Interview: ಕನ್ನಡಕ್ಕೆ ಹೊಸ ಜಾನರ್ ಪರಿಚಯ : ಗಡಿ ಭಾಗದ ಇನ್‍ಟೆನ್ಸ್ ಕಥೆ ಹೇಳಲು ಸಿದ್ದ: ನಿರ್ಮಾಪಕ ತರುಣ್ ಸುಧೀರ್
” ಕಾಟೇರ ” ಚಿತ್ರದ ಭರ್ಜರಿ ಯಶಸ್ಸಿನ ನಂತರ ಹ್ಯಾಟ್ರಿಕ್ ಚಿತ್ರಗಳ ಸರದಾರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಚಿತ್ರರಂಗದವರಿಗಷ್ಟೇ ಅಲ್ಲ ಅವರ ಅಭಿಮಾನಿಗಳು ,ಸಿನಿಮಾ ಪ್ರೇಕ್ಷಕರಲ್ಲಿಯೂ ಕಾತುರ ಇತ್ತು ಅದಕ್ಕೆ ಉತ್ತರ ಸಿಕ್ಕಿದೆ.
“ಏಳುಮಲೆಯ ಮಡಿಲಿನಲ್ಲಿ ಎದೆ ನಡುಗುಸಿದ ಪ್ರೇಮಕಥೆ”ಯನ್ನು ಚಿತ್ರ ಪ್ರೇಕ್ಷಕರ ಮನಮುಟ್ಟಲು ಸಿದ್ದವಾಗುತ್ತಿದೆ. ಈ ಬಾರಿ ತರುಣ್ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ನಿರ್ಮಾಣ ಮಾಡುವ ಮೂಲಕ “ಕಾಟೇರ” ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಪುನೀತ್ ರಂಗಸ್ವಾಮಿ ಅವರಿಗೆ ಆಕ್ಷನ್ ಕಟ್ ಹೇಳುವ ಜವಾಬ್ದಾರಿ ಹೊರಿಸಿ, ತನ್ನೊಂದಿಗೆ ತನ್ನ ಜೊತೆ ಇರುವ ಮಂದಿಯೂ ಬೆಳೆಯಲಿ ಎನ್ನುವ ದೊಡ್ಡ ಗುಣ ಪ್ರದರ್ಶಿಸಿದ್ದಾರೆ.
ಮತ್ತೊಂದು ಎದೆ ನುಡುಗಿಸಿದ ಪ್ರೇಮಕಥೆಯನ್ನು ಚಿತ್ರದ ರೂಪದಲ್ಲಿ ತೆರೆಗೆ ತರಲು ನಿರ್ಮಾಪಕ ತರುಣ್ ಸುಧೀರ್ ಮುಂದಾಗಿದ್ದಾರೆ. ಅವರ ಜೊತೆ ಯಶಸ್ವಿ ಚಿತ್ರಗಳ ಸದಭಿರುಚಿಯ ನಿರ್ಮಾಪಕ ಅಟ್ಲಾಂಟ ನಾಗೇಂದ್ರ ಕೈ ಜೋಡಿಸಿದ್ದಾರೆ.
ಹೊಸ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತಯಾರಾಗುತ್ತಿದೆ. ಸದ್ಯ “ಪ್ರೊಡಕ್ಷನ್ಸ್ – 2” ಎಂದು ಹೆಸರಿಟ್ಟಿದ್ದು ಈ ಕುರಿತು ನಿರ್ಮಾಪಕ ತರುಣ್ ಕಿಶೋರ್ ಸುಧೀರ್ ಮಾಹಿತಿ ಹಂಚಿಕೊಂಡರು.
- ” ಕಾಟೇರ” ಚಿತ್ರದ ಯಶಸ್ಸಿನ ನಂತರ ಮುಂದಿನ ನಿರ್ದೇಶನದ ಚಿತ್ರ ಯಾವುದು ಎನ್ನುವ ಕುತೂಹಲ ಇತ್ತು. ಇದೀಗ ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದೀರಿ. ಆ ಬಗ್ಗೆ ಹೇಳುವುದಾದರೆ
“ಕಾಟೇರ” ಚಿತ್ರದ ನಂತರ ಹೊಸ ಚಿತ್ರಕ್ಕೆ ಒಂದಷ್ಟು ಸಮಯ ಬೇಕಾದ ಹಿನ್ನೆಲೆಯಲ್ಲಿ ಸುಮ್ಮನೆ ಕೂರುವುದು ಬೇಡ ಎಂದು ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. “ಕಾಟೇರ ” ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ರಂಗಸ್ವಾಮಿ ಹೇಳಿದ ಒಂದು ಎಳೆ ಇಷ್ಟವಾಗಿತ್ತು. ಅದರ ಬಗ್ಗೆ ಕೆಲಸ ಮಾಡಿ ಈಗ ಕಥೆ ಅಂತಿಮಗೊಳಿಸಿದ್ದೇವೆ. ಇದೀಗ ಚಿತ್ರೀಕರಣಕ್ಕೆ ಸಜ್ಜುಗೊಂಡಿದ್ದೇವೆ.
- ಯಾವಾಗಿನಿಂದ ಚಿತ್ರೀಕರಣ, ಎಲ್ಲೆಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ.
