ನೈಜ ಕಥೆಯ “ಜೊತೆಯಾಗಿರು” ಚಿತ್ರ ಈ ವಾರ ತೆರೆಗೆ

ರೇಣು ಮೂವೀಸ್ ನಿರ್ಮಾಣದ, ಸತೀಶ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ “ಜೊತೆಯಾಗಿರು” ಚಿತ್ರ ಈವಾರ ಬಿಡುಗಡೆಯಾಗುತ್ತಿದೆ. 2009ರಲ್ಲಿ ನಿರ್ದೇಶಕರ ಸ್ನೇಹಿತನ ಜೀವನದಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಈ ಚಿತ್ರವನ್ನು ನಿರೂಪಿಸಿದ್ದಾರೆ.

ಚಿತ್ರದಲ್ಲಿ ಎರಡು ಲವ್ ಸ್ಟೋರಿಗಳ ಜೊತೆಗೆ ಒಂದು ಫ್ರೆಂಡ್ ಷಿಪ್ ಟ್ರ್ಯಾಕ್ ಕೂಡ ಬರುತ್ತದೆ. ಸೋಷಿಯಲ್ ಮೀಡಿಯಾ ಇಲ್ಲದ ಕೀಪ್ಯಾಡ್ ಕಾಲದಲ್ಲಿ ಮಿಸ್ ಕಾಲ್ ನಿಂದ ಹುಟ್ಟೋ ಪ್ರೇಮಕಥೆಯ ಜೊತೆ ಧನದಾಹದ ಹುಡುಗಿಯನ್ನು ಲವ್ ಮಾಡಿದರೆ ಏನಾಗುತ್ತೆ ಎಂಬುದನ್ನು ಜೊತೆಯಾಗಿರು ಚಿತ್ರದಲ್ಲಿ ಹೇಳಲಾಗಿದೆ.

ಬೆಂಗಳೂರು, ಕನಕಪುರ, ಕಳಸ, ಸಕಲೇಶಪುರ, ಕುಂದಾಪುರ, ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಿಸ್ ಕಾಲ್ ನಿಂದ ಹುಟ್ಟಿದ ಪ್ರೇಮಕಥೆಯಲ್ಲಿ ವೆಂಕಟೇಶ್ ಹೆಗಡೆ, ರಶ್ಮಿಗೌಡ ಹಾಗೂ ಸುನಿಲ್ ಕಾಂಚನ್, ಪೂಜಾ ಆಚಾರ್ ಇನ್ನೊಂದು ಕಥೆಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಶಂಕರ ನಾರಾಯಣ್,ಅಶ್ವಿನಿ, ಸಂತೋಷ್,ಸುಧ,ಸುಧೀರ್,ಮಂಜು, ಮುಂತಾದವರು ನಟಿಸಿದ್ದಾರೆ ರಾಜಶೇಖರ ಅವರ ಸಂಭಾಷಣೆ, ವಿನು ಮನಸು ಅವರ ಸಂಗೀತ, ಕೆ ಕಲ್ಯಾಣ್, ಮನ್ವರ್ಷಿ, ಸತೀಶ್ ಕುಮಾರ್ ಸಾಹಿತ್ಯ, ಸತೀಶ್ ಚಂದ್ರಯ್ಯ ಸಂಕಲನ, ವಿ ನಾಗೇಶ್ ನೃತ್ಯ, ಲಯನ್ ಗಂಗರಾಜ್ ಸಾಹಸ,ರಾಜ ಶಿವಶಂಕರ್, ಆನಂದ್ ಇಳಯರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.