Review: ಮನಮುಟ್ಟುವ ಮಾನವೀಯ ಕಥನದ ಚಿತ್ರ “ಎಕ್ಸ್ ಅಂಡ್ ವೈ”
ಚಿತ್ರ: ಎಕ್ಸ್ ಅಂಡ್ ವೈ
ನಿರ್ದೇಶಕ : ಡಿ.ಸತ್ಯ ಪ್ರಕಾಶ್
ತಾರಾಗಣ : ಡಿ.ಸತ್ಯಪ್ರಕಾಶ್, ಬೃಂದಾ ಆಚಾರ್ಯ, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್ ಮತ್ತಿತರರು
ರೇಟಿಂಗ್: *** 3.5/5
ರಾಮ ರಾಮ ರೇ, ಒಂದಲ್ಲ ಎರಡಲ್ಲ, ಮ್ಯಾನ್ ಆಫ್ ದಿ ಮ್ಯಾಚ್ ನಂತಹ ವಿಭಿನ್ನ ಚಿತ್ರಗಳನ್ನು ಕನ್ನಡದ ಸಿನಿಮಾ ಪ್ರೇಕ್ಷಕರ ಮುಂದಿಟ್ಟು ನಿರ್ದೇಶಕರಾಗಿ ಯಶಸ್ವಿಯಾಗಿದ್ದ ಡಿ ಸತ್ಯ ಪ್ರಕಾಶ್, “ಎಕ್ಸ್ ಅಂಡ್ ವೈ” ಚಿತ್ರದ ಮೂಲಕ ಹೊಸತರದ ಕಂಟೆಂಟುನೊಂದಿಗೆ ನಾಯಕನಾಗಿ ಪ್ರೇಕ್ಷಕರ ಮುಂದೆ ಬಂದಿದ್ಧಾರೆ.
ಜೀವ, ಜೀವನದ ಮೌಲ್ಯಗಳ ಜೊತೆಗೆ ಮನಮುಟ್ಟುವ ವಿಷಯ ಮುಂದಿಟ್ಟುಕೊಂಡು ನಿರ್ದೇಶಕ ಡಿ ಸತ್ಯಪ್ರಕಾಶ್ ಚಿತ್ರವನ್ನು ಕೌಟಂಬಿಕ ನೆಲೆಗಟ್ಟಿನಲ್ಲಿ ಮನರಂಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ನಾಯಕನಾಗಿ ತಮ್ಮ ಕೆಲಸವನ್ನು ಸಮರ್ಥವಾಗಿ ನಿಬಾಯಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಿರ್ದೇಶಕ, ನಾಯಕನಾಗಿ ಭರವಸೆ ಮೂಡಿಸಿದ್ದಾರೆ.
ತಂದೆ ತಾಯಿ ಯಾರೆಂದು ತಿಳಿಯುವ ಜೊತೆ ಜೊತೆಗೆ ಬದುಕಿನ ಸತ್ಯದ ದರ್ಶನ. ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತವಾಗುವ ಕಥಾಹಂದರವನ್ನು ಜನರ ಮುಂದೆ ತಂದಿದ್ದಾರೆ. ಈ ಮೂಲಕ ತಾವೊಬ್ಬ ವಿಭಿನ್ನ ಚಿಂತನೆಯ ಸಂವೇದನಾಶೀಲ ಚಿಂತಕ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಆಟೋ ಆಂಬುಲೆನ್ಸ್ ಚಾಲಕ ಕ್ರೀಡೆ ( ಸತ್ಯ ಪ್ರಕಾಶ್)ಗೆ ಅಕ್ಕ ಭಾವ ( ಹರಿಣಿ- ಸುಂದರ್ ವೀಣಾ) ಹೆಣ್ಣು ಹುಡುಕುವುದೇ ದೊಡ್ಡ ಸವಾಲು, ಭಾವ ಕೆಲಸ ಮಾಡುವ ಆಸ್ಪತ್ರೆಯಲ್ಲಿಯೇ ಆಂಬ್ಯುಲೆನ್ಸ್ ಓಡಿಸುವ ಕ್ರೀಡೆಗೆ ಸಂಕಷ್ಠದಲ್ಲಿರುವ ರೋಗಿಗಳಿಗೆ ಸಹಾಯ ಮಾಡಬೇಕು ಎನ್ನುವ ಮಾನವೀತ ತುಡಿತಹೊಂದಿದ ಹೃದಯವಂತ. ಮಾವನ ಒತ್ತಾಯಕ್ಕೆ ಮಣಿದು ಆತನ ಮಗಳನ್ನು ಮದುವೆ ಆಗಲು ಮುಂದಾಗುವ ಕ್ರೀಡೆಗೆ ತನ್ನ ಅತ್ತೆ ಮಗಳು ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.
ಈ ನಡುವೆ ತಾತ (ದೊಡ್ಡಣ್ಣ) ತಾಯಿ (ವೀಣಾ ಸುಂದರ್) ಒತ್ತಡಕ್ಕೆ ಒಪ್ಪಿ ಕೃಪಾ (ಬೃಂದಾ ಆಚಾರ್ಯ) ಮದುವೆಗೆ ಮುಂದಾಗುತ್ತಾಳೆ. ಅನಿರೀಕ್ಷಿತವಾಗಿ ಕ್ರೀಡೆ ಹಾಗೂ ಕೃಪಾ ಭೇಟಿಯಾಗುವ ಸಂದರ್ಭ ಎದುರಾದಾಗ ಜೀವನದಲ್ಲಿ ಏನೆಲ್ಲಾ ಗಲಿದೆ. ಈನಡುವೆ ಎದುರಾಗುವ ಘಟನೆಗಳು ಏನು ಎನ್ನುವುದು ಕುತೂಹಲಕಾರಿಯಾಗಿದೆ, ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ಡಿ. ಸತ್ಯಪ್ರಕಾಶ್ ಎಕ್ಸ್ ಅಂಡ್ ವೈ ಚಿತ್ರದ ಮೂಲಕ ಹೊಸ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದನ್ನು ಸಮರ್ಥವಾಗಿ ಕಟ್ಟಿಕೊಡುವ ಮೂಲಕ ಗಮನ ಸೆಳೆದಿದ್ಧಾರೆ. ಜೊತೆಗೆ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಂದು ಸದಭಿರುಚಿಯ ಚಿತ್ರವನ್ನು ಸಿನಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಕಲಾವಿದರಾದ ಬೃಂದಾ ಆಚಾರ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಉಳಿದಂತೆ ಅಥರ್ವ ಪ್ರಕಾಶ್ , ಆಯಾನ, ಸುಂದರ್ ವೀಣಾ, ಹರಿಣಿ ಶ್ರೀಕಾಂತ್, ದೊಡ್ಡಣ್ಣ, ವೀಣಾ ಸುಂದರ್, ಧರ್ಮ ಕಡೂರ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಪೂರಕವಾಗಿ ಛಾಯಾಗ್ರಾಹಣ, ಸಂಗೀತ ಸಹಕಾರಿಯಾಗಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

