The heroine of the film "Gauri" is shining in a new photo shoot
“ಗೌರಿ’ ಚಿತ್ರದ ನಾಯಕ-ನಾಯಕಿ ಹೊಸ ಪೋಟೋ ಶೂಟ್‍ನಲ್ಲಿ ಮಿಂಚಿಂಗ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹು ನಿರೀಕ್ಷಿತ `ಗೌರಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ನಾಯಕ ನಟನಾಗಿದ್ದು ಸಾನ್ಯಾ ಅಯ್ಯರ್ ನಾಯಕಿಯಾಗಿದ್ದಾರೆ.
ಬಹುದೊಡ್ಡ ತಾರಾಗಣವಿರುವ `ಗೌರಿ’ ಚಿತ್ರದ ಅಪರೂಪದ ವಿಭಿನ್ನ ವಿಶಿಷ್ಠ ಶೈಲಿಯ ಪೋಟೋ ಶೂಟ್ ಬುಕ್ ಮೈ ಕ್ಯಾಪ್ಚರ್ ನಲ್ಲಿ ಯಶಸ್ವಿಯಾಗಿ ನಡೆದಿದೆ.
ಖ್ಯಾತ ಛಾಯಾಗ್ರಾಹಕ ಕೆನಡಾದ ರೋಹಿತ್ ಅವರ ಕ್ಯಾಮೆರಾ ಕೈಚಳಕ, ದೀಪಿಕಾ ಪಡುಕೋಟೆ ಸೇರಿದಂತೆ ಅನೇಕ ಖ್ಯಾತ ಸೆಲಬ್ರೆಟಿಗಳ ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಮೋಡಿ ಮಾಡಿದೆ. ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಪೋಟೋ ಶೂಟ್ ಬಿಡುಗಡೆ ಮಾಡಿದ್ದು ಗಮನ ಸೆಳೆದಿದೆ.