ಹೊಸಬಳು ಅನ್ನುವ ಫೀಲ್ ಆಗಲಿಲ್ಲ: ಇಡೀ ತಂಡ ಸಹಕಾರ ನೀಡಿದೆ: ನಟಿ ಸುಚಾರಿತಾ
ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಆಗಮನವಾಗುತ್ತಿದ್ದಾರೆ. ಅದರಲ್ಲಿ ಕೆಲವರು ಬಂದಷ್ಟೇ ವೇಗವಾಗಿ ವಾಪಸ್ ಹೋದರೆ ಮತ್ತೆ ಕೆಲವರು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಮತ್ತು ಇಲ್ಲಿ ಏನಾದರೂ ಸಾಧಿಸುವ ಕನಸು ಮತ್ತು ಗುರಿ ಇಟ್ಟವರು. ಇದರ ಸಾಲಿಗೆ ತುಮಕೂರಿನ ಹುಡುಗಿ ಸುಚಾರಿತಾ ಒಬ್ಬರು.
ನಿರೂಪಣೆ ಮಾಡಿಕೊಂಡಿದ್ದ ಹುಡುಗಿ “ಧೀರ ಭಗತ್ ರಾಯ್” ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ. ಅವರ ಪ್ರಯತ್ನಕ್ಕೆ ಇಡೀ ಚಿತ್ರತಂಡ ನೆರವಾಗಿದೆ. ಇದು ಅವರಲ್ಲಿ ಕೃತಜ್ಞತಾ ಭಾವವೂ ಇದೆ.
ಎಂಬಿಎ ಮಾಡಿಕೊಂಡ ತನ್ನದೇ ಆದ ಸ್ಟಾರ್ಟ್ ಆರಂಭಿಸಿರುವ ನಟಿ ಸುಚಾರಿತಾ ಭವಿಷ್ಯದಲ್ಲಿ ಸಿನಿಮಾ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಕನಸು ಕಂಡಿದ್ದಾರೆ. ಅದಕ್ಕೆ ಪೂರಕವಾಗಿ “ಧೀರ ಭಗತ್ ರಾಯ್” ಚಿತ್ರ ಸಿಕ್ಕಿದೆ. ನಟಿಯಾಗಿಯೂ ಉತ್ತಮ ಹೆಸರು ಮಾಡುವ ಗುರಿ ಮತ್ತು ಕನಸು ಹೊಂದಿದ್ದಾರೆ
ಈ ವೇಳೆ ಮಾತಿಗಿಳಿದ ನಟಿ ಸುಚಾರಿತಾ, ಮೊದಲ ಬಾರಿಗೆ ನಾಯಕಿಯಾಗಿದ್ದೇನೆ, ಹೊಸಬಳು ಎನ್ನುವ ಫೀಲ್ ಚಿತ್ರದಲ್ಲಿ ನಟಿಸುವಾಗ ಗೊತ್ತಾಗಲೇ ಇಲ್ಲ. ಮೊದಲು ನಿರೂಪಣೆ ಮಾಡುತ್ತಿದ್ದೆ ಆಗ ನಿರ್ದೇಶಕರು ಪರಿಚಯವಾಗಿತ್ತು. ಎಂಬಿಎ ಮಾಡಿದ್ದೇನೆ. ಸಾವಿತ್ರಿ ಎನ್ನುವ ಪಾತ್ರ. ಹೊಸತನದಿಂದ ಮೂಡಿಬಂದಿದೆ.ನಿರ್ದೇಶಕರು ಕುಟುಂಬದ ಜೊತೆ ಮಾತನಾಡಿದರು. ಕಥೆ ಹೇಳಿ ಎಲ್ಲರೂ ಇಷ್ಟಪಟ್ಟರು ನೈಜ ಘಟನೆ ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂದರು
ಯಾವುದೇ ತರಬೇತಿ ಇರಲಿಲ. ಇಡೀ ತಂಡ ಸಹಕಾರ ನೀಡಿದೆ. ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ನಟ ರಾಕೇಶ್ ಅಂದಾಕ್ಷಣ ಭಯವಾಯಿತು. ರಾಕೇಶ್ ಅವರ ಜೊತೆ ಮಾತನಾಡಿದೆ. ಚಿತ್ರದಲ್ಲಿ ಅಭಿನಯದ ಹೇಳಿಕೊಟ್ಟರು. ಹೊಸ ಡೈಲಾಗ್ ಪ್ರತಿ ಸಲ ಎಲ್ಲರೂ ಸಹಕಾರ ನೀಡಿದರು. ಹೊಸಬಳು ಎನ್ನುವ ಫೀಲ್ ಸಿಗಲಿಲ್ಲ ಹಿರಿಯ ಕಲಾವಿದ ಎಂಕೆ ಮಠ ಸೇರಿದಂತೆ ಹಿರಿಯರು ಸಹಕಾರ ನೀಡಿದ್ದೇನೆ. ಡಬ್ಬಿಂಗ್ ಮಾಡಲು ಹೆದರಿದ್ದೆ, ಆಗ ಸಂಕಲನಕಾರ ಎನ್ ಎಂ ವಿಶ್ವ ಅವರು ನಿಮ್ಮ ಧ್ವನಿ ಚೆನ್ನಾಗಿಗೆ ನೀವೇ ಮಾಡಿ ಎಂದು ಹುರುದುಂಬಿಸಿದರು. ಹೀಗಾಗಿ ಪಾತ್ರಕ್ಕೆ ನ್ಯಾಯ ಒದಗಿಸಲು ಸಹಕಾರಿಯಾಗಿದೆ ಎಂದು ಹೇಳಿದರು
ಬಾಡಿ ಲಾಂಗ್ವೇಜ್ ಸೇರಿದಂತೆ ಹಲವು ವಿಷಯಗಳನ್ನು ಕಲಿಯಲು ಸಹಕಾರಿಯಾಯಿತು.ಎರಡು ವರ್ಷದಲ್ಲಿ ಸಾಕಷ್ಟು ಕಲಿತಿದ್ದೇನೆ. ಮಾರ್ಡನ್ ಹುಡುಗಿಯಾದರೂ ಸಾವಿತ್ರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದೇನೆ, ಚಿತ್ರ ನೋಡಿ ಹರಸಿದರೆ ನಮ್ಮ ಶ್ರಮ ಸಾರ್ಥಕ, ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎನ್ನುವ ತುಡಿತವಿದೆ ಎಂದು ಮಾಹಿತಿ ಹಂಚಿಕೊಂಡರು