ಫೆಬ್ರವರಿ 14ಕ್ಕೆ “ಸಿದ್ಲಿಂಗು-2” ಚಿತ್ರ ಪ್ರೇಕ್ಷಕರ ಮುಂದೆ..

“ಸಿದ್ಲಿಂಗು” ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸ ಬಗೆಯ ಸಿನಿಮಾ ನೀಡಿ ಯಶಸ್ಸು ಕಂಡಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಇದೀಗ 12 ವರ್ಷಗಳ ಬಳಿಕ ಅದರ ಮುಂದುವರಿದ ಭಾಗ “ಸಿದ್ಲಿಂಗು-2” ಸದ್ದಿಲ್ಲದೆ ಚಿತ್ರೀಕರಣ ಮಾಡಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಚಿತ್ರ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಸಿದ್ಲುಂಗು-2 ಬಿಡುಗಡೆಯಾಗಲಿದೆ. ಸಿದ್ಲಿಂಗು-2 ಚಿತ್ರದಲ್ಲಿ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದಾರೆ. ಈ ಬಾರಿ ಮೋಹಕ ತಾರೆ ರಮ್ಯಾ ಬದಲು ಅವರ ಜಾಗಕ್ಕೆ ಸೋನುಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕ ಪ್ರಕಟಿಸಿದೆ. ವಿಜಯ ಪ್ರಸಾದ್ ನಿರ್ದೇಶನ ಮಾಡಿರುವ ಚಿತ್ರಕ್ಕೆ ಶ್ರೀಹರಿ ಮತ್ತು ರಾಜು ಶೇರೆಗಾರ್ ಬಂಡವಾಳ ಹಾಕಿದ್ದಾರೆ.

ಸಹ ನಿರ್ಮಾಪಕರಾಗಿ ಯೋಗೇಶ್, ವಿಜಯ ಪ್ರಸಾದ್, ಮಂಜುನಾಥ್ ರಾಧಾಕೃಷ್ಣ ಕೈ ಜೋಡಿಸಿದ್ದಾರೆ ಜೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು ಪ್ರಸನ್ನ ಗುರಳೆಕರೆ ಕ್ಯಾಮರ ಕೈ ಚಳಕ ಚಿತ್ರಕ್ಕಿದೆ.
ತೋತಾಪುರಿ ಸರಣಿ, ಪೆಟ್ರೋಮ್ಯಾಕ್ಸ್ ಚಿತ್ರಗಳ ಸೋಲಿನಲ್ಲಿರುವ ನಿರ್ದೇಶಕ ವಿಜಯ್ ಪ್ರಸಾದ್ ಸಿದ್ಲಿಂಗು -2 ಚಿತ್ರದ ಮೂಲಕ ಚಿತ್ರರಂಗದಲ್ಲಿ ಗೆಲುವಿನ ಹಾದಿಗೆ ಮರಳುವ ಉತ್ಸಾಹದಲ್ಲಿದ್ದಾರೆ.