ಡಿಸೆಂಬರ್ 25 ರಿಂದ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕ, ಆಂದ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಭಾಗದಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಲಾಗಿದೆ. ಇನ್ನೂ ಲೋಕೇಷನ್ ಅಂತಿಮಗೊಳಿಸಿಲ್ಲ. ಸದ್ಯದಲ್ಲಿಯೇ ಯಾವ ಯಾವ ಪ್ರದೇಶದಲ್ಲಿ ಚಿತ್ರೀಕರಣ ಮಾಡಬೇಕು ಎನ್ನುವ ಕುರಿತು ನಿರ್ದಾರ ಕೈಗೊಳ್ಳಲಾಗುವುದು.
• ಹೊಸ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದೆಯೇ ಅಥವಾ ಯಾವಾಗ ಟೈಟಲ್ ಬಿಡುಗಡೆ ಮಾಡುವ ಉದ್ದೇಶವಿದೆ.
ಚಿತ್ರಕ್ಕೆ ಇನ್ನೂ ಹೆಸರು ಅಂತಿಮ ಮಾಡಿಲ್ಲ. ಸದ್ಯ ಪ್ರೊಡಕ್ಷನ್ಸ್ ನಂಬರ್ -2 ಹೆಸರಲ್ಲಿ ಚಿತ್ರೀಕರಣ ಆರಂಭ ಮಾಡುತ್ತಿದ್ದೇವೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ಅಥವಾ ಸಂಕ್ರಾಂತಿಗೆ ಟೈಟಲ್ ಪ್ರಕಟಿಸಲಾಗುತ್ತಿದೆ.
- “ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ ಎನ್ನುವ ಅಡಿ ಬರಹವಿದೆ .ಚಿತ್ರದ ಬಗ್ಗೆ ಹೇಳುವುದಾದರೆ
ಕರ್ನಾಟಕ ಮತ್ತು ತಮಿಳುನಾಡು ಭಾಗದಲ್ಲಿ ನಡೆದ ಘಟನೆಯ ನೆರಳಲ್ಲಿ ಚಿತ್ರ ಕೈಗೆತ್ತಿಕೊಳ್ಳಲಾಗಿದೆ. ಇದೊಂದು ನೈಜ ಘಟನೆಯ ಆಧಾರಿತ ಚಿತ್ರ. ಶೇಕಡಾ 100 ರಷ್ಟು ಇನ್‍ಟೆನ್ಸ್ ಲವ್ ಸ್ಟೋರಿ ಇರಲಿದೆ. ಜೊತೆಗೆ ಥ್ರಿಲ್ಲರ್ ,ಆಕ್ಷನ್ ಎಲಿಮೆಂಟ್ ಇರಲಿದೆ. ಕನ್ನಡಕ್ಕೆ ಹೊಸ ಜಾನರ್ ಸಿನಿಮಾ ಆಗಲಿದೆ ಎನ್ನುವ ವಿಶ್ವಾಸವಿದೆ.
- ಚಿತ್ರದ ನಾಯಕ ಯಾರು, ಯಾರೆಲ್ಲಾ ಕಲಾವಿದರು ಇದ್ದಾರೆ.
ಕಲಾವಿದರನ್ನು ಅಂತಿಮ ಆಯ್ಕೆ ಮಾಡಲಾಗುತ್ತಿದೆ. ನಾಯಕ ಯಾರು ಎನ್ನುವುದನ್ನು ಮುಂದಿನ ವಾರ ಪ್ರಕಟಿಸಲಾಗುತ್ತಿದೆ. ಆ ಬಳಿಕ ಹಂತ ಹಂತವಾಗಿ ಪಾತ್ರಕ್ಕೆ ತಕ್ಕಂತೆ ಕಲಾವಿದರ ಆಯ್ಕೆ ನಡೆಯಲಿದೆ.
ಕಥೆ ಎಲ್ಲಿಯದು
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಮನ ಮಿಡಿಯುವ ಪ್ರೇಮಕಥೆಯ ಚಿತ್ರವನ್ನು ಪುನೀತ್ ರಂಗಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೈಗೆ ಹಾಕಿದ ಬೇಡಿ, ಮತ್ತೊಂದು ಕೈನಲ್ಲಿ ಗತಕಾಲದ ಮೊಬೈಲ್ ಹಿಡಿದ ವ್ಯಕ್ತಿ ಬೆಂಕಿ ಹತ್ತಿಕೊಂಡ ಜೀಪಿನಿಂದ ಹೊರ ಬರುವ ಪ್ರಯತ್ನ ಮಾಡುತ್ತಿರುವ ಪೋಸ್ಟರ್ ಮೊದಲ ಲುಕ್ ನಲ್ಲಿ ಗಮನ ಸೆಳೆದಿದೆ
ಚಿತ್ರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿರುತ್ತಿದೆ. ಚಿತ್ರಕ್ಕೆ ಸುಧಾಕರ್ ಎಸ್ ರಾಜ್ ಕ್ಯಾಮರಾ, ಕೆ ಎಂ ಪ್ರಕಾಶ್ ಸಂಕಲನವಿದೆ. ಚಿತ್ರವನ್ನು ನರಸಿಂಹ ನಾಯಕ ( ರಾಜು ಗೌಡ) ಅರ್ಪಿಸುತ್ತಿದ್ದಾರೆ.