ಸಾಮಾಜಿಕ ಜಾಲತಾಣದಲ್ಲಿ ಕಂಪನ ಸೃಷ್ಠಿಸಿದ “ಟಾಕ್ಸಿಕ್” ಚಿತ್ರದ ಟೀಸರ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಟಾಕ್ಸಿಕ್” ಚಿತರದ ಟೀಸರ್ ನಟ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು. ಒಂದೇ ದಿನದಲ್ಲಿ ಬರೋಬ್ಬರಿ 200 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಸಾಮಾಜಿಕ ಜಾಲತಾಣದಲ್ಲಿ ಕಂಪನ ಸೃಷ್ಠಿಸಿದೆ.

ಕನ್ನಡ ಸೇರಿದಂತೆ ಭಾರತೀಯ ಸಿನಿಮಾ ನಟನ ಚಿತ್ರವೊಂದರ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿಯೇ 200 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಅಷ್ಟೇ ಅಲ್ಲ. 5.5 ದಶಲಕ್ಷ ಲೈಕ್‍ಗಳು ಬಂದಿವೆ. ಇದು ನಟ ಯಶ್ ಸಿನಿಮಾ ಜೀವನದಲ್ಲಿ ಹೊಸದೊಂದು ದಾಖಲೆಯೇ ಸರಿ.
ಇಂಟರ್‍ನೆಟ್‍ನಲ್ಲಿ ನಟ ಯಶ್ ಜೊತೆಗೆ ಟೀಸರ್‍ನಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಬೆಡಗಿ ಯಾರು ಎನ್ನುವುದನ್ನು ಶೋಧ ನಡೆಸಿದ್ದ ನೆಟ್ಟಿಗರು ಆಕೆ ಯಾರು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಹಾಲಿವುಡ್ ನಟಿ ನೆದಲ್ಯಾಂಡ್ ಮೂಲದ ನಟಾಲಿಯಾ ಬರ್ನ್ ಮಾದಕ ಮೈಮಾಟದಲ್ಲಿ ಅಭಿಮಾನಿಗಙಳ ಕಿಚ್ಚು ಹಚ್ಚಿಸಿದ್ದಾರೆ.
ರಾಯನಾಗಿ ನಟ ಯಶ್
ಟಾಕ್ಸಿಕ್ ಚಿತ್ರದಲ್ಲಿ ನಟ ಯಶ್ ಪಾತ್ರ ಏನಿರಬಹುದು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ,. ಚಿತ್ರದಲ್ಲಿ ರಾಯನಾಗಿ ಕಾಣಿಸಿಕೊಂಡು ಅಬ್ಬರಿಸಿದ್ದಾರೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹಿಮ್ಮಡಿಗೊಳಿಸಿದ್ದಾರೆ.
ಟೀಸರ್‍ನಲ್ಲಿ ಗನ್ ಹಿಡಿದು ಎಂಟ್ರಿ ಕೊಡುವ ನಟ ಯಶ್, ಸಮಾಧಿ ಸ್ಥಳದಲ್ಲಿ ರಾಯನ ಮೇಲೆ ಗುಂಡಿನ ಮಳೆಗರೆಯಲು ಆದೇಶ ನೀಡುತ್ತಾನೆ. ಗಾಯಗೊಂಡು ನೆಲದ ಮೇಲೆ ಬಿದ್ದಿದ್ದ ವ್ಯಕ್ತಿ ಕೈನಲ್ಲಿದ್ದ ಗನ್ ಎತ್ತಿ ಶೂಟ್ ಮಾಡಲು ಮುಂದಾಗುತ್ತಾನೆ. ಆದರೆ ಯಶ್ ಆತನ ಕೈ ಹಾಘು ಗನ್ ಮೇಲೆ ಕಾಲಿಟ್ಟು ಗುಂಡಿನ ಮಳೆಗರೆಯುವ ದೃಶ್ಯ ಹಾಲಿವುಡ್ ಲೆವೆಲ್‍ಗೆ ಮೂಡಿಬಂದಿದೆ
ಸಮಾಧಿ ಸ್ಥಳವೇ ನೆಗೆಟೀವ್ ಸ್ಥಳ, ಇದಲ್ಲಿಂದಲೇ ಸಿನಿಮಾ ಆರಂಭವಾಗಲಿದೆ. ಇದು ಸಿನಿಮಾದ ಬಗೆಗಿನ ನಿರೀಕ್ಷೆ ಹೆಚ್ಚು ಮಾಡಿದೆ

ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಟಾಕ್ಸಿಕ್ ಚಿತ್ರ ಮೂಡಿಬಂದಿದೆ ಎಂದು ಟೀಸರ್ ನೋಡಿದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಚಿತ್ರದ ಮೇಲೆ ಇನ್ನಷ್ಟು ಭರವಸೆ ಹೆಚ್ಚಿಸಿದೆ. ಜೊತೆಗೆ ಕನ್ನಡ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗದಲ್ಲಿ ಈ ವರ್ಷದ ಬಹುನಿರೀಕ್ಷಿತ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿತ್ರಕೆ ಕೆವಿನ್ ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹಾಕಿದ್ದು ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಮಾಚ್ 19 ರಂದು ದೇಶ ವಿದೇಶಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ

