Teaser of the film “Wild Tiger Safari” released in Dubai.
“ವೈಲ್ಡ್ ಟೈಗರ್ ಸಫಾರಿ” ಚಿತ್ರದ ಟೀಸರ್ ದುಬೈನಲ್ಲಿ ಬಿಡುಗಡೆ
ದುಬೈನ ಗ್ಲೋಬಲ್ ವಿಲೇಜ್ನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ “ವೈಲ್ಡ್ ಟೈಗರ್ ಸಫಾರಿ” ಟೀಸರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ .

ಈ ವೇಳೆ ನಟಿ ನಿಮಿಕಾ ರತ್ನಾಕರ್, ರೆಮೋ ಡಿಸೋಜಾ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.ವೈಲ್ಡ್ ಟೈಗರ್ ಸಫಾರಿಗೆ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿ ಸೋಜಾ ಸಾಥ್ . ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ನಿರ್ದೇಶನದ ಚಿತ್ರ ವೈಲ್ಡ್ ಟೈಗರ್ ಸಫಾರಿ.
ಶಿಥಿಲ್ ಪೂಜಾರಿ, ಧರ್ಮೇಶ್ , ಸುಶಾಂತ್, ಕೆಜಿಎಫ್ ಅವಿನಾಶ್, ಅಚ್ಯುತ್ ಕುಮಾರ್,ನಿಮಿಕಾ ರತ್ನಾಕರ್ ಅಭಿನಯದ ಸಿನಿಮಾ ವಿಕೆ ಫಿಲ್ಮಂ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಜನವರಿ 10 ರಂದು 11ಗಂಟೆ 17ನಿಮಿಷಕ್ಕೆ ವೈಲ್ಡ್ ಟೈಗರ್ ಸಫಾರಿ ಟೀಸರ್ ವಿಕೆ ಪಿಲ್ಸ್ಮ್ ಯೂಟೂಬ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ

