಳೆಯ ಪಾತ್ರ ಸಿಕ್ಕಿದೆ. ಹೊಸಬಳು ತಂಡ ಸಹಕಾರ ನೀಡಿದೆ ಬೆಂಬಲ ಇರಲಿ ಎಂದು ಕೇಳಿಕೊಂಡರು.

ನಿರ್ಮಾಪಕ ಪ್ರವೀಣ್ ಗೌಡ ಮಾತನಾಡಿ ಟ್ರೈಲರ್ ಬಿಡುಗಡೆಯಾದ ನಂತರ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ ಸೇರಿದಂತೆ ಮತ್ರಿತರ ಕಡೆ ಉತ್ತಮ ಪ್ರತಿಕ್ರಿಯೆ ಬಂದಿದೆ ಸಿನಿಮಾ ಗೆಲ್ಲಿಸಿಕೊಳ್ಳಬೇಕು. ಪುಷ್ಪ-2 ಚಿತ್ರದ ಎದುರು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಕಂಟೆಂಟ್ ಬಂದರೆ ಚಿತ್ರ ಗೆಲ್ಲುತ್ತವೆ. ಹೊಸ ತಂಡ ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ. ಶೋಷಿತರು ಸೇರಿದಂತೆ ಎಲ್ಲಾ ಸಮುದಾಯದ ಕಥೆ ಇದೆ. ಸಿನಿಮಾ ನೋಡಿದರೆ ಇತಿಹಾಸದ ಪುಸ್ತಕ ಓದಿದ ಹಾಗೆ ಆಗಲಿದೆ. ಎಷ್ಟು ಕಲೆಕ್ಷನ್ ಆಗುತ್ತೋ ಗೊತ್ತಿಲ್ಲ ಕನ್ನಡ ಸಿನಿಮಾ ಗೆಲ್ಲಿಸಿ.ಕುಟುಂಬದ ಸಮೇತ ನೋಡುವ ಸಿನಿಮಾ. ಪ್ಯಾಮಿಲಿ ಮನರಂಜನೆ ಜೊತೆಗೆ ಸಾಮಾಜಿಕ ವಿಷಯವನ್ನು ಚಿತ್ರದ ಮೂಲಕ ಹಲವು ವಿûಷಯ ಹೇಳಿದ್ದೇವೆ ಎಂದರು

ಹೊಸ ಪ್ರತಿಭೆಗಳು ಬಿಟ್ಟರೆ, ಕಥೆ ಹೇಳುವುದರಲ್ಲಿ, ನಿರ್ಮಾಣದಲ್ಲಿ ರಾಜಿ ಮಾಡಿಕೊಂಡಿಲ್ಲ. ಗುಣಮಟ್ಟ. ಅಂದುಕೊಂಡದಕ್ಕಿಂತ ಹೆಚ್ಚಿನ ಬಂಡವಾಳ ಆಗಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರೆ ಚಿತ್ರ ಹಿಟ್ ಆಗಲಿದೆ ಎಂದರು

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮಾತನಾಡಿ ಸುಮಾರು ಚಿತ್ರಗಳಲ್ಲಿ ನಮ್ಮು ಕಥೆಯನ್ನು ಚಿತ್ರದಲ್ಲಿ ಹೇಳಬೇಕು ಎನ್ನುವ ತುಡಿತವಿದೆ. ಎರಡು ವರ್ಷದಿಂದ ಇಡೀ ತಂಡ ಒಂದೊಂದು ಹಂತದಲ್ಲಿ ಕಾನ್ಫಿಡೆನ್ಸ್ ಜಾಸ್ತಿ ಆಗ್ತಾ ಇದೆ.ನಿರ್ದೇಶಕ ಹೊಸಬರಾದರೂ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹೋರಾಟದ ಕಥೆ.ಸಿನಿಮಾ ಕಂಟೆಂಟ್ ಕಥೆ ಆದರೂ ಕಮರ್ಷಿಯಲ್ ಅಂಶಗಳನ್ಜು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ರೀರೇಕಾರ್ಡಿಂಗ್ ಸವಾಲಿನಿಂದ ಕೂಡಿತ್ತು ಎಂದು ಮಾಹಿತಿ ಹಂಚಿಕೊಂಡರು.

ಹೋರಾಟಗಾರ ಭಾಸ್ಕರ್ ಪ್ರಸಾದ್ ಮಾತನಾಡಿ ತೆಲುಗಿನ ಪುಷ್ಪ-2 ಚಿತ್ರದ ಎದುರಿಗೆ ಬರುತ್ತಿದ್ದೇವೆ, ನಮ್ಮ ಸಿನಿಮಾ ಚಿತ್ರಮಂದಿರ ಸಿಗದಿದ್ದರೆ ಹೋರಾಟ ಮಾಡುವುದು ಖಚಿತ. ಭಾಷೆ ಬೇರೆ ಯಾದರೂ ಕಲೆ ಒಂದೇ, ಇಲ್ಲಿ ಕಲಾವಿದರು ಗೆಲ್ಲಬೇಕು, ಹೀಗಿರುವಾಗ ಪುಷ್ಪ ಚಿತ್ರದ ವಿತರಕರು 100 ಕೋಟಿ ಬಾಚುತ್ತೇವೆ ಎಂದು ದರ್ಪದಿಂದ ಹೇಳುವುದು ಸರಿಯಲ್ಲ, ಪ್ರೀತಿಯಿಂದ 1000 ಕೋಟಿ ಗೆಲ್ಲಲಿ,ಅದನ್ನು ಬಿಟ್ಟು ದರ್ಪದ ಮಾತುಗಳು ಇಲ್ಲಿ ನಡೆಯಲ್ಲ ಎಂದರು

ವಕೀಲ ಮತ್ತು ಕಥೆಗೆ ನೆರವಾಗಿರುವ ಹರಿರಾಮ್, ರಾಜ್ಯದಲ್ಲಿ ತೆಲುಗು ,ತಮಿಳು ಭಾಷೆಯಲ್ಲಿ ನೆಲಮೂಲದ ಸಿನಿಮಾ ಬರುತ್ತವೆ. ಆ ರೀತಿಯ ಸಾಲಿನಲ್ಲಿ ಬರುವ ಸಿನಿಮಾ ಧೀರ ಭಗತ್ ರಾಯ್ ಸಿನಿಮಾ. ಹೊಸ ವಿಷಯ ತಿಳಿಸುವ ಪ್ರಯತ್ನ ಮಾಡಲಾಗಿದೆ ಇತಿಹಾಸವನ್ನು ಮುಚ್ಚಿಟ್ಟಿರುವ ಹಲವು ಸಂಗತಿಯನ್ನು ಚಿತ್ರದ ಮೂಲಕ ಹೇಳ ಹೊರಟ್ಟಿದ್ದೇವೆ ಎಂದು ಹೇಳಿದರು.

ಸಂಕಲನಕಾರ ಎನ್ ಎಂ ವಿಶ್ವ ಸೇರಿದಂತೆ ಅನೇಕರು ಇದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin