interview : ಉತ್ತಮ ನಟಿಯಾಗಿ ಗುರುತಿಸಿಕೊಳ್ಳುವಾಸೆ : ಬೃಂದಾ ಆಚಾರ್ಯ
ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಾಯಕಿಯರು, ಕಲಾವಿದರ ದೊಡ್ಡ ದಂಡೇ ಇದೆ. ಉತ್ತಮ ಅವಕಾಶ ಮತ್ತು ಪಾತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ. ಅದರಲ್ಲಿ ನಾಯಕಿ ಬೃಂದಾ ಆಚಾರ್ಯ ಕೂಡ ಒಬ್ಬರು
ಮಹಾಕಾಳಿ ಧಾರಾವಾಹಿ ಯಿಂದ ಆರಂಭವಾಗಿ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ” ಪ್ರೇಮಮ್ ಪೂಜ್ಯಂ ” ಚಿತ್ರದ ಮೂಲಕ ಬಣ್ಣದ ಜಗತ್ತು ಪ್ರವೇಶಿಸಿದ ಬೃಂದಾ ಆಚಾರ್ಯ, ಇತ್ತೀಚೆಗೆ ಬಿಡುಗಡೆಯಾದ ” ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಭರವಸೆ ಮೂಡಿಸಿದ್ದಾರೆ. ಅವಕಾಶ ಸಿಕ್ಕರೆ ಎಂತಹ ಪಾತ್ರವನ್ನಾದರೂ ನಿಬಾಯಿಸಬಲ್ಲೇ ಎನ್ನುವುದನ್ನು ನಿರೂಪಿಸಿದ್ದಾರೆ. ಬಣ್ಣದ ಬದುಕಿನ ಯಾನದ ಬಗ್ಗೆ ನಟಿ ಬೃಂದಾ ಆಚಾರ್ಯ ಮಾಹಿತಿ ಹಂಚಿಕೊಂಡಿದ್ದಾರೆ.
- ಬಣ್ಣದ ಬದುಕಿನ ಪ್ರವೇಶ ಆಕಸ್ಮಿವೋ, ಅಥವಾ ಕನಸಿತ್ತಾ?
ನಟಿಯಾಗಬೇಕು ಎನ್ನುವುದು ಆಕಸ್ಮಿಕವೋ, ಅಲ್ಲ ಅಥವಾ ಚಿಕ್ಕಂದಿನಿಂದ ನಟಿಯಾಬೇಕು ಎನ್ನುವ ಕನಸು ಇರಲಿಲ್ಲ. ನಾಯಕಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಅಪ್ಪ, ಅಮ್ಮ ಇಬ್ಬರೂ ಶಿಕ್ಷಕರು, ಶಿಕ್ಷಕರ ಕುಟುಂಬ ಎಂದ ಮೇಲೆ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ. ಚಿಕ್ಕಂದಿನಿಂದ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಭರತ ನಾಟ್ಯ ಕಲಾವಿದೆ. ಸುತ್ರ ಮುತ್ತಲ ಜನ ನೀನು ಯಾಕೆ ನಟಿಯಾಗಬಾರದು ಪ್ರಯತ್ನ ಮಾಡು ಎಂದು ಹುರಿದುಂಬಿಸಿದರು. ಇಂಜಿನಿಯರಿಂಗ್ ಮಾಡಿಕೊಂಡು ಮುಂಬೈನಲ್ಲಿ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದೆ. ನಟಿಯಾಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿಗೆ ಶಿಫ್ಟ್ ಆಗಿ ಇನ್ಪೋಸಿಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡೆ.ಅಲ್ಲಿಂದ ಬಣ್ಣದ ಜಗತ್ತು ಸೆಳೆಯಿತು
- ನಟಿಯಾಗಿರದಿದ್ದರೆ ನಿಮ್ಮ ಆಯ್ಕೆ ಏನಾಗಿರುತ್ತು?
