ಉಂಡೆನಾಮ ಚಿತ್ರ ಬಿಡುಗಡೆಗೆ ರೆಡಿ : ಮತ್ತೆ ನಗಿಸಲು ಬಂದ ನಟ ಕೋಮಲ್

ಬಹು ದಿನಗಳ ನಂತರ ಖ್ಯಾತ ನಟ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಉಂಡೆನಾಮ ” ಚಿತ್ರ ಏಪ್ರಿಲ್14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಮತ್ತೆ ನಗಿಸಲು ಬಂದ ನಟ ಕೋಮಲ್ ಬಂದಿದ್ದಾರೆ.

ಸದಭಿರುಚಿಯ ಚಿತ್ರ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ , ಈ ಬಾರಿ ಹಾಸ್ಯ ಚಕ್ರವರ್ತಿ ಕೋಮಲ್ ಕುಮಾರ್ ಜೊತೆಗೂಡಿ ಹಾಸ್ಯದ ರಸದೌತಣ ಉಣ ಬಡಿಸಲು ಮುಂದಾಗಿದ್ದಾರೆ. ಅದುವೇ ” ಉಂಡೆ ನಾಮ”ದ ಮೂಲಕ.
ಅವರ ಪುತ್ರ ಕಿಶೋರ್ ಚಂದ್ರ ನಿರ್ಮಾಣದ ಹೊಣೆ ಹೊತ್ತಿದ್ದು ಬರವಣಿಗೆಯ ಮೂಲಕವೇ ಬಣ್ಣದ ಜಗತ್ತಿನಲ್ಲಿ ಭರವಸೆ ಮೂಡಿಸಿರುವ ಕೆ.ಎಲ್ ರಾಜಶೇಖರ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.

ಒಂದಷ್ಟು ಗ್ಯಾಪ್ ಬಳಿಕ ನಟ ಕೋಮಲ್ ಕುಮಾರ್ ,ಹಾಸ್ಯದ ಮೂಲಕ ಕಮಾಲ್ ಮಾಡಲು ಮುಂದಾಗಿದ್ದು ಅದಕ್ಕೆ ಪೂರಕ ಎನ್ನುವಂತೆ ತಬಲ ನಾಣಿ, ಹರೀಶ್ ರಾಜ್, ಅಪೂರ್ವಶ್ರೀ, ನಟಿಯರಾದ ವೈಷ್ಣವಿ, ಧನ್ಯ ಬಾಲಕೃಷ್ಣ, ತನಿಶಾ ಕುಪ್ಪಂಡ, ಬ್ಯಾಂಕ್ ಜನಾರ್ದನ್ ಸೇರಿದಂತೆ ದೊಡ್ಡ ತಾರಾ ಬಳಗವೇ ನಗುವಿನ ಕೋಡಿ ಹರಿಸಲು ಸಜ್ಜಾಗಿದೆ.
ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆ ಹಮ್ಮಿಕೊಳ್ಳಲಾಗಿತ್ತು. ಹಿರಿಯ ನಟ ಜಗ್ಗೇಶ್ ಆಗಮಿಸಿ ತಮ್ಮನ ಚಿತ್ರಕ್ಕೆ ಮನಸಾರೆ ಹಾರೈಸಿ ಚಿತ್ರ ಯಶಸ್ಬಿಯಾಗಲಿ ಎಂದರು.
ನಟ ಕೋಮಲ್ ಮಾತನಾಡಿ, ಕೆಲಸ ಮಾಡುವುದು ಗೊತ್ತು.ಅದನ್ನು ಜನ ಗುರುತಿಸಬೇಕು.ಅದನ್ನು ಬಿಟ್ಟು ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು. ಎಲ್ಲರನ್ನು ನಗಿಸುವ ಸಿನಿಮಾ ಬರುತ್ತಿದೆ. ಪೆÇ್ರೀತ್ಸಾಹ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು

ನಿರ್ದೇಶಕ ರಾಜಶೇಖರ್ ಮೊದಲ ಲಾಕ್ ಡೌನ್ ಮುಗಿಯುವ ವೇಳೆಗೆ ಮಾಡಿದ ಕಥೆ. ಸಾವು ನೋವಿನ ನಡುವೆ ಮನರಂಜನಾ ಚಿತ್ರ. ನಗುವಿನ ರಾದೌತಣ ನೀಡಲಿದೆ ಮುಂದಿನ ಶುಕ್ರವಾರ ಚಿತ್ರ ತೆರೆಗೆ ಬರುತ್ತಿದೆ ನೋಡಿ ಹರಸಿ ಎಂದರು.
ನಿರ್ಮಾಪಕ ಕಿಶೋರ್ ಚಂದ್ರ, ಮೊದಲ ಬಾರಿಗೆ ನಿರ್ಮಾಣ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ ಎಲ್ಲರ ಸಹಕಾರ ಬೇಕು ಎಂದರು
ನಟಿ ವೈಷ್ಣವಿ, ಮೊದಲ ಸಿನಿಮಾ, ಬೋಲ್ಡ್ ಪಾತ್ರ, ನಿಜ ಜೀವನದಲ್ಲಿ ಇರುವುದಕ್ಕೂ ಚಿತ್ರದ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಚಿತ್ರೀಕರಣ ಸಮಯದಲ್ಲಿ ಕೋಮಲ್ ಸರ್, ಹರೀಶ್ ರಾಜ್ ತುಂಬನೇ ಸಹಕಾರ ನೀಡಿದರು ಎಂದು ಹೇಳಿದರು.
ಕಲಾವಿದರಾದ ತಬಲ ನಾಣಿ, ಅಪೂರ್ವ ಶ್ರೀ ತಮ್ಮ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ಮೌನ ಮುನಿ ಕೋಮಲ್

ಸಹೋದರ ಕೋಮಲ್ ಒಂದು ರೀತಿ ಮೌನ ಮುನಿ ಇದ್ದಂತೆ. ಹೆಚ್ಚು ಮಾತನಾಡುವುದಿಲ್ಲ. ಕೋಮಲ್ ಚಿತ್ರರಂಗದಲ್ಲಿ ಗ್ಯಾಪ್ ತೆಗೆದುಕೊಳ್ಳಲು ಒಂದು ರೀತಿ ನಾನೇ ಕಾರಣ.ಒಳ್ಳೆಯ ಅವಕಾಶ ಸಿಗುವ ತನಕ ಬೇರೆ ಕೆಲಸ ಮಾಡು ಆ ಮೇಲೆ ಚಿತ್ರರಂಗಕ್ಕೆ ಬರುವಂತೆ ಹೇಳಿದ್ದೆ.ಈಗ ಸಮಯ ಬಂದಿದೆ ಎಂದರು.
ಲಾಕ್ ಡೌನ್ ನಲ್ಲಿ ನಡೆಯುವ ಕೆಲವು ಸೂಕ್ಷ್ಮ ಸಂಗತಿಗಳನ್ನು ಮುಂದಿಟ್ಡುಕೊಂಡು ನಿರ್ದೇಶಕ ಕೆ.ಎಲ್ ರಾಜಶೇಖರ್ ಕಥೆ ಮಾಡಿದ್ದಾರೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ. ಯಾವಾಗಲೆಲ್ಲಾ ನಗುವಿನ ಚಿತ್ರ ನೀಡಿದ್ದಾರೋ ಆಗ ಚಿತ್ರ ಗೆದ್ದಿವೆ. ರಾಜ್ ಶೇಖರ್ ಒಳ್ಳೆಯ ಬರಹಗಾರ.ಕಥೆ ಮಾಡಿಕೊಂಡ ರೀತಿಗೆ ಹ್ಯಾಟ್ಸಪ್ ಹೇಳುವೆ ಎಂದು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ರಾಜಶೇಖರ್ ಅವರನ್ನು ಹಾಡಿಹೊಗಳಿದರು.
ಕೋಮಲ್ ಗೆ ಒಳ್ಳೆಯ ಕಾಮಿಡಿ ಸೆನ್ಸ್ ಇದೆ. ಅದನ್ನು ಕಲಿಯಬೇಕು ಅನ್ನುವ ಆಸೆ ನನ್ನದು. ನಿರ್ಮಾಪಕ ಚಂದ್ರಶೇಖರ್ ಮತ್ತು ಅವರ ಪುತ್ರನ ಪ್ರಯತ್ನಕ್ಕೆ ಫಲ ಸಿಗಲಿ ಎಂದು ಹಾರೈಸಿದರು
ಉಂಡೆ ನಾಮ ಶೀರ್ಷಿಕೆ
ಹಾಸ್ಯಕ್ಕೆ ಒತ್ತು ನೀಡಲಾಗಿದೆ.ಮನೆ ಮಂದಿಯೆಲ್ಲಾ ಸಿನಿಮಾ ನೋಡಬಹುದು.ಚಿತ್ರಕ್ಕೆ ಈ ಮುನ್ನ ಬೇರೆ ಹೆಸರಿಡಲಾಗಿತ್ತು. ಅದ್ಯಾಕೋ ಸರಿ ಅನ್ನಿಸಲಿಲ್ಲ.ಆ ಮೇಲೆ ಹದಿನೈದು ಇಪ್ಪತ್ತು ಶೀರ್ಷಿಕೆ ಇಟ್ಟರೂ ಸರಿ ಹೊಂದಲಿಲ್ಲ. ಆಗ ಹೊಳೆದಿದ್ದೇ ಉಂಡೆನಾಮ.ಚಿತ್ರಕ್ಕೂ ಪೂರಕವಾಗಿದೆ ಎಂದರು ಪುತ್ರನಿಗೆ ಸಾಥ್ ನೀಡಿರುವ ನಿರ್ಮಾಪಕ ಡಾ..ಟಿ.ಆರ್.ಚಂದ್ರಶೇಖರ್ ,