ಥ್ರಿಲ್ಲರ್, ಪ್ರೀತಿ ಬಾಂಧವ್ಯದ “ತಗ್ಗಟ್ಟಿ” ಚಿತ್ರ ಬಹುತೇಕ ಪೂರ್ಣ

ಸಾಂಸಾರಿಕ,ಥ್ರಿಲ್ಲರ್,ಪ್ರೀತಿ ಬಾಂಧವ್ಯದ ಕಥಾ ಹಂದಿರದವೊಂದಿರುವ “ ತಗ್ಗಟ್ಟಿ” ಚಿತ್ರ ಸದ್ದಿಲ್ಲದೆ ಶೇ.95 ರಷ್ಟು ಭಾಗದ ಚಿತ್ರೀಕರಣ ಮುಗಿಸಿ ಸಂಕಲನ ಕಾರ್ಯ ಆರಂಭಿಸಿದೆ.
“ತಗ್ಗಟ್ಟಿ” ಕರ್ನಾಟಕ-ತಮಿಳುನಾಡಿನ ನಡುವೆ ಒಂದು ಹಳ್ಳಿಯ ಹೆಸರು. ಆ ಹಳ್ಳಿಯಲ್ಲಿ ನಡೆದ ಪವಾಡದ ಮೇಲೆ ಸೃಷ್ಟಿಯಾಗಿರುವ ಸತ್ಯ ಘಟನೆ ಆಧರಿಸಿ ಹರಿಹರನ್ ಬಿಪಿ ನಿರ್ದೇಶನ ಮಾಡಿದ್ದಾರೆ. ಬಹುತಾರಾ ಬಳಗದೊಂದಿಗೆ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ.
ತಾರಾಗಣದಲ್ಲಿ ರೇಖಾದಾಸ್ ,ಶಿವಕುಮಾರ ಆರಾಧ್ಯ, ಮಂಡ್ಯ ಸಿದ್ದು ,ಡೈಮಂಡ್ ರಾಜಣ್ಣ , 4 ಯುವ ನಾಯಕ ನಾಯಕಿಯರು ಇದ್ದು,ರೇಣು ಶಿಖಾರಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಾಲರಾಜ್‍ವಾಡಿಯ ತಂದೆ ಮಗನ ಪಾತ್ರವೂ ತುಂಬಾ ಪ್ರಮುಖವಾಗಿದೆ.
ಮುಖ್ಯ ಪಾತ್ರದಲ್ಲಿ ಪ್ರವೀಣ್‍ಕುಮಾರ್ ಟಿ.ಸಿ ಅಭಿನಯಿಸಿದ್ದಾರೆ. ,ಲವ್ ಇನ್ ಮಂಡ್ಯ’ ಖ್ಯಾತಿಯ ಅರಸು ಅಂತಾರೆ ಮತ್ತು `ಮುಸ್ಸಂಜೆ ಮಾತು’ ಖ್ಯಾತಿಯ ಸಾಹಿತಿ ರೇವಣ್ಣ ನಾಯಕ್ ದೊಡ್ಡ ಕಾಡನೂರು ರಚಿಸಿದ್ದಾರೆ .

ಕನ್ನಡ ಚಿತ್ರರಂಗದ ಬಾದಾಮಿ ಎಂದು ಕರೆಯಲ್ಪಡುವ ಎಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ. ನಾಗೇಂದ್ರ ರಂಗಹರಿ ಛಾಯಾಗ್ರಹಣ ಮಾಡಿದ್ದು ,ಪ್ರಸಾಧನ ಗುರು (ಆನಂದ), ಸಂಕಲನ ಮಾಂತ್ರಿಕ ಮುತ್ತುರಾಜ್ .ಟಿ ಅವರ ಸಂಕಲನವಿದೆ , ಪಿ.ಆರ್.ಓ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ಸಹಾಯಕ ನಿರ್ದೇಶನ ಎಂ.ಡಿ.ರಾಘವೇಂದ್ರ ಅವರದಿದ್ದು ಚಿತ್ರಕ್ಕೆ ಚಂದ್ರಮಾ ಚನ್ನಾಚಾರಿ ಬಂಡವಾಳ ಹೂಡಿದ್ದಾರೆ.
ಚಿಕ್ಕಮಂಗಳೂರು ,ಊಟಿ , ಬೆಂಗಳೂರು , ಕನಕಪುರ ಸುತ್ತಮುತ್ತ 84 ದಿನಗಳ ಕಾಲ ಚಿತ್ರೀಕರಣವಾಗಿದೆ .ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು , ಮುತ್ತುರಾಜ್ ಸಂಕಲನ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲೇ ಉಳಿದಿರುವ ಒಂದು ಹಾಡಿನ ಚಿತ್ರೀಕರಣ ಮುಗಿಸಿ ಬೇಗನೇ ಬೆಳ್ಳಿತೆರೆಗೆ ತರುವ ಆಲೋಚನೆ ಇದೆ ಎಂದು ನಿರ್ದೇಶಕ ಹರಿಹರನ್ ಹಾಗು ನಿರ್ಮಾಪಕಿ ಚಂದ್ರಮಾ ಚನ್ನಾಚಾರಿ ತಿಳಿಸಿದ್ದಾರೆ