SuperHit Movie Review ::Comedy touches on the plight of those in trouble

SuperHit Movie Review ::ಸಮಸ್ಯೆಗೆ ಸಿಲುಕಿದವರ ಪಾಡು ಪರಿಪಾಟಲುಗಳಿಗೆ ಕಾಮಿಡಿ ಸ್ಪರ್ಶ - CineNewsKannada.com

SuperHit Movie Review ::ಸಮಸ್ಯೆಗೆ ಸಿಲುಕಿದವರ ಪಾಡು ಪರಿಪಾಟಲುಗಳಿಗೆ ಕಾಮಿಡಿ ಸ್ಪರ್ಶ

ಚಿತ್ರ : ಸೂಪರ್ ಹಿಟ್
ನಿರ್ದೇಶಕ: ವಿಜಯಾನಂದ್
ತಾರಾಗಣ. : ಗಿಲ್ಲಿನಟ, ಗೌರವ್ ಶೆಟ್ಟಿ, ಶ್ವೇತಾ, ಸಾಧುಕೋಕಿಲಾ, ನಾಗೇಂದ್ರ ಪ್ರಸಾದ್, ಪ್ರಮೋದ್ ಶೆಟ್ಟಿ, ಗೋವಿಂದೇಗೌಡ ಮತ್ತಿತರರು
ರೇಟಿಂಗ್ : ***3.5/ 5

ಈ ಬಾರಿಯ ಬಿಗ್ ಬಾಸ್ ಪದಕ ಪಡೆದ ನಂತರ ಗಿಲ್ಲಿ ನಟ ಅಭಿನಯದ ಚಿತ್ರ “ಸೂಪರ್ ಹಿಟ್ ” ಈ ವಾರ ತೆರೆಗೆ ಬಂದಿದೆ. ಗಿಲ್ಲಿನಟನಿಗೆ ಇರುವ ಖ್ಯಾತಿ ಅಭಿಮಾನಿ ಬಳಗ ಮತ್ತು ಜನಪ್ರಿಯತೆ ಕೈ ಹಿಡಿದರೆ ಸಿನಿಮಾ ಕೂಡ ” ಸೂಪರ್ ಹಿಟ್” ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಮಸ್ಯೆಗೆ ಸಿಲುಕಿ ಬಿಲ್ಡಪ್ ಕೊಟ್ಡವರ ಕಥೆ “ಸೂಪರ್ ಹಿಟ್” ಚಿತ್ರದ ಕಥೆಯ ಎಳೆ. ಬಿಲ್ಡಪ್ ಕೊಟ್ಟ ಮಂದಿ ನಿಜಕ್ಕೂ ಅವರು ಬಿಲ್ಡಪ್ ಕೊಟ್ರಾ ಪರಿಸ್ಥಿತಿ ಅವರನ್ನು ಆ ರೀತಿ ಮಾಡಿತಾ ಎನ್ನುವುದು ಕುತೂಹಲ ಕಾರಿ ಸಂಗತಿ.

ಸೂಪರ್ ಹಿಟ್ ಚಿತ್ರ ಒಂದಷ್ಟು ನೈಜ ವಿಷಯಗಳಿಗೆ ಥಳುಕು ಹಾಕಿಕೊಂಡಿದೆ. ಕಾಕತಾಳೀಯವೂ ಇರಬಹುದು ಇಲ್ಲ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವ ಚಿತ್ರತಂಡದ ಕಲೆಗಾರಿಕೆಯೂ ಇರಬಹುದು. ಹೀಗಾಗಿ ಶೆಡ್, ಕೊಲೆ, ಡೆವಿಲ್ ಬ್ರದ್ರರ್ಸ್ ಹೀಗೆ ಹಲವು ವಿಷಯಗಳು ಬಂದು ಹೋಗಿವೆ.

