The shoot for the first phase of Gurunandan-Tapaswini duo's untitled film is completed
ಗುರುನಂದನ್- ತಪಸ್ವಿನಿ ಜೋಡಿಯ ಹೆಸರಿಡದ ಚಿತ್ರದ ಮೊದಲ ಹಂತಕ್ಕೆ ಚಿತ್ರೀಕರಣ ಪೂರ್ಣ
ನಿರ್ದೇಶಕ ಸುಮಂತ್ ನಿರ್ದೇಶನದ ಪ್ರೊಡಕ್ಷನ್ ನಂಬರ್ -1 ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು ಎರಡನೇ ಹಂತದ ಚಿತ್ರೀಕರಣಕ್ಕೆ ತಂಡ ಸಿದ್ದತೆ ಮಾಡಿಕೊಂಡಿದೆ.
ಗುರುನಂದನ್, ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇನ್ನು ಹೆಸರಿಡದ ಚಿತ್ರದ ಚಿತ್ರೀಕರಣ ಬರದಿಂದ ಸಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಧರ್ಮಣ್ಣ, ಸುಶ್ಮಿತಾ (ಮಜಭಾರತ ) ವಿಜಯಲಕ್ಷ್ಮಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಮಂಡಿಮನೆ ಟಾಕೀಸ್ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರದ ನಿರ್ಮಾಣ ಕಾರ್ಯ ಆರಂಭವಾಗಿದೆ. ಚಿತ್ರಕ್ಕೆ ಸೂಕ್ತ ಹೆಸರಿಡಲು ತಂಡ ಚಿಂತನೆ ನಡೆಸಿದೆ. ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನ ಸುತ್ತ ಮುತ್ತ ಮೊದಲನೇ ಹಂತದ ಚಿತ್ರೀಕರಣ ಮಾಡಿದೆ
ಸದ್ಯದಲ್ಲೇ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. ಪ್ರತಿಭಾನ್ವಿತ ಕಲಾವಿದರಾದ ಗುರುನಂದನ್ ಮತ್ತು ತಪಸ್ವಿನಿ ಜೊತೆಗೆ ಕನ್ನಡದ ಹಾಸ್ಯ ಕಲಾವಿದರು ಚಿತ್ರಕ್ಕೆ ಸಾಥ್ ನೀಡಿದ್ದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚುವಂತೆ ಮಾಡಿದೆ