Dream of playing a historical role through “Halagali” has come true: Dolly Dhananjaya

“ಹಲಗಲಿ” ಮೂಲಕ ಐತಿಹಾಸಿಕ ಪಾತ್ರ ಮಾಡುವ ಕನಸು ನನಸಾಗಿದೆ: ಡಾಲಿ ಧನಂಜಯ - CineNewsKannada.com

“ಹಲಗಲಿ” ಮೂಲಕ ಐತಿಹಾಸಿಕ ಪಾತ್ರ ಮಾಡುವ ಕನಸು ನನಸಾಗಿದೆ: ಡಾಲಿ ಧನಂಜಯ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಹಲಗಲಿ ಬೇಡರ ಕುರಿತಾದ “ ಹಲಗಲಿ” ಚಿತ್ರದ ಮೂಲಕ ನಟ ರಾಕ್ಷಸ ಡಾಲಿ ಧನಂಜಯ ‘ಜಡಗ” ಪಾತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ, ಜೊತೆಗೆ ಹಲಗಲಿ ಚಿತ್ರದ ಮೂಲಕ ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಧನಂಜಯ ಅವರ ಬಹುವರ್ಷದ ಕನಸು ಕೂಡ ನನಸಾಗಿದೆ.

Daali Dhanajaya Saptami gowda

ಸ್ವಾತಂತ್ರ್ಯ ಹೋರಾಗಾರರ ವೀರಾವೇಶದ ಕಥೆ ಆಧರಿಸಿ “ಹಲಗಲಿ” ವೀರರ ಕಥೆಯನ್ನು ಜನರ ಮುಂದಿಡಲು ನಿರ್ದೇಶಕ ಸುಕೇಶ್ ನಾಯಕ್ ಮುಂದಾಗಿದ್ದು ಕಲ್ಯಾಣ್ ಚಕ್ರವರ್ತಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಡಾಲಿ ಧನಂಜಯ ‘ಜಡಗ” ಪಾತ್ರದಲ್ಲಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು ಹೊನ್ನಿ ಪಾತ್ರದಲ್ಲಿ ನಟಿ ಸಪ್ತಮಿ ಗೌಡ ಮಿಂಚು ಹರಸಿಲು ಮುಂದಾಗಿದ್ಧಾರೆ

“ಹಲಗಲಿ’ ಚಿತ್ರದ ಚಿತ್ರೀಕರಣ ಶೇಕಡಾ 40ರಷ್ಟು ಪೂರ್ಣಗೊಂಡಿದ್ದು ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಬ್ರಿಟೀಷರ ರಾಷ್ಟ್ರದ್ವಜವನ್ನು ನೆಲಕ್ಕುಳಿಸಿ ನಮ್ಮ ಮಣ್ಣಿನ ಕಥೆಯ ವೀರರ ಸಾಹಸ ಹೇಳುವ ಹಲಗಲಿಯ ‘ಜಡಗ’ ಪಾತ್ರದಲ್ಲಿ ಡಾಲಿ ಧನಂಜಯ ಕಾಣಿಸಿಕೊಳ್ಳುವ ಮೂಲಕ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆ ಮತ್ತು ಕುತೂಹಲ ಹೆಚ್ಚು ಮಾಡಿದ್ಧಾರೆ

ಈ ಕುರಿತು ಮಾಹಿತಿ ಹಂಚಿಕೊಂಡ ನಟ ಧನಂಜಯ, ಐತಿಹಾಸಿಕ ಪಾತ್ರದಲ್ಲಿ ನಟಿಸಬೇಕು ಎನ್ನವ ಕನಸು “ಹಲಗಲಿ” ಚಿತ್ರ ಮೂಲಕ ಈಡೇರುತ್ತಿದೆ. ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಕಿಚ್ಚು ಹಚ್ಚಿದ್ದೇ ವರನಟ ಡಾ. ರಾಜ್ ಕುಮಾರ್ (ಅಣ್ಣಾವ್ರ) ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳು. ಐತಿಹಾಸಿಕ ಸಿನಿಮಾ ಮಾಡಲು ಇಷ್ಟ, ಕೆರಿಯರ್ ಆರಂಭದಲ್ಲಿ ಆ ರೀತಿ ಪ್ರಯತ್ನ ಮಾಡಿದ್ದೆ. ನಟನಾಗಿ “ಅಲ್ಲಮ ಪ್ರಭು” ಜೀವನ ಚರಿತ್ರೆ ಮಾಡಿದ್ದೆ. ‘ಹಲಗಲಿ” ಸಿನಿಮಾದ ಮೂಲಕ ಬಹು ವರ್ಷಗಳ ಕನಸೂ ಕೂಡ ಈಡೇರುತ್ತಿದೆ

ಪಾತ್ರ ಒಪ್ಪಿಕೊಂಡಾಗ ಭಯ ಕಾಡಿತ್ತು:

ಹಲಗಲಿ ಚಿತ್ರ ಒಪ್ಪಿಕೊಂಡಾಗ ಭಯ ಕಾಡಿತ್ತು, ಐತಿಹಾಸಿಕ ಚಿತ್ರಗಳನ್ನು ಆರಂಭಿಸಿ ಅರ್ಧದಲ್ಲಿ ಬಿಟ್ಟು ಬಿಡ್ತಾರೆ, ಅದಕ್ಕೆ ಬಜೆಟ್ ಕಾರಣ ಒಂದೆಡೆ ಆದರೆ ಸೂಕ್ತ ತಯಾರಿ ಇಲ್ಲದಿರುವುದು, ನಿರ್ದೇಶಕರಲ್ಲಿ ಸಿದ್ದತೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಐತಿಹಾಸಿಕ ಪಾತ್ರಗಳಿಗೆ ನ್ಯಾಯ ಕೊಡಲು ಆಗದೆ ನಿಲ್ಲಿಸಿ ಬಿಡ್ತಾರೆ. ನಿರ್ದೇಶಕ ಸುಕೇಶ್ ಅವರ ಹಲಗಲಿ ಚಿತ್ರದ ಪ್ರಸ್ತಾಪ ಮುಂದಿಟ್ಟಾಗ ಸ್ಕ್ರಿಪ್ಟ್ ಕಳುಹಿಸುವಂತೆ ಹೇಳಿದೆ, ಒದ್ತಾ ಒದ್ತಾ ಪಾತ್ರದೊಳಗೆ ಕಳೆದು ಹೋಗಿದ್ದೆ. ಜೊತೆಗೆ ನನ್ನ ಪಾತ್ರಕ್ಕಿಂತ ಮುನ್ನ ಕೆಲ ಬ್ರಿಟೀಷ್ ಎಪಿಸೋಡ್ ಮಾಡಿದ್ದರು, ಅದನ್ನು ನೋಡಿ ಚಿತ್ರದ ಮೇಲೆ, ನಿರ್ದೇಶಕರ ಮೇಲೆ ಮತ್ತಷ್ಟು ವಿಶ್ವಾಸ ಮತ್ತು ನಂಬಿಕೆ ಬಂತು ಎಂದು ಕಥೆ ಒಪ್ಪಿಕೊಂಡ ಹಿನ್ನೆಲೆ ಬಹಿರಂಗಪಡಿಸಿದರು,

ಚಿತ್ರಕ್ಕೆ ನಿರ್ದೇಶಕ ಸುಕೇಶ್ ಮತ್ತು ನಿರ್ಮಾಪಕ ಕಲ್ಯಾಣ್ ಚಿತ್ರದ ನಿಜವಾದ ಹಿರೋಗಳು, ಚಿತ್ರೀಕರಣದ ಸಮಯದಲ್ಲಿ ಬಜೆಟ್ ಜಾಸ್ತಿ ಆಯ್ತು ನೋಡಿಕೊಂಡು ಸಿನಿಮಾ ಮಾಡಿ ಎಂದು ಕೆಲ ನಿರ್ಮಾಪಕರು ಹೇಳುವುದುಂಟು, ಆದರೆ ಹಲಗಲಿ ಚಿತ್ರದಲ್ಲಿ ನಿರ್ಮಾಪಕರು ಖರ್ಚು ಮಾಡುವುದನ್ನು ನೋಡಿ, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಖರ್ಚಿನ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳಿದ್ದೇನೆ, ಆದರೆ ನಿರ್ಮಾಪಕ ಕಲ್ಯಾಣ್, ಬಜೆಟ್ ಬಗ್ಗೆ ತೆಲೆ ಕಡಿಸಿಕೊಳ್ಳಬೇಡಿ, ನಮ್ಮ ನಾಡಿನ ಮಣ್ಣಿನ ಕಥೆ, ಅಂದುಕೊಂಡಂತೆ ಚೆನ್ನಾಗಿ ತೆರೆಗೆ ತರೋಣ ನೀವು ಬಜೆಟ್ ಬಗ್ಗೆ ಚಿಂತಿಸಬೇಡಿ, ನಿಮ್ಮ ಪಾತ್ರದ ಕಡೆಗೆ ಗಮನ ಹರಿಸಿ ಎಂದಿದ್ಧಾರೆ, ಚಿತ್ರ ಮೂಡಿ ಬರುತ್ತಿರುವ ಪರಿಯ ಬಗ್ಗೆ ಖುಷಿ ಇದೆ ಎಂದರು

ವರ್ಸಟೈಲಿಟಿ ಇಷ್ಟಪಡುವೆ;

