The film 'For Registration' will hit the screens on February 23

`ಫಾರ್ ರಿಜಿಸ್ಟ್ರೇಷನ್’ ಚಿತ್ರ ಫೆಬ್ರವರಿ 23ಕ್ಕೆ ತೆರೆಗೆ - CineNewsKannada.com

`ಫಾರ್ ರಿಜಿಸ್ಟ್ರೇಷನ್’ ಚಿತ್ರ ಫೆಬ್ರವರಿ 23ಕ್ಕೆ ತೆರೆಗೆ

”ಫಾರ್ ರಿಜಿಸ್ಟ್ರೇಷನ್” ಸ್ಯಾಂಡಲುಡ್‍ನಲ್ಲಿ ಹಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಬಹುನಿರೀಕ್ಷಿತ ಚಿತ್ರದ ಮೊದಲ ನೋಟ ಅನಾವರಣಗೊಂಡಿದೆ. ವಾಲಗದ ಮೂಲಕ ಇಡೀ ಚಿತ್ರತಂಡ ಸುದ್ದಿಗೋಷ್ಠಿಗೆ ಎಂಟ್ರಿ ಕೊಟ್ಟಿದ್ದು, ನಿರ್ದೇಶಕರಾದ ಶಶಾಂಕ್ ಹಾಗೂ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿ ನಟ ಪೃಥ್ವಿ ಅಂಬಾರ್ ಮಾತನಾಡಿ, ಫಾರ್ ರಿಜಿಸ್ಟ್ರೇಷನ್ ಎರಡು ಸಹಪಾಠಿಗಳ ಪ್ರಯತ್ನ ಇದು. ಇಬ್ಬರು ನವೀನ್ ಅವರ ಕನಸಿನ ಕೂಸು ಇದು. ತುಂಬಾ ಹಾರ್ಡ್ ವರ್ಕ್ ಆಗಿದೆ. ಈ ಚಿತ್ರಕ್ಕಾಗಿ. ಫಾರ್ ರಿಜಿಸ್ಟ್ರೇಷನ್ ಬಗ್ಗೆ ಗೊತ್ತಿರಬಹುದು. ಜಾಗ, ಗಾಡಿ ಅದು ಇದು ಅಂತಾ. ಮನಸ್ಸಿನಲ್ಲಿ ಸಂಬಂಧಗಳು ರಿಜಿಸ್ಟ್ರೇಷನ್ ಆಗಬೇಕು. ಅನ್ನೋದು ನಮ್ಮ ಆಸೆ. ಟ್ರೇಲರ್ ನೋಡಿದ್ದೀರಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾ ಎಲ್ಲರಿಗೂ ಹತ್ತಿರವಾಗುತ್ತದೆ. ಎಲ್ಲಾ ಪಾತ್ರ ವರ್ಗವದವರು ಅದ್ಭುತವಾಗಿ ನಟಿಸಿದ್ದಾರೆ ಎಂದು ತಿಳಿಸಿದರು.

ನಟಿ ಮಿಲನಾ ನಾಗರಾಜ್ ಮಾತನಾಡಿ, ನವೀನ್ ಸರ್ ಮನೆಗೆ ಬಂದು ಕಥೆ ವಿವರಿಸಿದರು. ತುಂಬಾ ತಯಾರಿಯಿಂದ ಬಂದಿದ್ದರು. ಫಸ್ಟ್ ಆಫ್ ಕಥೆ ಹೇಳಿ ನಿಲ್ಲಿಸಿಬಿಟ್ಟರು. ಕಂಟಿನ್ಯೂ ಮಾಡಿ ಎಂದಾಗ ನೀವು ಸಿನಿಮಾ ಒಪ್ಪಿಕೊಂಡರೇ ಕಥೆ ಹೇಳುವುದು ಎಂದರು. ಸರಿ ಸರ್ ಯೋಚನೆ ಮಾಡಿ ಹೇಳುತ್ತೇನೆ ಎಂದೆ. ಆಮೇಲೆ ಸಿನಿಮಾ ಮಾಡುತ್ತೇನೆ ಬಂದು ಕಥೆ ಹೇಳಿ ಅಂದಾಗ ಕಥೆ ಹೇಳಿದರು. ಒಂದು ರೀತಿ ಬ್ಲಾಕ್ ಮೇಲೆ ಮಾಡಿ ಹೋಗಿದ್ದರು. ನಿರ್ಮಾಪಕರಾದ ನವೀನ್ ಸರ್ ಬಹಳ ಫ್ಯಾಷನೆಟೇಡ್ ನಿರ್ಮಾಪಕರು. ಬಹಳಷ್ಟು ಇಂಟರ್ ವ್ಯೂಗಳಲ್ಲಿಯೂ ಹೇಳಿದ್ದೇನೆ. ಟೈಟಲ್ ಕೊಡುವುದರಿಂದ ಹಿಡಿದು ಕಥೆಯಲ್ಲಿ ಸಂಪೂರ್ಣವಾಗಿ ಕುತಿದ್ದಾರೆ. ಪ್ರತಿ ಶಾರ್ಟ್, ಸೀನ್ಸ್ ತೊಡಗಿಸಿಕೊಳ್ಳುತ್ತಿದ್ದಾರೆ. ನನಗೆ ಮನಸ್ಸು ಪೂರ್ತಿಯಾಗಿ ಸಿನಿಮಾ ಗೆಲ್ಲಬೇಕು. ಇಂತಹ ನಿರ್ದೇಶಕರು, ನಿರ್ಮಾಪಕರು ಗೆಲ್ಲಬೇಕು ಎಂದರು.

ನಿರ್ಮಾಪಕರಾದ ನವೀನ್ ರಾವ್ ಮಾತನಾಡಿ, ಬಹಳ ಪ್ರೀತಿಯಿಂದ ಮಾಡಿರುವ ಸಿನಿಮಾವಿದು. ಎರಡು ತಿಂಗಳು ಚರ್ಚೆ ಬಳಿಕ ಕಥೆ ರೆಡಿ ಮಾಡಿಕೊಂಡೆವು. ಕಥೆ ಡಿಮ್ಯಾಂಡ್ ಮಾಡಿದಾಗ ನಾವು ಮೊದಲ ಭೇಟಿಯಾಗಿದ್ದು ಮಿಲನಾ ಮೇಡಂ ಅವರನ್ನು. ಅವರಿಗೆ ಕಥೆ ಹೇಳಿದೆವು. ಆ ನಂತರ ಪೃಥ್ವಿ ಸರ್ ಭೇಟಿ ಮಾಡಿ ಕಥೆ ಹೇಳಿದೆವು. ಎಲ್ಲಾ ಕಲಾವಿದರು ಸಹಕಾರದಿಂದ ಈ ಚಿತ್ರವಾಗಿದೆ. ಎಲ್ಲರೂ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ನನ್ನ ಕುಟುಂಬಸ್ಥರು ಸಪೆÇೀರ್ಟ್ ಆಗಿವೆ ನಿಂತಿದ್ದಾರೆ. ಕೃಷ್ಣ ಸರ್ ಮೇಡಂ..ಸಿನಿಮಾಗೆ ಸ್ಟ್ರೇಂಥ್ ಆಗಿದ್ದರು. ಇದೇ 23ಕ್ಕೆ ಸಿನಿಮಾ ರಿಲೀಸ್ ಮಾಡಿದ್ದೇವೆ. ನೀವು ಎಲ್ಲರೂ ಸಹಕಾರ ಕೊಡಬೇಕು. ಈ ಚಿತ್ರದ ಬಳಿಕ ಮತ್ತೊಂದು ಚಿತ್ರಕ್ಕೆ ರೆಡಿಯಾಗುತ್ತಿದ್ದೇವೆ ಎಂದರು.

ನಿರ್ದೇಶಕ ನವೀನ್ ದ್ವಾರಕಾನಾಥ್ ಮಾತನಾಡಿ, ಹೊಸ ಪ್ರಯತ್ನ ಮಾಡಿದ್ದೇವೆ. ಬೆನ್ನು ತಟ್ಟಿ ಹಾರೈಸಿ. ತಪ್ಪಾಗಿದ್ದರೆ ಇನ್ನೊಮ್ಮೆ ಬೆನ್ನು ತಟ್ಟಿ ಹೇಳಿ ಚೆನ್ನಾಗಿ ಮಾಡಿ ಅಂತಾ ಹೇಳಿ ಮಾಡೋಣಾ. ನಾನು ಈ ಚಿತ್ರವನ್ನು ನನ್ನ ಗುರುಗಳಾದ ಸಿ ಆರ್ ಸಿಂಹ ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಸಂಬಂಧ ಮಹತ್ವ ಸಾರುವ ಫಾರ್ ರಿಜಿಸ್ಟ್ರೇಷನ್ ಟ್ರೇಲರ್ ಸಿನಿಮಾ ಮೇಲೆ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ. ನಿಶ್ಚಲ್ ಫಿಲಂಸ್ ಬ್ಯಾನರ್ನಲ್ಲಿ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ ಇಳಿದಿರುವ ದೀಪಕ್ ಗಂಗಾಧರ್ ಫಿಲಂಸ್ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನು ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin