ಭ್ರಮಯುಗಂ ಚಿತ್ರದ ಚಿತ್ರೀಕರಣ ಪೂರ್ಣ

ಎಸ್.ಶಶಿಕಾಂತ್ ಮತ್ತು ಚಕ್ರವರ್ತಿರಾಮಚಂದ್ರ ಒಡೆತನದ ‘ನೈಟ್ ಶಿಫ್ಟ್ ಸ್ಟುಡಿಯೋ’ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ‘ಭ್ರಮಯುಗಂ’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಶುರುವಾಗಿ, ಇದೀಗ ಚಿತ್ರೀಕಣ ಪೂರ್ಣಗೊಂಡಿದೆ.

ನಾಯಕನಾಗಿ ಮುಮ್ಮುಟಿ ಅಭಿನಯಿಸುತ್ತಿರುವುದು ದೊಡ್ಡ ಸುದ್ದಿಯಾಗಿತ್ತು. ಸೆಪ್ಟಂಬರ್‍ದಲ್ಲಿ ಮುಮ್ಮಟಿ ಪೆÇೀಸ್ಟರ್ ಹೊರಬಂದ ಮೇಲೆ ಚಿತ್ರದ ನಿರೀಕ್ಷೆ ಹೆಚ್ಚಾಗಿದೆ. ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರರಾಗಿದ್ದಾರೆ. ಮೊನ್ನೆಯಷ್ಟೇ ಇವರ ಅಭಿನಯದ ‘ಕನ್ನೂರ್ ಸ್ಕ್ಯಾಡ್’ ತೆರೆಕಂಡು ಯಶಸ್ವಿಯಾಗಿದ್ದರಿಂದ, ಈ ಚಿತ್ರ ಅದೇ ಜಾಗಕ್ಕೆ ಹೋಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಕೇರಳದ ಕರಾಳ ಯುಗದಲ್ಲಿ ಬೇರೂರಿರುವ ಕಥೆಯಾಗಿರುವುದು ವಿಶೇಷ.
ರಾಹುಲ್‍ಸದಾಸಿವನ್ ರಚನೆ ಹಾಗೂ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮತ್ತೋಂದು ಮುಖ್ಯ ಪಾತ್ರದಲ್ಲಿ ಅರ್ಜುನ್‍ಅಶೋಕನ್, ಸಿದ್ದಾರ್ಥ್ ಭರತನ್, ಅಮಲ್ದಾ ಲಿಜ್ ನಟಿಸಿದ್ದಾರೆ.
ಸಂಗೀತ ಕ್ರಿಸ್ಟೋ ಕ್ಸೇವಿಯರ್, ಛಾಯಾಗ್ರಹಣ ಶೆಹನಾದ್ ಜಲಾಲ್, ಸಂಕಲನ ಶಫಿಕ್ಯೂ ಮೊಹಮ್ಮದ್ ಅಲಿ, ಸಂಭಾಷಣೆ ಟಿ.ಡಿ.ರಾಮಕೃಷ್ಣ, ಮೇಕಪ್ ರೋನೆಕ್ಸ್ ಕ್ಸೇವಿಯರ್, ಕಾಸ್ಟ್ಯೂಮ್ ಮೆಲ್ವಿ.ಜೆ, ಕಾರ್ಯಕಾರಿ ನಿರ್ಮಾಪಕ ವಿಕ್ಟರ್ ಪ್ರಭಾಹರನ್.ಎಂ ಅವರದಾಗಿದೆ.
ಸದ್ಯ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದು, ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ಚಿತ್ರವು ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ 2024ರ ಪ್ರಾರಂಭದಲ್ಲಿ ವಿಶ್ವದಾದ್ಯಂತ ತೆರೆಗೆ ಬರಲಿದೆ.