Exclusive Interview: ‘ಪುಷ್ಪವತಿ’ ಹಾಡು ಪಾಪುಲಾರಿಟಿ ಕೊಟ್ಟಿದೆ: ಎಚ್ಚರಿಕೆಯಿಂದ ಕಥೆ ಆಯ್ಕೆ- ನಿಮಿಕಾ ರತ್ನಾಕರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕ್ರಾಂತಿ” ಚಿತ್ರದ ಶೇಕ್ ಇಟ್ “ಪುಷ್ಪವತಿ” ಹಾಡಿಗೆ ನಡು ಬಳುಕಿಸಿ ರಾತ್ರಿ ಬೆಳಗಾಗುವುದರಲ್ಲಿ ಜನಪ್ರಿಯ ತಾರೆಯಾಗಿ ಹೊರಹೊಮ್ಮಿದವರು ನಟಿ ನಿಮಿಕಾ ರತ್ನಾಕರ್. ಈ ಹಾಡಿನಲ್ಲಿ ಕಾಣಿಸಿಕೊಳ್ಳುವ ಮುನ್ನ ಮೂರ್ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿದ್ದರೂ ಸಿಗದ ಮನ್ನಣೆ ಹಾಡಿನಲ್ಲಿ ಸಿಕ್ಕಿದೆ. ಕರ್ನಾಟಕದ ಹೊಸ ಕ್ರಷ್ ನಿಮಿಕಾ ರತ್ನಾಕರ್
“ಪುಷ್ಪವತಿ” ಹಾಡಿನ ಬಳಿಕ ನಟಿ ನಿಮಿಕಾ ರತ್ನಾಕರ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಜೊತೆಗೆ ಅವರಿಗೆ ಸಿನಿಮಾ ಇಂಡಸ್ಟ್ರಿಯಿಂದ ಒಳ್ಳೆಯ ರೆನ್ಸಾನ್ಸ್ ಕೂಡ ಬರುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಗುರುತಿಸುವುದು ನಟಿಯಾಗಿ ನಿಮಿಕಾ ಅವರಲ್ಲಿ ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಸ್ಪೂರ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇದೀಗ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಕುರಿತು ಮುಕ್ತವಾಗಿ ಮಾತು ಹಂಚಿಕೊಂಡಿದ್ದಾರೆ ನಿಮಿಕಾ ರತ್ನಾಕರ್.
• ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಜೊತೆ ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡಬಹುದಾ?
ಹೌದು, ಓಂ ಪ್ರಕಾಶ್ ರಾವ್ ಅವರ ಜೊತೆ “ಫೀನಿಕ್ಸ್” ಚಿತ್ರದಲ್ಲಿ ಮೂರು ನಾಯಕಿಯರಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂದು ಮಹಿಳಾ ಪ್ರಧಾನ ಚಿತ್ರ. ಕಥೆ ಕೇಳಿ ಥ್ರಿಲ್ಲರ್ ಆಗಿದ್ದೇನೆ. ಹೀಗಾಗಿ ನಟಿಸಲು ಒಪ್ಪಿಕೊಂಡಿದ್ದೇನೆ. ಈ ರೀತಿಯ ಪಾತ್ರ ನನಗೆ ಹೊಸದು. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
• “ಫೀನಿಕ್ಸ್” ನಲ್ಲಿ ನಿಮ್ಮ ಪಾತ್ರ ಏನು? ಯಾವ ರೀತಿ ಇರಲಿದೆ.
ಇದೊಂದು ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದಲ್ಲಿ ಎರಡು ಶೇಡ್‍ನಲ್ಲಿ ನನ್ನ ಪಾತ್ರ ಬರಲಿದೆ. ಮೊದಲರ್ಧ ಒಂದು ರೀತಿ ಮತ್ತು ದ್ವಿತೀಯಾರ್ಧದಲ್ಲಿ ಮತ್ತೊಂದು ರೀತಿಯಲ್ಲಿ ಪಾತ್ರ ಮೂಡಿ ಬರಲಿದೆ. ಓಂ ಪ್ರಕಾಶ್ ರಾವ್ ಅವರ ಜೊತೆ ಈ ಹಿಂದೆ “ತ್ರಿಶೂಲಂ” ಚಿತ್ರದಲ್ಲಿ ನಟಿಸಿದ್ದೆ. ಅವರೊಂದಿಗೆ ಇದು ನನ್ನ ಎರಡನೇ ಚಿತ್ರ. ಚಿತ್ರದಲ್ಲಿ ನಟಿಸಲು ಕಾತುರದಿಂದ ಇದ್ದೇನೆ. ಇನ್ನೂ ಯಾವಾಗ ಚಿತ್ರ ಆರಂಭ ಎನ್ನುವುದು ಇನ್ನು ತಿಳಿದಿಲ್ಲ.
• ತ್ರಿಶೂಲಂ ಚಿತ್ರ ಯಾವ ಹಂತದಲ್ಲಿದೆ. ಇದರಲ್ಲಿ ನಿಮ್ಮ ಪಾತ್ರ ಏನು?
“ತ್ರಿಶೂಲಂ” ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಸದ್ಯದಲ್ಲಿಯೇ ಚಿತ್ರ ಬಿಡುಗಡೆಯಾಗಬಹುದು. ಈ ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ರವಿಚಂದ್ರನ್ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.ಚಿತ್ರ ಬಿಡುಗಡೆಯಾದ ಬಳಿಕ ದೊಡ್ಡ ಬ್ರೇಕ್ ಸಿಗಬಹುದು ಎನ್ನುವ ನಂಬಿಕೆ ಇದೆ. ಪಾತ್ರ ಅಷ್ಟು ಚೆನ್ನಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
• ಕ್ರಾಂತಿ ಚಿತ್ರದ ಪುಷ್ಪವತಿ ಹಾಡು ನಿಮ್ಮನ್ನು ಸ್ಟಾರ್ ನಟಿಯಾಗಿಸಿತು.ಈ ಬಗ್ಗೆ ಹೇಳುವುದಾದರೆ?
“ಕ್ರಾಂತಿ” ಚಿತ್ರದಲ್ಲಿ ನಟಿಸಿದ ಒಂದೇ ಒಂದು ಹಾಡು ನನ್ನನ್ನು ಚಿತ್ರರಂಗದಲ್ಲಿ ಹಾಗು ಜನರು ಗುರುತಿಸುವಂತಾಯಿತು. ಇದಕ್ಕಾಗಿ ಇಡೀ ತಂಡಕ್ಕೆ ಹಾಗು ದರ್ಶನ್ ಸಾರ್ ಅವರಿಗೆ ನಾನು ಅಬಾರಿ. ಸಹಜವಾಗಿ ನಾಯಕಿಯರಿಗೆ ನಾವೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಅಲ್ಲವೇ. ನನಗೂ ಅದೇ ರೀತಿಯ ಆಸೆ ಇತ್ತು. ಆದರೆ ನಾನು ನಟಿಸಿದ ಚಿತ್ರಗಳು ಜನಪ್ರಿಯತೆ ತಂದುಕೊಡಲಿಲ್ಲ. ಒಂದೇ ಒಂದು ಹಾಡು ನನ್ನನ್ನು ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡಿತು. ಇದು ನಿಜಕ್ಕೂನ ಖುಷಿಯ ಸಂಗತಿ.
• ಚಿತ್ರದ ಹಾಡು ಬಿಡುಗಡೆಯಾದ ನಂತರ ನಿಮಗೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?
“ಪುಷ್ಪವತಿ” ಹಾಡು ಬಿಡುಗಡೆಯಾದ ಮೇಲೆ ಮೂರು ನಾಲ್ಕು ತಿಂಗಳು ಈ ಹಾಡಿನ ಬಗ್ಗೆಯೇ ಎಲ್ಲರ ಮಾತುಕತೆ, ದೇಶ ವಿದೇಶಗಳಲ್ಲಿ ಹಾಡಿನ ಜನಪ್ರಿಯತೆಗೆ ಭಾಷೆ ಗೊತ್ತಿಲ್ಲದವರೂ ರೀಲ್ಸ್ ಮಾಡಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳು ಹಾಡು ಬಂದರೆ ಊಟ ಮಾಡೋದು, ಹಾಡು ಹಾಕಿದರೆ ಮಲಗುವುದು ಸೇರಿದಂತೆ ಅನೇಕ ವಿಷಯ ಕೇಳಿದ್ದೇನೆ. ಆಟೋ ಹಿಂದೆ ನನ್ನ ಪೋಟೊ ಹಾಕಿಕೊಂಡು ಓಡಾಡಿದ್ದಾರೆ. ಜೊತೆಗೆ ಚಿತ್ರರಂಗದಿಂದ, ದರ್ಶನ್ ಸಾರ್ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
• ದರ್ಶನ್ ಅವರ ಅಭಿಮಾನಿಗಳಿಂದ ನಿಮಗೆ ಸಿಕ್ಕ ಪ್ರೋತ್ಸಾಹ ಹೇಗಿತ್ತು?
ಪುಷ್ಪವತಿ” ಹಾಡು ಬಿಡುಗಡೆಯಾದ ನಂತರ ದರ್ಶನ್ ಸಾರ್ ಅಭಿಮಾನಿಗಳು ನನ್ನನ್ನು ಟ್ಯಾಗ್ ಮಾಡಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯ ಹಂಚಿಕೊಂಡರು. ಇದು ಖುಷಿಯಾಯಿತು. ನಟಿಯಾಗಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚು ಮಾಡಿತು.
• ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಸಿನಿಮಾದಲ್ಲಿ ನಾಯಕಿಯಾಗಬೇಕು ಅಂತ ಅನ್ನಿಸಿಲ್ಲವೇ?
“ಪುಷ್ಪವತಿ” ಹಾಡಿನ ಬಳಿಕ ಬಹುತೇಕ ಅಭಿಮಾನಿಗಳು ಡಿ ಬಾಸ್ ಜೊತೆ ಯಾವಾಗ ನಾಯಕಿಯಾಗಿ ನಟಿಸುತ್ತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ. ಈ ವಿಷಯವನ್ನೂ ದರ್ಶನ್ ಸಾರ್ ಅವರ ಗಮನಕ್ಕೆ ತಂದಿದ್ದೇನೆ. ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ನೋಡೋಣ. ನನಗಂತೂ ಅವರ ಜೊತೆ ನಟಿಸುವ ಆಸೆ ಇದೆ.ನೋಡಬೇಕು ಎಲ್ಲವೂ ಕಥೆಯ ಮೇಲೆ ಅವಲಂಬಿತವಾಗಿದೆ ಅಲ್ಲವೇ
• ಪುಷ್ಪವತಿ ಹಾಡಿನ ನಂತರ ಮತ್ತು ಮುಂಚೆ ನಿಮ್ಮ ಸಿನಿಮಾಯಾನದ ಬಗ್ಗೆ ಹೇಳುವುದಾದರೆ?
ಕ್ರಾಂತಿ ಚಿತ್ರದ “ಪುಷ್ಪವತಿ” ಹಾಡಿಗೂ ಮುನ್ನ ರಾಮಧನ್ಯ, ಅಬ್ಬರ, ಮಿಸ್ಟರ್ ಬ್ಯಾಚುಲರ್ ಸೇರಿದಂತೆ ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಚಿತ್ರ ನನಗೆ ಯಶಸ್ಸು ತಂದುಕೊಟ್ಟಿರಲಿಲ್ಲ.ಯಶಸ್ಸಿಗಾಗಿ ತುಂಬಾ ಹಂಬಲಿಸಿದ್ದೆ. ಅಂತಹ ಸಮಯದಲ್ಲಿ ಸಿಕ್ಕಿದ್ದೇ ಪುಷ್ಪವತಿ ಹಾಡು. ಈ ಹಾಡು ನನ್ನನ್ನು ಚಿತ್ರರಂಗದಲ್ಲಿ ಗುರುತಿಸುವ ಜೊತೆಗೆ ಜವಾಬ್ದಾರಿ ಹೆಚ್ಚುವಂತೆ ಮಾಡಿತು. ಪುಷ್ಪವತಿ ಹಾಡಿಗೂ ಮುನ್ನ ಒಂದು ರೀತಿ ಇದ್ದರೆ ನಂತರ ನಂತರ ಸಿಕ್ಕ ಯಶಸ್ಸೇ ಬೇರೆ. ಅದನ್ನು ಪದಗಳಲ್ಲಿ ವರ್ಣಿಸಲಾಗದು.
• ಯಾವ ರೀತಿಯ ಪಾತ್ರ ಮಾಡುವಾಸೆ?
ನಾನಿನ್ನೂ ಚಿತ್ರರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡುವ ಕಸನು ಕಟ್ಟಿಕೊಂಡವಳು, ಇಂತಹುದೇ ಪಾತ್ರ ಎಂದು ಕಟ್ಟು ಬೀಳುವುದಿಲ್ಲ.ಬದಲಾಗಿ ಸಿಕ್ಕ ಎಲ್ಲಾ ಉತ್ತಮ ಅವಕಾಶಗಳಲ್ಲಿ ಮತ್ತು ಚಿತ್ರಗಳಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಅದರಲ್ಲಿಯೂ ವಿಶೇಷವಾಗಿ ಡಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಉದ್ದೇಶವಿದೆ. ಜೊತೆಗೆ ಜನರು ಗುರುತಿಸುವ ಪಾತ್ರದಲ್ಲಿ ನಟಿಸುವ ಗುರಿ ಇದೆ ಎಂದು ತಮ್ಮ ಕನಸು ಬಿಚ್ಚಿಟ್ಟರು. ಹೀಗಾಗಿ ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಡೆಗೆ ಗಮನ ಹರಿಸಿದ್ದೇನೆ. ಹಲವು ಅವಕಾಶ ಗಳು ಬರುತ್ತಿವೆ. ಅಳೆದು ತೂಗಿ ಒಳ್ಳೆಯ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವೆ
• ಕಡೆಯದಾಗಿ ಪುಷ್ಪವತಿ ಹಾಡಿನ ಬಗ್ಗೆ ನಿಮ್ಮ ಅಭಿಪ್ರಾಯ
ಚಿತ್ರರಂಗದಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಮುಖ್ಯ.ಅದಕ್ಕಾಗಿ ನಾನು ಹಂಬಲಿಸಿದ್ದೇನೆ. ಪುಷ್ಪವತಿ ಹಾಡಿನ ಮೂಲಕ ಯಶಸ್ಸು ಸಿಕ್ಕಿದೆ. ಹಾಡಿನ ಜನಪ್ರಿಯತೆ ಬಳಿಕ ನನ್ನನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ನೀವು ಈ ಹಿಂದೆ ಸಿನಿಮಾ ಮಾಡಿದ್ದೀರಲ್ಲ ಎನ್ನುವುದು ಗೊತ್ತಾಯಿತು. ಇಡೀ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾಗಿದ್ದೇನೆ ಖುಷಿ ಇದೆ. ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಉದ್ದೇಶವಿದೆ,