‘ವಿದ್ಯಾಪತಿ’ ಮೊದಲ ಹಾಡು ಬಿಡುಗಡೆ: ಜಗ್ಗೇಶ್ ಹಾಡಿಗೆ ಕುಣಿದ ರಂಗಾಯಣ ರಘು
“ಟಗರು ಪಲ್ಯ” ಚಿತ್ರದ ಯಶಸ್ಸಿನ ಬಳಿಕ ನಿರ್ಮಾಪಕ ಡಾಲಿ ಧನಂಜಯ ಮತ್ತು ನಟ ನಾಗಭೂಷಣ್ ಜೋಡಿ ಮತ್ತೊಮ್ಮೆ : ವಿದ್ಯಾಪತಿ” ಚಿತ್ರದ ಮೂಲಕ ಮೋಡಿ ಮಾಡಲು ಮುಂದಾಗಿದೆ.
ಕರಾಟೆ ತರಗತಿಯಲ್ಲಿ ನಾಗಭೂಷಣನ ನಾನಾ ಕಿತಾಪತಿ, ತಲೆಹರಟೆಗಳನ್ನು ಪ್ರದಾನವಾಗಿರಿಸಿಕೊಂಡು ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರಕ್ಕೆ ಹಿರಿಯ ನಟ ಜಗ್ಗೇಶ್ ಹಾಡಿಗೆ ಧ್ವನಿಯಾಗಿದ್ದು ಹಿರಿಯ ನಟ ರಂಗಾಯಣ ರಘು ಹೆಜ್ಜೆ ಹಾಕಿರುವುದು ಚಿತ್ರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಡಾಲಿ ಧನಂಜಯ್ ನಿರ್ಮಾಣದ ವಿದ್ಯಾಪತಿ ಸಿನಿಮಾ ನಾನಾ ವಿಧದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಟೀಸರ್, ಮೇಕಿಂಗ್ ನಿಂದಲೇ ಗಮ£ Àಸೆಳೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕರಾಟೆ ತರಗತಿಯಲ್ಲಿ ವಿದ್ಯಾಪತಿಯ ತಲೆಹರಟೆಯ ಹಾಡಿಗೆ ನವರಸ ನಾಯಕ ಜಗ್ಗೇಶ್ ಧ್ವನಿಯಾಗಿದ್ದಾರೆ.
ಅಯ್ಯೋ ವಿಧಿಯೇ ಎಂದು ಶುರುವಾಗುವ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಡಾಸ್ಮೋಡ್ ಸಂಗೀತ ಸಖತ್ ಕಿಕ್ ಕೊಡುತ್ತದೆ. ಸಖತ್ ಫನ್ ಆಗಿ ಮೂಡಿಬಂದಿರುವ ಗೀತೆಯಲ್ಲಿ ರಂಗಾಯಣ ರಘು ಕೂಡ ಹೆಜ್ಜೆ ಹಾಕಿರುವುದು ವಿಶೇಷ.
“ಟಗರು ಪಲ್ಯ” ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ‘ಉಪಾಧ್ಯಕ್ಷ’ನ ಬೆಡಗಿ ಮಲೈಕಾ ವಸೂಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ.
ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ”ವಿದ್ಯಾಪತಿ” ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ, ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ.
ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಗಿದೆ. ಟಗರು ಪಲ್ಯ ಸಿನಿಮಾ ನಿರ್ಮಾಣ ಮಾಡಿದ್ದ ಡಾಲಿ ಧನಂಜಯ್ ಇದೀಗ ‘ವಿದ್ಯಾಪತಿ’ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಆಕ್ಷನ್ ಜೊತೆಗೆ ಹಾಸ್ಯವೂ ಇರಲಿದೆ.