ಆಂಜನೇಯನಿಗೆ ಮತ್ತೊಂದು ಹೆಸರಿನಲ್ಲಿ ಸೆಟ್ಟೇರಿದ “ಪಿಂಗಾಕ್ಷ” ಚಿತ್ರಕ್ಕೆ ಮುಹೂರ್ತ
ಆಂಜನೇಯನಿಗೆ ಭಜರಂಗಿ, ಹನುಮಾನ್ ಇನ್ನು ಮುಂತಾದ ಹೆಸರುಗಳು ಇರಲಿದೆ. ಆ ಸಾಲಿಗೆ ಪಿಂಗಾಕ್ಷ ಎಂಬುದು ಸೇರ್ಪಡೆಯಾಗಿದೆ. ಈಗ ಇದೇ ಹೆಸರಿನಲ್ಲಿ ಚಿತ್ರ ನಂದಿನಿ ಲೇ ಔಟ್‍ದಲ್ಲಿರುವ ಶ್ರೀ ಬಲಮುರಿ ವರಸಿದ್ದಿ ವಿನಾಯಕನ ಸನ್ನಿದಿಯಲ್ಲಿ ಸೆಟ್ಟೇರಿದೆ.

ಬಿ.ವಾಸುದೇವರಾವ್ ನಿರ್ಮಾಣ ಮಾಡುತ್ತಿದ್ದು ಬಿ.ಭರತ್‍ವಾಸುದೇವ್ ಸಿನಿಮಾಕ್ಕೆ ಕಥೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ತವರ ಧ್ವನಿಗಳು ಎಂಬ ಕ್ಯಾಚಿ ಅಡಿಬರಹ ಇಂಗ್ಲೀಷ್‍ದಲ್ಲಿ ಹೇಳಲಾಗಿದೆ.
ಮಹೂರ್ತದ ಬಳಿಕ ಮಾತಿಗಿಳಿದ ನಿರ್ದೇಶಕ ಬಿ.ಭರತ್‍ವಾಸುದೇವ್ ಇಲ್ಲಿಯವರೆಗೂ ಹಾರರ್ ಚಿತ್ರಗಳು ಬಂದಿರಬಹುದು. ಆದರೆ ಇಲ್ಲಿ ಭಿನ್ನ ಎನ್ನುವಂತೆ ಪ್ರಾರಂಭದಿಂದ ಕೊನೆವರೆಗೂ ನೋಡುಗರಿಗೆ ಭಯಾನಕ ದೃಶ್ಯಗಳು ಮೈ ಜುಂ ಅನಿಸುವುದು ಹೈಲೈಟ್ ಆಗಿದೆ. ಪಿಂಗಾಕ್ಷ ಎನ್ನುವುದು ಸಂಸ್ಕ್ರತ ಪದ. ನಮ್ಮ ಕತೆಗೆ ಹೊಂದಿಕೊಳ್ಳುವುದರಿಂದ ಇದನ್ನೆ ಇಡಲಾಗಿದೆ. ಮನೆ ಯಜಮಾನ ದುಷ್ಟ ಶಕ್ತಿಯಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಯಾವ ರೀತಿ ಹೋರಾಟ ನಡೆಸುತ್ತಾನೆ. ಇದಕ್ಕೆ ದೈವಶಕ್ತಿ ಹೇಗೆ ಸಹಕಾರ ನೀಡುತ್ತದೆ ಎಂದರು

ಗಂಡ,ಹೆಂಡತಿ ಮಗುವಿನ ಮೇಲೆ ಸೇಡು ಇರದೆ ಇದ್ದರೂ, ದೆವ್ವ ಬರುವುದು ಯಾತಕೆ ಇದನ್ನು ಹೋಗಲಾಡಿಸಲು ಕಂಡುಕೊಂಡ ಮಾರ್ಗ ಏನು ಇದರೊಂದಿಗೆ ಪ್ರೀತಿ, ಮದುವೆ, ಸಂಸಾರ, ಮನರಂಜನೆ ತುಂಬಿದ ಮಿಶ್ರಣಗಳು ಇರಲಿದೆ. ನಾಲ್ಕು ಹಾಡು, ಮೂರು ಫೈಟ್ ಇರಲಿದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮಡಕೇರಿ, ಕಲಪಿ, ಮುನ್ನಾರ್, ಕೊಚ್ಚಿನ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂಬುದರ ಮಾಹಿತಿ ನೀಡಿದರು
ಎಸಿಪಿ ಪಾತ್ರದಲ್ಲಿ ಸಂತೋಷ್‍ಕುಮಾರ್ ನಾಯಕ. ರಿಶಾಗೌಡ ನಾಯಕಿ. ವಿಶೇಷ ಪಾತ್ರದಲ್ಲಿ ಭಾರ್ಗವ್. ಕೇರಳ ಮೂಲದ ಐರಾಮೆನನ್ ಉಪನಾಯಕಿ. ಇವರೊಂದಿಗೆ ಅವಿನಾಶ್, ರಂಗಾಯಣರಘು, ಕಿಟ್ಟಿತಾಳಿಕೋಟೆ, ತೆಲುಗಿನ ನಾಗಮಹೇಶ್, ಬಲರಾಜವಾಡಿ, ಶರತ್‍ಲೋಹಿತಾಶ್ವ, ವರ್ಧನ್, ಆಶಾ ಮುಂತಾದವರು ಅಭಿನಯಿಸುತ್ತಿದ್ದಾರೆ.

ಹಾಸ್ಯ ಹಾಗೂ ಹೆದರಿಸುವ ಸನ್ನಿವೇಶಗಳಿಗೆ ಬಿ.ರಾಜರತ್ನ ಮಾತು ಪೋಣಿಸಿದ್ದಾರೆ ಸಂಗೀತ ಕ್ರಿಸ್ಟೋಫರ್ ಜಾಯ್ಸನ್, ಛಾಯಾಗ್ರಹಣ ಜೆ.ಕೆ.ಗಣೇಶ್, ಸಾಹಸ ಯೋಗಾನಂದ್.ಡಿ.ಸಿ ಅವರದಾಗಿದೆ. ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ.