ನಿರ್ದೇಶಕ ವಿಜಯಾನಂದ್, ಕಾಮಿಡಿಗೆ ಒತ್ತು ನೀಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಬಚಾಚ್ ಆದರೆ ಸಾಕು ಎನ್ನುವ ಹಂತದಲ್ಲಿದ್ದವರಿಗೆ ಸಿಕ್ಕ ಕಾರು, ಸತ್ಯ, ಅಹಲ್ಯ, ಭೂಪತಿ ಜೊತೆಗೆ ಕೊಲೆ ರಹಸ್ಯದ ಪೆನ್‍ಡ್ರೈವ್ ಅದರಿಂದ ತಪ್ಪಿಸಿಕೊಳ್ಳಲು ಮೃತದೇಹದ ಸಾಗಾಟ,ಪರದಾಟ, ಅದರಿಂದ ಬಚಾವ್ ಆಗಲು ಹೂಡುವ ತಂತ್ರಗಳನ್ನು ಒಟ್ಟುಗೂಡಿಸಿ ಮನರಂಜನೆಗೆ ಒತ್ತು ನೀಡಿ ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ.

ಸತ್ಯ (ಗೌರವ್ ಶೆಟ್ಟಿ), ಒಮ್ಮೊಮ್ಮೆ ಒಂದೊಂದು ಹೆಸರಿಂದ ಕರೆಸಿಕೊಳ್ಳುವ ಮಧು, ಅಹಲ್ಯ, ಅಪ್ಸರ ( ಶ್ವೇತ ) ಹಾಗು ಭೂಪತಿ ( ಗಿಲ್ಲಿ ನಟ) ನ ಜರ್ನಿಯಲ್ಲಿ ನಡೆಯುವ ಕಥೆ, ಅದಕ್ಕೆ ಅವರದೇ ಆದ ಇತಿಹಾಸ, ಪ್ಲಾಶ್ ಬ್ಯಾಕ್ ಹಿನ್ನೆಲೆ ಮಾರ್ಗಮದ್ಯೆ ಎದುರಾಗುವ ವ್ಯಕ್ತಿಗಳು ಮತ್ತು ಸಮಸ್ಯೆಗಳು..ಅದರಿಂದ ಬಚಾವ್ ಆಗುವುದರೊಳಗೆ ಮತ್ತೊಂದು ಸಮಸ್ಯೆ..

ಡೇವಿಡ್ ,ಡಿಸೋಜಾ ಬ್ರದರ್ಸ್ ಮಾಡಿದ ಕೊಲೆ ಪತ್ತೆ ಮಾಡಲು ಹರಸಾಹ ನಡೆಸುವ, ಸತ್ಯ ಮತ್ತು ಭೂಪತಿ ಅಪ್ಸರ ಹೀಗೆ ದಾರಿ ಮಧ್ಯೆದಲ್ಲಿ ನಡೆಯುವ ಘಟನೆಗಳು ಚಿತ್ರವನ್ನು ಕುತೂಹಲದ ಹಂತಕ್ಕೆ ತಂದಿದೆ. ಮೂವರು ಯಾರು, ಅವರ ಅಸಲಿ ಉದ್ದೇಶ ಏನು, ಕೊಲೆಗಾರರ ರಹಸ್ಯ ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.

ಗಿಲ್ಲಿ ನಟ ಎಂದಿನಂತೆ ತಮ್ಮ ಮಾತಿನ ಮೂಲಕವೇ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಗೆಲುವು ಅವರ ಅಭಿಮಾನಿಗಳಿಗೆ ಸೂಪರ್ ಹಿಟ್ ಇಷ್ಟವಾಗಬಹುದು, ಗೌರವ್ ಶೆಟ್ಟಿ ನಟನೆಯ ಮೂಲಕ ಗಮನ ಸೆಳೆದಿದ್ಧಾರೆ, ನಟಿ ಶ್ವೇತಾ ಕೂಡ.

ಉಳಿದಂತೆ ಹಾಗೆ ಬಂದು ಹೀಗೆ ಹೋಗುವ ಪ್ರಮೋದ್ ಶೆಟ್ಟಿ, ಗೋವಿಂದೇ ಗೌಡ, ಟೆನ್ನಿಸ್ ಕೃಷ್ಣ,ನಾಗೇಂದ್ರ ಪ್ರಸಾದ್, ಸಾಧು ಕೋಕಿಲಾ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಸೂಪರ್ ಹಿಟ್ ಯಾವುದೇ ಮುಜುಗರ ಅಂಜಿಕೆ ಇಲ್ಲದೆ ಕುಟುಂಬ ಸಮೇತ ನೋಡಬಹುದಾದ ಮನರಂಜನಾತ್ಮಕ ಚಿತ್ರ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin