My mother wanted me to watch "Max"; Actor Kiccha Sudeep says he is sad

“ಮ್ಯಾಕ್ಸ್” ನೋಡಬೇಕು ಎಂದು ಅಮ್ಮ ಆಸೆ ಪಟ್ಟಿದ್ದರು; ಕೊರಗು ಇದೆ ಎಂದ ನಟ ಕಿಚ್ಚ ಸುದೀಪ್ - CineNewsKannada.com

“ಮ್ಯಾಕ್ಸ್” ನೋಡಬೇಕು ಎಂದು ಅಮ್ಮ ಆಸೆ ಪಟ್ಟಿದ್ದರು; ಕೊರಗು ಇದೆ ಎಂದ ನಟ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಮ್ಯಾಕ್ಸ್” ಈ ತಿಂಗಳ 25 ರಂದು ತೆರೆಗೆ ಬರಲು ಸಜ್ಜಾಗಿದೆ. ಕಿಚ್ಚ ಸುದೀಪ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಅಭಿಮಾನಿಗಳು ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದೆ. ಹೀಗಾಗಿ ಸಹಜವಾಗಿ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಮಾದ್ಯಮದ ಮುಂದೆ ಹಾಜರಾಗಿತ್ತು. ಈ ವೇಳೆ ಮಾತಿಗಿಳಿದ ನಟ ಕಿಚ್ಚ ಸುದೀಪ್, “ಮ್ಯಾಕ್ಸ್” ಚಿತ್ರವನ್ನು ಅಮ್ಮ ನೋಡಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಅವರಿಗೆ ಚಿತ್ರ ತೋರಿಸಲು ಆಗಲಿಲ್ಲ ಎನ್ನುವ ಕೊರಗು ಇದೆ ಎಂದರು.

ಸಿನಿಮಾ ನೋಡಲು ಅಮ್ಮ ಕಾತುರದಿಂದ ಕೇಳುತ್ತಿದ್ದರು, ಸಿನಿಮಾ ಮುಗಿದಿದೆಯೋ ಇಲ್ಲೋ ಹಾಕೋ ಎಂದು ಕೇಳುತ್ತಿದ್ದರು. ಕಾರಣಾಂತರದಿಂದ ಸಿನಿಮಾ ಮುಗಿಸಲು ಆಗಿರಲಿಲ್ಲ. ಆ ಒಂದು ಕೊರತೆ ಕಾಡುತ್ತಿದೆ. ಸಿನಿಮಾ ಮಾಡುವಾಗ ಖುಷಿಯಿಂದ ಅವರ ಆಶೀರ್ವಾದ ತೆಗೆದುಕೊಂಡಿದ್ದೆ ಎಂದು ತಿಳಿಸಿದರು

ಚಿತ್ರದಲ್ಲಿ ಮೊದಲ ಕಾರ್ಡ್ ಅಮ್ಮನದ್ದೇ ಆಗಿದೆ. ಎಂದೂ ಕೂಡ ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ, ಈ ಸಿನಿಮಾ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬನಾ ವಿಶೇಷವಾಗಿದೆ. ಸಿನಿಮಾವನ್ನು ಅಮ್ಮನಿಗೆ ತೋರಿಲು ಆಗಲಿಲ್ಲ ಎನ್ನುವ ಕೊರಗಿದ್ದರೂ ಒಂದು ಖುಷಿ ಇದೆ. ಚಿಕ್ಕ ಪುಟ್ಟ ಕ್ಲಿಪ್ಪಿಂಗ್‍ಗಳನ್ನು ಆಗಾಗ ತೋರಿಸಿದ್ದೆ. ಖುಷಿಪಟ್ಟಿದ್ದರು ಎಂದು ಹೇಳಿದರು

ಚಿತ್ರರಂಗದ ಜೀವನದಲ್ಲಿ ತರಾವೇರಿಯ ಪಾತ್ರ ಮಾಡಿದ್ದರೂ ನಮ್ಮನ್ನು ಇಷ್ಟ ಪಡುತ್ತಿತ್ತು ಒಂದೇ ಪಾತ್ರವನ್ನು ಅದು ಮಗನ ಪಾತ್ರವನ್ನು ಅದನ್ನು ಮಾಡಿ ಬಾಳಿ ಬದುಕುತ್ತಿದ್ದೇನೆ. ಆ ಖುಷಿ ಎಂದು ಹೆಮ್ಮೆಯಿಂದ ಕಿಚ್ಚ ಸುದೀಪ್ ಹೇಳಿಕೊಂಡರು.

ಕನ್ನಡ ಚಿತ್ರರಂಗಕ್ಕೆ ಕಿಚ್ಚು ಸುದೀಪ್ ಎನ್ನುವ ಅಮೂಲ್ಯದ ರತ್ನ ನೀಡಿರುವ ಸರೋಜಾ ಸಂಜೀವ್ ಅವರು ಇತ್ತೀಚೆಗೆ ವಯೋಸಹಜ ಅನಾರೋಗ್ಯತದಿಂದ ಇಹಲೋಕ ತ್ಯಜಿಸಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin