The much-awaited film "45" has VFX from renowned Hollywood technicians.

ಬಹು ನಿರೀಕ್ಷಿತ “45” ಚಿತ್ರಕ್ಕೆ ಹಾಲಿವುಡ್ ನ ಹೆಸರಾಂತ ತಂತ್ರಜ್ಞರಿಂದ ವಿ.ಎಫ್.ಎಕ್ಸ್ - CineNewsKannada.com

ಬಹು ನಿರೀಕ್ಷಿತ “45” ಚಿತ್ರಕ್ಕೆ ಹಾಲಿವುಡ್ ನ ಹೆಸರಾಂತ ತಂತ್ರಜ್ಞರಿಂದ ವಿ.ಎಫ್.ಎಕ್ಸ್

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಹಾಲಿವುಡ್‍ನ ಹೆಸರಾಂತ ತಂತ್ರಜ್ಷರಿಂದ ವಿ ಎಫ್ ಎಕ್ಸ್ ಕೆಲಸ ನಡೆಯುತ್ತಿದೆ.

ಖುದ್ದು ನಿರ್ದೇಶಕ ಅರ್ಜುನ್ ಜನ್ಯ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಸದಭಿರುಚಿಯ ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ

ಎಂ. ರಮೇಶ್ ರೆಡ್ಡಿ ಯವರು ತಮ್ಮ ಸೂರಜ್ ಪ್ರೊಡಕ್ಷನ್ಸ್ '' ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ45” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು,ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಬಿರುಸಿನಿಂದ ಸಾಗಿದೆ.

ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಹಾಲಿವುಡ್‍ನ 150 ಕ್ಕೂ ಅಧಿಕ ಚಿತ್ರಗಳಿಗೆ ಗ್ರಾಫಿಕ್ಸ್ ಕೆಲಸ ಮಾಡಿ ,ಆಸ್ಕರ್ ಗೆ ನಾಮಿನೇಟ್ ಆಗಿದ್ದ ಟೊರೊಂಟೊದ “MARZ” ವಿ ಎಫ್ ಎಕ್ಸ್ ಕಂಪನಿ ಗ್ರಾಫಿಕ್ಸ್ ಕೆಲಸ ಮಾಡುತ್ತಿದೆ. ಇದು ಈ ಖ್ಯಾತ ಕಂಪನಿ ಗ್ರಾಫಿಕ್ಸ್ ಕೆಲಸ ಮಾಡುತ್ತಿರುವ ಭಾರತದ ಅದರಲ್ಲೂ, ಕನ್ನಡದ ಮೊದಲ ಚಿತ್ರ “45”. ಹಾಲಿವುಡ್ ನ ಹೆಸರಾಂತ “MARZ” ಸಂಸ್ಥೆಯ ತಂತ್ರಜ್ಞರಾದ ಮಿಸ್ಟರ್ ರಾಫೆಲ್ ಹಾಗೂ ಮಿಸ್ಟರ್ ಜಸ್ಟಿನ್ ಅವರ ನೇತೃತ್ವದಲ್ಲಿ ಗ್ರಾಫಿಕ್ಸ್ ಕಾರ್ಯ ನಡೆಯುತ್ತಿದೆ.

ಇತ್ತೀಚಿಗೆ “45” ಚಿತ್ರದ ಗ್ರಾಫಿಕ್ಸ್ ಕೆಲಸದ ನಿಮಿತ್ತವಾಗಿ ಟೊರಾಂಟೋದ “MARZ” ವಿ ಎಫ್ ಎಕ್ಸ್ ಕಂಪನಿಗೆ ಭೇಟಿ ನೀಡಿದ ಚಿತ್ರಗಳನ್ನು ನಿರ್ದೇಶಕ ಅರ್ಜುನ್ ಜನ್ಯ ಹಂಚಿಕೊಂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin