“ಅಪ್ಪ ಐ ಲವ್ ಯೂ” ಚಿತ್ರಜೀವನದಲ್ಲಿ ಮೈಲುಗಲ್ಲಾಗುವ ಸಿನಿಮಾ: ನಟಿ ಜೀವಿತಾ ವಿಶ್ವಾಸ
“ವಾಸಂತಿ ನಲಿದಾಗ” ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ನಟಿ ಜೀವಿತಾಗೆ ಅಪ್ಪ-ಮಗನ ಬಾಂಧವ್ಯ ಸಾರುವ ಕಥಾಹಂದರವಿರುವ “ ಅಪ್ಪ ಐ ಲವ್ ಯೂ” ಚಿತ್ರದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಹೀಗಾಗಿಯೇ ಅವರು ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಆಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಅಥರ್ವ್ ಆರ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಕೆಆರ್ ಎಸ್ ಸಂಸ್ಥೆ ಬಂಡವಾಳ ಹೂಡಿದೆ. ತಂದೆಯ ಪಾತ್ರದಲ್ಲಿ ಹಿರಿಯ ಕಲಾವಿದ ತಬಲನಾಣಿ ಕಾಣಿಸಿಕೊಂಡಿದ್ದಾರೆ. ಮಗನ ಪಾತ್ರದಲ್ಲಿ ಸಂಜಯ್ ಮತ್ತು ಸೊಸೆ ಪಾತ್ರದಲ್ಲಿ ಯುವ ನಟಿ ಜೀವಿತಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಿರಿಯ ನಟ ನೆನಪಿರಲಿ ಪ್ರೇಮ್ ಮತ್ತು ಬಹಳ ವರ್ಷಗಳ ನಂತರ ನಟಿ ಮಾನ್ವಿತಾ ಕಾಮತ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಇದೇ ತಿಂಗಳ 12 ರಂದು ತೆರೆಗೆ ಬರಲಿದೆ.
ಕನ್ನಡ ಚಿತ್ರರಂಗದಲ್ಲಿ “ಅಪ್ಪ ಐ ಲವ್ ಯೂ” ಚಿತ್ರದ ಮೂಲಕ ನಿರ್ದೇಶಕ ಅಥರ್ವ್ ಆರ್ಯ ಭರವಸೆ ಮೂಡಿಸುವ ಮೂಲಕ ಕನ್ನಡದಲ್ಲಿ ಸಂಚಲನ ಸೃಷ್ಠಿ ಮಾಡಲು ಸಜ್ಜಾಗಿದ್ದಾರೆ.ಅದಕ್ಕಾಗಿ ಪ್ರೇಕ್ಷಕರ ಆಶೀರ್ವಾದ ಬಯಸಿದ್ದಾರೆ.
ಚಿತ್ರ ಬಿಡುಗಡೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಜೀವಿತಾ,ಎಲ್ಲರ ಮನೆಗಳಲ್ಲಿ ನಡೆಯುವ ಕಥೆ ಎಲ್ಲರಿಗೂ ಇಷ್ಟವಾಗಲಿದೆ ಎಂದಿದ್ದಾರೆ
• ನಿಮ್ಮ ಹಿನ್ನೆಲೆ ಏನು
ಹುಟ್ಟೂರು ಪುತ್ತೂರು, ಹುಟ್ಟಿ ಬೆಳೆದಿದ್ದು ಬೆಂಗಳೂರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. ಸಿನಿಮಾದಲ್ಲಿ ನಟಿಸುವ ಅವಕಾಶ ವಾಸಂತಿ ನಲಿದಾಗ” ಚಿತ್ರದ ಮೂಲಕ ಬಣ್ಣದ ಜಗತ್ತು ಪ್ರವೇಶಿಸಿದೆ. ಇದಆ ನಂತರ ಸಿಕ್ಕಿದ್ದೇ ” ಅಪ್ಪ ಐ ಲವ್ ಯೂ ” ಚಿತ್ರ. ಇದು ಎರಡನೇ ಚಿತ್ರ ಒಳ್ಳೆಯ ಪಾತ್ರ ನೀಡಿದ್ದಾರೆ ನಿರ್ದೇಶಕ ಅಥರ್ವ್ ಆರ್ಯ.
• ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ
ಚಿತ್ರದಲ್ಲಿ ಹಿರಿಯ ಕಲಾವಿದ ತಬಲನಾಣಿ ಅವರ ಸೊಸೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಟನೆಗೆ ಮಹತ್ವವಿರುವ ಚಿತ್ರ. ಜೊತೆಗೆ ನನ್ನ ಪಾತ್ರದ ಬಗ್ಗೆಯೂ ಮಹತ್ವವಿದೆ. ಕೆಲವರ ಮನೆಯಲ್ಲಿ ನಿತ್ಯ ನಡೆಯುವ ಘಟನೆ ಆಧರಿಸಿ ಚಿತ್ರದ ಪಾತ್ರ ಎಣೆಯಲಾಗಿದೆ. ಚಿತ್ರ ನೋಡಿದ ಮಂದಿಗೆ ಎಲ್ಲೋ ನಮ್ಮ ಮನೆಯಲ್ಲಿ ನಡೆದಿರುವುದು ಅನ್ನಿಸಿದರೆ ಆಶ್ಚರ್ಯ ವಿಲ್ಲ. ಮಾವನನ್ನು ಸೊಸೆ ಯಾವ ರೀತಿ ನೋಡಿಕೊತ್ತಾಳೆ ಎನ್ನುವುದು ನನ್ನ ಪಾತ್ರ.ವಿಭಿನ್ನ ಶೇಡ್ ಚಿತ್ರದಲ್ಲಿದೆ ಎನ್ನುವ ವಿವರ ನೀಡಿದರು.
• ಚಿತ್ರೀಕರಣದ ಸಮಯದಲ್ಲಿ ವಾತಾರವಣ ಹೇಗಿತ್ತು
“ಅಪ್ಪ ಐ ಲವ್ ಯೂ” ಚಿತ್ರೀಕರಣದ ಸಮಯದಲ್ಲಿ ಎಲ್ಲರು ಹಾಸ್ಯ ಮಾಡಿಕೊಂಡು ಚಿತ್ರ ಮಾಡಿದ್ದೇವೆ. ಜೊತೆಗೆ ಸಾಮಾಜಿಕ ಕಳಕಳಿ ಇರುವ ವಿಷಯ. ಇಂತಹ ಚಿತ್ರಗಳು ಕನ್ನಡದಲ್ಲಿ ತೀರಾ ಅಪರೂಪ. ಹಾಗೊಮ್ಮೆ, ಹೀಗೊಮ್ಮೆ ಬರುವುದು ಬಂದಾಗ ಪ್ರೇಕ್ಷಕರುಕೈ ಹಿಡಿದರೆ ಚಿತ್ರತಂಡ ಇನ್ನಷ್ಟು ಪ್ರಯತ್ನ ಮಾಡಲು ಸಹಕಾರಿಯಾಗುತ್ತದೆ. ಕಲಾವಿದರು ಮತ್ತು ತಂತ್ರಜ್ಞರಿಗೂ ಮತ್ತಷ್ಟು ಅವಕಾಶ ಸಿಗುತ್ತದೆ
• ಅಪ್ಪ ಐ ಲವ್ ಯೂ ಚಿತ್ರವನ್ನು ಯಾಕೆ ನೋಡಬೇಕು
ಅಪ್ಪ ಐ ಲವ್ ಯೂ ಚಿತ್ರ ಸಾಮಾಜಿಕ ಕಳಕಳಿ ಇರುವ ಚಿತ್ರ ಜೊತೆಗೆ ತಂದೆ-ಮಗನ ಬಾಂಧವ್ಯ ಚಿತ್ರದಲ್ಲಿ ತಂದೆಯನ್ನು ಪ್ರೀತಿಸುವ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ,ಈಗಿನ ಪೀಳಿಗೆಯ ಮಂದಿ ನೋಡಲೇಕಾದ ಚಿತ್ರ, ಕಂಟೆಂಟ್ ಆಧರಿಸಿದ ಮೌಲ್ಯಗಳನ್ನು ಸಾರುವ ಚಿತ್ರ. ಜೊತೆಗೆ ತಂದೆಯ ಮಹತ್ವದವನ್ನು ಚಿತ್ರದ ಮೂಲಕ ಅರ್ಥಪೂರ್ಣವಾಗಿ ನಿರ್ದೇಶಕ ಅಥರ್ವ ಆರ್ಯ ತೋರಿಸಿದ್ದಾರೆ .ಮನೆ ಮಂದಿ ನೋಡಬಹುದಾದ ಚಿತ್ರ. ಇನ್ನು ವರ್ಣತರಂಗ ಮತ್ತು ಪಸ್ಟ್ ಡೇ ಫಸ್ಟ್ ಶೋ ಚಿತ್ರ ಕೈಯಲ್ಲಿವೆ ಎಂದು ಮಾಹಿತಿ ಹಂಚಿಕೊಂಡರು
• ನಿಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುವುದಾದರೆ
“ಅಪ್ಪ ಐ ಲವ್ ಯೂ ” ನಟನೆಗೆ ಮಹತ್ವವಿರುವ ಚಿತ್ರ. ಚಿತ್ರದಲ್ಲಿ ನನ್ನ ನಿಜ ಜೀವನದ ಪಾತ್ರಕ್ಕಿಂತ ವಿರುದ್ದವಾದ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಪ್ರಮುಖ ತಾರಾ ಬಳಗ ಇರುವುದು ಮತ್ತಷ್ಟು ಖುಷಿಕೊಟ್ಟಿದೆ. ನನ್ನ ಸಿನಿಮಾ ಕೆರಿಯರ್ ನಲ್ಲಿ ಅತ್ಯುತ್ತಮ ಚಿತ್ರವಾಗಿ ಉಳಿಯಲಿದೆ. ಚಿತ್ರದಲ್ಲಿ ತಬಲನಾಣಿ ಅವರ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ನನ್ನ ಪಾತ್ರವೂ ಮಹತ್ವದ್ದಾಗಿದೆ ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.
• ನಿಮ್ಮ ತಂದೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾರೆ
ನಾನು ಹುಟ್ಟಿದ ಆಸ್ಪತ್ರೆಯಲ್ಲಿ ನನಗೆ ಹೆಣ್ಣುಮಗಳು ಹುಟ್ಟಿದ್ದಾಳೆ ಎಂದು ಅಪ್ಪ ಇಡೀ ಆಸ್ಪತ್ರೆಯಲ್ಲಿ ಕುಣಿದಾಡಿ ಎಲ್ಲರಿಗೂ ಸಿಹಿ ಹಂಚಿದ್ದರು ಎಂದು ಅಮ್ಮ ಆಗಾಗ ಹೇಳ್ತಾ ಇರ್ತಾರೆ. ಈಗ ಅಪ್ಪ ಇಲ್ಲ. ನಾನು ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ನಮ್ಮಲ್ಲೇ ಬಿಟ್ಟು ಹೋದರು. ನೆನಪು ಹೆಚ್ಚಿಗೆ ಇಲ್ಲ ಹೆಣ್ಣು ಮಕ್ಕಳ ಬಗ್ಹೆ ಇತ್ತೀಚೆಗೆ ತತ್ಸಾರ ಇರುವ ಸಮಯದಲ್ಲಿ ನನ್ನ ಅಪ್ಪನ ಸಂಭ್ರಮ ಕೇಳಿದರೆ ಈವಾಗಲೂ ಕಣ್ಣೀರು ಬರುತ್ತೆ.ಅಪ್ಪ ಅಂದ್ರೆ ನನಗೆ ಅಷ್ಟು ಇಷ್ಟ . ಅಪ್ಪ ಐ ಲವ್ ಯೂ ಮನ ಮಿಡುವ ಮತ್ತು ಸಾಮಾಜಿಕ ಕಳಕಳಿಯ ಚಿತ್ರ