ನಾಯಕಿಯಾಗಿ ಗುರುತಿಸಿಕೊಳ್ಳದಿದ್ದರೆ. ಇಂಜಿನಿಯರ್ ಆಗಿಯೇ ಮುಂದುವರಿಯುತ್ತಿದ್ದೆ. ನಾನು ಕೆಲಸ ಮಾಡುತ್ತಿದ್ದ ಟೀಮ್ ನಲ್ಲಿದ್ದವರು ಕೆನಡಾದಲ್ಲಿ ಇದ್ದಾರೆ. ಬಹುಶಃ ನಾನು ಅಲ್ಲಿ ಇರುತ್ತಿದ್ದೆನೋ ಎನೋ.
- ಮೊದಲ ಬಣ್ಣ ಹಚ್ಚಿದ್ದು ?
ಮಹಾಕಾಳಿ ಎನ್ನುವ ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣದ ಜಗತ್ತಿಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದೆ. ಅದರಲ್ಲಿ ” ರತಿ” ಪಾತ್ರ ಆಯ್ಕೆ ಮಾಡಿಕೊಂಡಿದ್ದೆ. ರಾಘವೇಂದ್ರ ಹೆಗಡೆ ಅವರು ನಿಮ್ಮಲ್ಲಿ ಸಾಮಥ್ರ್ಯ ಇದೆ ಯಾಕೆ ಚಿಕ್ಕ ರೋಲ್ ಪಡೆದಿದ್ದೀಯಾ ಎಂದು ಉತ್ಹಾಹ ತುಂಬಿದರು. ನಂತರ ” ಶನಿ ” ಧಾರಾವಾಹಿಯಲ್ಲಿ ಅವಕಾಶ ಮಾಡಿಕೊಟ್ಟರು. ಈ ಎರಡು ಧಾರಾವಾಹಿ ನಟಿಸುವಾ ಇನ್ಪೋಸಿಸ್ ನಿಂದ ರಜೆ ಪಡೆದಿದ್ದೆ. “ಪ್ರೇಮಂ ಪೂಜ್ಯಂ ” ಗೆ ಆಯ್ಕೆಯಾಗುವ ರಜೆ ಮುಗಿಸಿ ಮತ್ತೆ ಅಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ.
- ಈವರೆಗಿನ ಸಿನಿಮಾ, ಧಾರಾವಾಹಿ ಅನುಭವ ಹೇಗಿದೆ.
ಇಲ್ಲಿಯ ತನಕ ಚೆನ್ನಾಗಿದೆ. ಚಿತ್ರರಂಗದಲ್ಲಿ ಅದೃಷ್ಟ ಕಂಡಕೊಳ್ಳಲು ನಿರ್ಧರಿಸಿದ ದಿನದಿಂದ ನೋಡಿದವರೆಲ್ಲಾ ನೀನು ಉತ್ತರ ಭಾರತದವಳಾ ಎಂದು ಕೇಳ್ತಾರೆ. ನಾನು ಅಪ್ಪಟ ಕನ್ನಡತಿ, ಜನ ಹೇಗೆ ಸ್ವೀಕರಿಸುತ್ತಾರೋ ಎನ್ನುವ ಭಯ ವಿದ್ದಾಗಲೂ ಮೊದಲ ಚಿತ್ರದಿಂದ ಮಾದ್ಯಮದ ಬೆಂಬಲ ಚೆನ್ನಾಗಿದೆ. ಇದು ನನಗೆ ಬಲ ಸಿಕ್ಕಂತಾಗಿದೆ.
ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಟಿಸುವಾಗ ಬೇರೆ ಯಾವ ಚಿತ್ರ ಮಾಡಲಿಲ್ಲ. ಚಿತ್ರರಂಗದಲ್ಲಿ ಏರಿಳಿತವಿದೆ. ಕುಟುಂಬ , ಸ್ನೇಹಿತರು ಬೆಂಬಲ ಮರೆಯಲಾಗದ್ದು.
- ಯಾವ ರೀತಿಯ ಪಾತ್ರ ಮಾಡುವಾಸೆ.
ಪೌರಾಣಿಕ ಪಾತ್ರ, ಭಾರತೀಯ ಇತಿಹಾಸ ಕುರಿತ ಚಿತ್ರಗಳಲ್ಲಿ ನಟಿಸುವಾಸೆ ಇದೆ. ವಿಭಿನ್ನವಾದ ಪಾತ್ರ ಪಾತ್ರ ಮಾಡುವ ಕನಸಿದೆ.
- ಯಾವ ನಟಿಯರ ಥರ ನಾನೂ ಪಾತ್ರ ಮಾಡಬೇಕು ಅನ್ನುವ ಆಸೆ ಇದೆಯಾ?.
ಇದುವರೆಗೂ ಆ ಥರ ಅನ್ನಿಸಿಲ್ಲ. ಒಳ್ಳೆಯ ಪಾತ್ರ ಮಾಡಿದಾಗ ನನಗೂ ಮಾಡಬೇಕು ಅನ್ನಿಸುವುದು ಸಹಜ. ಪ್ರತಿಯೊಬ್ಬರಿಂದ ಕಲಿಯುವ ಆಸೆ ಇದೆ. ಒಳ್ಳಯ ಸಿನಿಮಾ ಪಾತ್ರ ಬರುತ್ತಿವೆ. ನಾಯಕರಿಗೆ ಒಳ್ಳಯ ಪಾತ್ರ ಸೃಷ್ಟಿ ಮಾಡುತ್ತಿದ್ದಾರೆ. ಆ ಥರ ನನಗೂ ಸಿಕ್ಕಿದರೆ ಚೆನ್ನ.
- ಚಿತ್ರರಂಗದ ಅನುಭವ, ಏರಿಳಿತ ,ಕುಟುಂದ ಬೆಂಬಲ
ಮೊದಲ ಚಿತ್ರ “ಪ್ರೇಮಂ ಪೂಜ್ಯಂ” ಚಿತ್ರ ಮಾಡುವಾಗ ಕೊರೊನಾ ಕಾಣಿಸಿಕೊಂಡಿತು. ಹೀಗಾಗಿ ಏರಿಳಿತ ಅಲ್ಲಿಂದಲೇ ಆರಂಭವಾಯಿತು. ಅದು ಇಲ್ಲ ಅಂದ್ರೆ ಚೆನ್ನಾಗಿಲ್ಲ. ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಸಿನಿಮಾಕ್ಕಾಗಿ ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ಟಾಗ ಅಪ್ಪಾಜಿ ಹೆದರಿದ್ದರು. ನಿನಗೆ ಏನು ಗೊತ್ತಿಲ್ಲ. ಅಲ್ಲಿ ಏನು ಮಾಡ್ತೀಯಾ ಎಂದು ಪ್ರಶ್ನಿಸಿದ್ದರು. ಒಂದು ವೇಳೆ ಸಮಸ್ಯೆ ಆದರೆ ಐಟಿ ಕ್ಷೇತ್ರಕ್ಕೆ ಮರಳಿ ಬರುತ್ತೇನೆ ಎಂದು ಭರವಸೆ ನೀಡಿದ್ದೆ. ಅಪ್ಪ, ಅಮ್ಮನಿಗೆ ಡಾಕ್ಟರ್, ಇಲ್ಲವೆ ಇಂಜಿನಿಯರ್ ಆಗಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಅಪ್ಪ ಈಗಲೂ ಇಂಜಿನಿಯರ್ ಅಂತಾರೆ ಹೊರತು ನಟಿ ಅಂತ ಹೇಳುವುದಿಲ್ಲ. ಅವರ ಖುಷಿ . ಅಪ್ಪ,ಅಮ್ಮನ ನಿರಾಸೆ ಮಾಡಲು ಇಷ್ಟಪಡುವುದಿಲ್ಲ.ಜನ ಪ್ರೀತಿ ಕೊಟ್ಟಿರುವುದು ಖುಷಿ ಇದೆ. ಪ್ರೇಮಂ ಪೂಜ್ಯಂ ಚಿತ್ರ ಕುಟುಂಬದ ರೀತಿ ಇತ್ತು.
- ಚಿತ್ರಕ್ಕಾಗಿ ಮಾರ್ಷೆಲ್ ಆರ್ಟ್ ಕಲಿತಿದ್ದೀರಂತೆ ಹೌದಾ.
ಜೂಲಿಯಟ್ ಎನ್ನುವ ಸಿನಿಮಾಗಾಗಿ ಎರಡು ತಿಂಗಳು ಮಾರ್ಷೆಲ್ ಆರ್ಟ್ ,- ಸಮರಕಲೆ ಕಲಿತಿದ್ದೇನೆ. ಆಕ್ಷನ್ ನೀನು ಮಾಡುತ್ತೀಯಾ ಎಂದಾಗಲೂ ಸವಾಲಾಗಿ ತೆಗೆದುಕೊಂಡು ಮಾಡಿದೆ.ಕೌಸಲ್ಯ ಸುಪ್ರಜಾ ಚಿತ್ರದ ಮೂಲಕ ಜನ ಇಂದಿಗೂ ಗುರುತಿಸುತ್ತಾರೆ.ಇದು ಖುಷಿ ವಿಚಾರ. ಶಿವಾನಿ ಪಾತ್ರ ಜನರ ಮನಸ್ಸಿನಲ್ಲಿ ಉಳಿದೆ. ಲೇಡಿ ಡಾನ್ ಅಂತ ಕರೀತಾರೆ. ಎಲ್ಲರನ್ನು ಹಿಂದಿಕ್ಕಿ ಬಂದದ್ದರಿಂದ ಹಾಗೆ ಕರೀತಾರೆ. ಪ್ರತಿದಿನ ಹೊಸದನ್ನು ಕಲಿಯಲು ಬಯಸುತ್ತೇನೆ. ಒಳ್ಳೆಯ ಚಿತ್ರ ಕೈಯಲ್ಲಿವೆ
- ಒಂದ್ಸಲ ಮೀಟ್ ಮಾಡೋಣ ಎಲ್ಲಿಗೆ ಬಂತು
ಎಸ್. ನಾರಾಯಾಣ್ ನಿರ್ದೇಶನ ಮಾಡುತ್ತಿರುವ ” ಒಂದ್ ಸಲ ಮೀಟ್ ಮಾಡೋಣ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಶ್ರೇಯಸ್ ಮಂಜು ನಾಯಕ. ಆಲ್ಬಂ ಹಾಡು ಮಾಡ್ತಾ ಇದ್ದೇನೆ. ಹೃದಯ ತಟ್ಟುವ ಹಾಡು, ಸದ್ಯ ಬಿಡುಗಡೆಗೆ ಸಜ್ಜಾಗಿದೆ. ನಾಲ್ಕು ಚಿತ್ರ ಸದ್ಯ ಕೈಯಲ್ಲಿವೆ. ಸದ್ಯದಲ್ಲಿಯೇ ಮಾಹಿತಿ ನೀಡಲಾಗುವುದು.
- ಸಿನಿಮಾ ರಂಗದಲ್ಲಿ ನಿಮ್ಮ ಗುರಿ
ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಹೃದಯ ಏನು ಹೇಳುತ್ತದೋ ಅದನ್ನು ಮಾಡುತ್ತೇನೆ.
- ಕುಟುಂಬದ ಬೆಂಬಲ ಹೇಗಿತ್ತು?
ಮೊದಲು ಸಹಜವಾಗಿ ಆತಂಕವಿತ್ತು. ಮನೆಯಲ್ಲಿ ಯಾವತ್ತೂ ಬೇಡ ಅಂದಿಲ್ಲ.ನಿನ್ನ ಇಷ್ಟ ನೋಡು ಎನ್ನುತ್ತಿದ್ದರು. ಬಿಡುಗಡೆಯಾಗಿರುವ ಮೂರು ಚಿತ್ರಗಳ ಬಗ್ಗೆ ಅಪ್ಪ, ಅಮ್ಮ ಖುಷಿಯಾಗಿದ್ದಾರೆ.ಅವರನ್ನು ನಿರಾಸೆ ಗೊಳಿಸಿ ನಾನು ಏನೂ ಸಾದನೆ ಮಾಡಬೇಕಾಗಿಲ್ಲ. ಅಕ್ಕನ ಸಹಕಾರ ಚೆನ್ನಾಗಿದೆ.