ಒಂದೇ ರೀತಿಯ ಪಾತ್ರ ಮಾಡುವುದಕ್ಕಿಂತ ಹೆಚ್ಚಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ ಕಾತುರವಿದೆ, ಇದೇ ಕಾರಣಕ್ಕಾಗಿಯೇ ಇತ್ತೀಚೆಗೆ ಪುಷ್ಪ ಚಿತ್ರದ ಜಾಲಿ ರೆಡ್ಡಿ ಪಾತ್ರವಿರಲಿ, ಜೀಬ್ರಾ ಚಿತ್ರದಲ್ಲಿ ಸತ್ಯದೇವ್ ಜೊತೆ ಕಾಣಿಸಿಕೊಂಡ ಪಾತ್ರವೇ ಇರಲಿ, ಅಥವಾ ಈಗ ಮಾಡುತ್ತಿರುವ ಹಲಗಲಿ ಚಿತ್ರದ ಜಡಗ ಪಾತ್ರ ಮನಸ್ಸಿಗೆ ಮುದ ನೀಡುತ್ತಿವೆ. ಸಿನಿಮಾದ ಬಜೆಟ್ ಪಕ್ಕಕ್ಕಿಟ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸುವುದನ್ನು ಎಂಜಾಯ್ ಮಾಡ್ತಾ ಇದ್ದೇನೆ.

‘ಹಲಗಲಿ’ ಸ್ವಾತಂತ್ರ್ಯ ಸಂಗ್ರಾಮದ ಕಥೆ, ಈ ರೀತಿಯ ಪಾತ್ರ ಮಾಡಲು ಮತ್ತು ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ.ಚಿತ್ರದ ಚಿತ್ರೀಕರಣವೂ ಚೆನ್ನಾಗಿ ಮೂಡಿ ಬರುತ್ತಿದೆ, ನಿರ್ದೇಶಕ ಸುಕೇಶ್ ಅದ್ಬುತಾವಾಗಿ ದೃಶ್ಯಗಳನ್ನು ಕಟ್ಟಿಕೊಡುತ್ತಿದ್ದಾರೆ. ಸ್ಪೀಡ್ ಆಗಿ ಕೆಲಸ ಮಾಡಿ ಅಬ್ಯಾಸ ಆಗಿ ಸುಮ್ಮನೆ ಕೂರಲು ಆಗಲ್ಲ, ಸೆಟ್‍ನಲ್ಲಿ ಆಗ ಕರಿತಾರಾ ಈಗ ಕರೀತಾರ ಅಂತ ಕಾಯ್ತೇನೆ. ಈ ಥರದ ಸಿನಿಮಾ ಮಾಡುವುದರಿಂದ ಕಲಿಕೆಗೆ ಅವಕಾಶವಿದೆ, ನಾನು ಕೂಡ ಕಲಿಯುತ್ತಿದ್ದೇನೆ

ಹಿಮ್ಮಡಿ ಪುಲಿಕೇಶಿ ಚಿತ್ರ ಮಾಡುವಾಸೆ:

ಹಿಮ್ಮಡಿ ಪುಲಿಕೇಶಿ ಚಿತ್ರ ಮಾಡಲು ಆಸೆ ಇದೆ, ಐತಿಹಾಸಿಕ ಪಾತ್ರ ಮಾಡಲು ಖುಷಿ ಇದೆ, ನಟನೆ ಅಂತ ಸ್ಪೂರ್ತಿ ಪಡೆದಿದ್ದೆ ಅಣ್ಣಾವ್ರ ಐತಿಹಾಸಿಕ, ಪೌರಾಣಿಕ ಪಾತ್ರ ನೋಡಿ. ಐತಿಹಾಸಿಕ ಚಿತ್ರ ಮಾಡುವಾಗ ಬಜೆಟ್, ನಿರ್ದೇಶಕರು ಸಿದ್ದತೆ ಎಲ್ಲವೂ ಮುಖ್ಯವಾಗುತ್ತದೆ, ಐತಿಹಾಸಿಕ ಪಾತ್ರ ಮಾಡುವ ಆಸೆ ಹಲಗಲಿ ಮೂಲಕ ಈಡೇರುತ್ತಿದೆ. ಇಮ್ಮಡಿ ಪುಲಕೇಶಿ ಚಿತ್ರದ ಮಾಡುವ ಆಸೆ ಇದೆ ಅದಕ್ಕೆ ಕಾಲ ಕೂಡಿ ಬರಬೇಕು ಎಂದು ಹೇಳಿದರು ಡಾಲಿ ಧನಂಜಯ

