Review: ಪೂಜಾ, ಪ್ರೀತಿ, ಲಕ್ಕಿಯ ಪ್ರೇಮ ಕಹಾನಿ “ಪುಲ್ ಮೀಲ್ಸ್”
ಚಿತ್ರ: ಫುಲ್ ಮೀಲ್ಸ್
ನಿರ್ದೇಶನ: ವಿನಾಯಕ
ತಾರಾಗಣ: ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಾಜೇಶ್ ನಟರಂಗ, ವಿಜಯ್ ಚೆಂಡೂರ್, ರಂಗಾಯಣ ರಘು,ರವಿಶಂಕರ್ ಗೌಡ, ಚಂದ್ರಕಲಾ ಮೋಹನ್. ಹೊನ್ನವಳ್ಳಿ ಕೃಷ್ಣ, ಸುಜಯ್ ಶಾಸ್ತ್ರಿ ಮತ್ತಿತರರು
ರೇಟಿಂಗ್: *** 3.5/5
ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಬಗೆಯ ಕಥೆಗಳು ಪ್ರೇಕ್ಷಕರ ಮುಂದೆ ಬರುತ್ತಿವೆ,ಅಂತಹ ಚಿತ್ರಗಳ ಸಾಲಿಗೆ ಮತ್ತೊಂದು ಹೊಸಬಗೆಯ ಚಿತ್ರ “ಪುಲ್ ಮೀಲ್ಸ್” ಸೇರ್ಪಡೆ.
ಪ್ರೀತಿಯಲ್ಲಿರುವ ಹುಡುಗ ಮದುವೆ ಪೋಟೊ ತೆಗೆಯಲು ಹೋಗಿ ಮದುಮಗಳನ್ನು ಪ್ರೀತಿಸುವ ಕಥೆಯನ್ನು ಮುಂದಿಟ್ಟುಕೊಂಡು ಯುವ ನಿರ್ದೇಶಕ ವಿನಾಯಕ ಕುತೂಹಲಕಾರಿಯಾದ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರೇಕ್ಷಕರಿಗೆ ಮನರಂಜನೆಯ ಫುಲ್ ಮೀಲ್ಸ್ ಉಣಬಡಿಸುವ ಪ್ರಯತ್ನ ಮಾಡಿದ್ದಾರೆ. ಹೊಸತನದ ಕಥೆಯೊಂದಿಗೆ ವಿಭಿನ್ನ ವಿಷಯವನ್ನು ಸಿನಿಮಾ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ, ಅದರಲ್ಲಿ ಅವರು ಬಹುತೇಕ ಯಶಸ್ಸು ಕಂಡಿದ್ಧಾರೆ.
ಜೀವನದಲ್ಲಿ ದೊಡ್ಡ ಛಾಯಾಗ್ರಾಹಕ ಆಗಬೇಕು ಎಂದು ಕನಸು ಕಟ್ಟಿಕೊಂಡ ಲಕ್ಕಿ ( ಲಿಖಿತ್ ಶೆಟ್ಟಿ)ಗೆ ಮದುವೆ ಮನೆಯಲ್ಲಿ ಪೋಟೋ ತೆಗೆಯುವ ಕೆಲಸ. ಆತನನ್ನು ಮೇಕಪ್ ಕಲಾವಿದೆ ಪ್ರೀತಿ ( ತೇಜಸ್ವಿನಿ ಶರ್ಮಾ) ಪ್ರೀತಿಸುತ್ತಾಳೆ. ತಾನು ಪ್ರೀತಿಸುತ್ತಿರುವ ಹುಡಗನಿಗೆ ತನ್ನ ಸಂಪರ್ಕದಲ್ಲಿರುವರ ಕಡೆಯಿಂದ ಒಂದಷ್ಟು ಕೆಲಸ ಕೊಡಿಸುತ್ತಾಳೆ. ಇಂತಹ ಸಮಯದಲ್ಲಿ ದೊಡ್ಡ ಮದುವೆಯಲ್ಲಿ ಫೋಟೋ ತೆಗೆಯುವ ಅವಕಾಶ ಲಕ್ಕಿಗೆ ಒಲಿದು ಬರುತ್ತದೆ.
ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ನಲ್ಲಿ ಮದುಮಗಳು ಪೂಜಾ ( ಖುಷಿ ರವಿ) ಮೇಲೆ ಲಕ್ಕಿಗೆ ಪ್ರೀತಿ ಮೊಳಕೆಯೊಡೆಯುತ್ತದೆ. ತನಗೆ ಅರಿವಿಲ್ಲದೆ ಆಕೆಯ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ಇತ್ತ ಪ್ರೀತಿ, ಲಕ್ಕಿಯನ್ನು ಪ್ರೀತಿಸುತ್ತಾಳೆ. ಲಕ್ಕಿಗೆ ಪೂಜಾ ಮೇಲೆ ಪ್ರೀತಿ, ಇಬ್ಬರು ಹುಡುಗಿಯರ ಮಧ್ಯೆ ಲಕ್ಕಿ ಆಯ್ಕೆ ಯಾವುದು ಎನ್ನುವುದು ಕುತೂಹಲದ ಪ್ರೇಮ ಕಹಾನಿ ಅದನ್ನು ಚಿತ್ರದಲ್ಲಿ ನೋಡಬೇಕು.
ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ನಿರ್ದೇಶಕ ವಿನಾಯಕ ಫುಲ್ ಮೀಲ್ಸ್ ಎಂದು ಚಿತ್ರಕ್ಕೆ ಶೀರ್ಷಿಕೆ ಇಟ್ಟಿರಬಹುದು. ಜನರಿಗೆ ಮನರಂಜನೆ ನೀಡುವ ಪ್ರಯತ್ನ ಮಾಡಿದ್ದಾರೆ, ಒಂದಷ್ಟು,ಮ ತಿರುವು ನಿರೀಕ್ಷೆ, ಚಿತ್ರ ಮೇಲೆ ಆಸಕ್ತಿ ಹೆಚ್ಚು ಮಾಡಿದೆ ಇನ್ನೊಂದಿಷ್ಟು ಕುತೂಹಲ ಕಾಪಾಡಿಕೊಂಡಿದ್ದರೆ ಇನ್ನಷ್ಟು ಉತ್ತಮ ಚಿತ್ರವಾಗುತ್ತಿತ್ತು.
ನಾಯಕ ಲಿಖಿತ್ ಶೆಟ್ಟಿ ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ, ಖುಷಿ ರವಿ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ, ಇನ್ನೋರ್ವ ನಟಿ ತೇಜಸ್ವಿನಿ ಶರ್ಮಾ ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ಧಾರೆ.
ರಂಗಾಯಣ ರಘು, ರಾಜೇಶ್ ನಟರಂಗ, ವಿಜಯ್ ಚೆಂಡೂರ್, ಸುಜಯ್ ಶಾಸ್ತ್ರಿ ಮತ್ತು ಚಂದ್ರಕಲಾ ಮೋಹನ್, ಹೊನ್ನವಳ್ಳಿ ಕೃಷ್ಣ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್, ಮನೋಹರ್ ಜೋಷಿ ಕ್ಯಾಮರ ಚಿತ್ರಕ್ಕೆ ಪೂರಕವಾಗಿದೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