ಜೀವನ ಕ್ರಮ ಬದಲಾಗಿದೆ

ಮದುವೆಯಾದ ಮೇಲೆ ಜೀವನ ಕ್ರಮ ಬದಲಾಗಿದೆ. ಬೆಳಗ್ಗೆ ಐದು ಘಂಟೆಗೆ ಎದ್ದೇಳುವ ಅಭ್ಯಾಸ ಮಾಡಿಕೊಂಡಿದ್ದೇನೆ. ಯಾವುದೇ ಚಿತ್ರೀಕರಣ ಇರಲಿ ವಾಕಿಂಗ್ ಜಿಮ್ ಮಾಡಿಕೊಂಡು ಶೂಟಿಂಗ್‍ಗೆ ಹೋಗ್ರೇನೆ. ಸ್ನೇಹಿತರ ಭೇಟಿ ಮಾಡುವುದು ಕಡಿಮೆ. ಬೇಗ ಮನೆಗೆ ಹೋಗುತ್ತೇನೆ. ಹೆಂಡತಿ ಮನೆಯಲ್ಲಿ ಕಾಯುತ್ತಿರುತ್ತಾಳೆ. ಇತ್ತೀಚೆಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವೂ ಸಿಗುತ್ತಿದೆ

ಪಾತ್ರಗಳಿಗೆ ಒಗ್ಗಿಕೊಳ್ಳುತ್ತಿದ್ದೇನೆ :

ಲುಕ್‍ಗಿಂತ ಪಾತ್ರಗಳ ಮದ್ಯೆ ವಿಭಿನ್ನತೆ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ, ಒಂದು ಸೆಟ್‍ನಿಂದ ಇನ್ನೊಂದು ಸೆಟ್‍ಗೆ ಬಂದರೆ ಅದಕ್ಕೆ ಹೊಂದಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ, ಅದು ಇತ್ತೀಚೆಗೆ ಕರಗತವಾಗುತ್ತಿದೆ.

Daali Dhanajaya

“ಅಣ್ಣ ಫ್ರಮ್ ಮೆಕ್ಸಿಕೊ” ಚಿತ್ರಕ್ಕಾಗಿ ಕಳೆದ ಹಲವು ದಿನಗಳಿಂದ ತೊಡಗಿಸಿಕೊಂಡಿದ್ದೇನೆ, ಸ್ವಲ್ಪ ದಿನ ಅದರ ಚಿತ್ರೀಕರಣ ಮುಗಿದ ನಂತರ ಸಂಪೂರ್ಣವಾಗಿ ಹಲಗಲಿಯ ಜಡಗ ಪಾತ್ರದ ಕಡೆ ತೊಡಗಿಸಿಕೊಳ್ಳುವೆ. ಮುಗಿದ ನಂತರ ಹಲಗಲಿ ಗೆಟಪ್ ಬಂದುಬಿಡ್ತೇನೆ

ಪಾತ್ರದಿಂದ ನಾನೆಷ್ಟು ಖುಷಿಪಟ್ಟಿದ್ದೇನೆ ಎನ್ನುವುದು ಮುಖ್ಯ:

ನಟನಾಗಿ ಆಸೆ ಇದೆ, ಹಿಂದುರುಗಿ ನೋಡಿದರೆ ಒಂದಷ್ಟು ಪಾತ್ರಗಳು ಇರಬೇಕು. ಚಿತ್ರಗಳು ಎಷ್ಟು ಕೋಟಿ ವ್ಯಾಪಾರ ಮಾಡಿವೆ, ಅಥವಾ ಮಾಡಿದ್ದೇನೆ ಎನ್ನುವುದಕ್ಕಿಂತ ನಟನಾಗಿ ಯಾವ ರೀತಿಯ ಪಾತ್ರ ಮಾಡಿ ನಾನೆಷ್ಟು ಖುಷಿ ಪಟಟಿದ್ದೇನೆ ಎನ್ನುವುದು ಮುಖ್ಯ ಆಗುತ್ತೆ. ಈ ನಿಟ್ಟಿನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಆಸೆ ಮತ್ತು ತುಡಿತವಿದೆ

ಹಲಗಲಿಯ ಜಡಗ ಪಾತ್ರಕ್ಕೆ ಹಡಗಲಿಯ ಯೋಧರ ಸ್ಪೂರ್ತಿಯ ಕಥೆ ಒಂದೆಡೆ ಆದರೆ, ನಿರ್ದೇಶಕರು ನೀಡುತ್ತಿರುವ ಅಗತ್ಯ ಮಾಹಿತಿಗಳು ಮತ್ತು ಒಂದಷ್ಟು ಪುಸ್ತಕಗಳು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಲು ಸಹಕಾರಿಯಾಗಿವೆ ಎಂದು ಮಾಹಿತಿ ಹಂಚಿಕೊಂಡರು ಡಾಲಿ ಧನಂಜಯ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin