ಚಿತ್ರರಂಗದಲ್ಲಿ ಒಳ್ಳೆಯ ನಟಿಯಾಗಿ ಗುರುತಿಸಿಕೊಳ್ಳುವಾಸೆ: ನಟಿ ವೃಷಾ ಪಾಟೀಲ್
ಉತ್ತರ ಕರ್ನಾಟಕದ ಮಂದಿ ಚಿತ್ರರಂಗಕ್ಕೆ ಬರುವುದು ಅಪರೂಪ. ಅದರ ಸಾಲಿಗೆ ಮತ್ತೊಬ್ಬ ಪ್ರತಿಭಾನ್ವಿತ ನಟಿ ವೃಷಾ ಪಾಟೀಲ್, ಮಾಯಾನಗರಿಗೆ ಬಲಗಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ. ನನ್ನ ಉಸಿರು ನಿಂತಾಗಲೂ ನಟಿಯಾಗಿಯೇ ಕೊನೆ ಉಸಿರು ಹೋಗಬೇಕು ಎನ್ನುವುದು ನನ್ನ ಆಸೆ ಎನ್ನುತ್ತಾರೆ ಹುಬ್ಬಳಿ ಬೆಡಗಿ ವೃಷಾ ಪಾಟೀಲ್.
ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು, ನಟಿಯಾಗಿ ಹೆಸರು ಮಾಡಬೇಕು ಎನ್ನುವ ಮಹಾದಾಸೆಯಿಂದ ಎಂಬಿಎ ವ್ಯಾಸಂಗ ಮಾಡಿ ಕೈತುಂಬ ಕೆಲಸ ಬರುವ ಉದ್ಯೋಗವಿದ್ದರೂ ಅದನ್ನು ಬಿಟ್ಟು ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕಾರಣಕ್ಕೆ ಬಣ್ಣದ ಜಗತ್ತಿಗೆ ಪ್ರವೇಶಿಸಿದ್ದಾರೆ ವೃಷಾ ಪಾಟೀಲ್.
ಅವರ ಆಸೆಗೆ ಇಂಬು ನೀಡುವಂತೆ “ಲವ್ “ ಚಿತ್ರ ತೆರೆಗೆ ಬಂದಿದ್ದು ಚೊಚ್ಚಲ ಚಿತ್ರದಲ್ಲಿಯೇ ತಮ್ಮ ಮುಗ್ದ ಹಾಗು ಮುದ್ದಾದ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಚಿತ್ರರಂದಲ್ಲಿ ದೊಡ್ಡ ಸಾಧನೆ ಮಾಡಬೇಕು ಎನ್ನುವ ಮಹಾದಾಸೆ ಮತ್ತು ಕನಸು ಕಟ್ಟಿಕೊಂಡಿದ್ದಾರೆ.
ಕನಸಿನ ‘ ಲವ್ “ ಚಿತ್ರ ಬಿಡುಗಡೆಯಾಗಿದ್ದು ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಗೆದ್ದು ಬೀಗುತ್ತಿದ್ದಾರೆ. ಒಳ್ಳೆಯ ಪಾತ್ರಗಳು ಮತ್ತು ಚಿತ್ರದ ಮೂಲಕ ಜನ ಮನ ಗೆಲ್ಲುವ ಆಸೆ ಇದೆ ಎನ್ನುತ್ತಾರೆ ನಟಿ ವೃಷಾ ಪಾಟೀಲ್. ಸಿನಿ ಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
• ಸಿನಿಮಾ ರಂಗಕ್ಕೆ ಬಂದದ್ದು ಹೇಗೆ
ಕಿರು ಚಿತ್ರಗಳಲ್ಲಿ ನಟಿಸುತ್ತಿದ್ದೆ. ಹೇಗೋ ನಿರ್ದೇಶಕ ಮಹೇಶ್ ಸಿ ಅಮ್ಮಳ್ಳಿ ದೊಡ್ಡಿ ಅವರ ಕಣ್ಣಿಗೆ ಬಿದ್ದು ನಾಯಕಿಯಾಗಿದ್ದೇನೆ. ಈ ಮುಂಚೆಯೇ ಅವರ ಸಿನಿಮಾದಲ್ಲಿ ನಾಯಕಿಯಾಗಬೇಕಾಗಿತ್ತು. ಅದು ಕೈಗೂಡಲಿಲ್ಲ ಎರಡನೇ ಸಿನಿಮಾದಲ್ಲಿ ನಾಯಕಿಯಾಗಿದ್ದೇನೆ. ಚಿತ್ರರಂಗಕ್ಕೆ ಬರುವ ಮುನ್ನ ಯಾವುದೇ ತರಬೇತಿ ಪಡೆದಿಲ್ಲ. ಆದರೆ ಮೊದಲಿನಿಂದಲೂ ಸಿನಿಮಾ ಹೆಚ್ಚಾಗಿ ನೋಡುತ್ತಿದ್ದೇನೆ.ಅವಕಾಶ ಸಿಕ್ಕರೆ ನಟಿಯಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದೆ. ಅದು ನನಸಾಗಿದೆ.
• ಎಂಬಿಎ ಮಾಡಿ ಸಿನಿಮಾಕ್ಕೆ ಬಂದಿದ್ದೀರಿ ಯಾಕೆ
ನಮ್ಮದು ಹಲವು ಫ್ಯಾಕ್ಟರಿಗಳಿವ. ಈ ಕಾರಣಕ್ಕಾಗಿಯೇ ಮನಯಲ್ಲಿ ಎಂಬಿಎ ಮಾಡಿಸಿದರು. ಆದರೆ ನಾನು ನಟಿಯಾಗಿದ್ದೇನೆ. ನಮ್ಮದು ಸ್ಥಿತಿವಂತ ಕುಟುಂಬ, ಹುಬ್ಬಳ್ಳಿ ಹುಡುಗಿ. ಸಿನಿಮಾದಿಂದ ಬದುಕು ಜೀವನ ಸಾಗಿಸಬೇಕು ಎನ್ನುವ ಉದ್ದೇಶವಿಲ್ಲ. ಸಿನಿಮಾ ನನ್ನ ಫ್ಯಾಶನ್, ಮತ್ತು ಇದನ್ನೇ ವೃತ್ತಿಯಾಗಿ ಮಾಡಿಕೊಳ್ಳುವ ಕನಸಿದೆ,ಅದಕ್ಕೆ ತಕ್ಕಂತೆ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಚಿತ್ರರಂಗದ ಬಗ್ಗೆ ಕುಟುಂಬದ ಸದಸ್ಯರಿಗೆ ಇರುವ ಕಲ್ಪನೆ ದೂರ ಮಾಡಿ ಚಿತ್ರರಂಗದಲ್ಲಿಯೂ ಒಳ್ಳೆಯವರು ಇದ್ದಾರೆ ಎಂದು ತೋರಿಸುವ ಮೂಲಕ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಉದ್ದೇಶವಿದೆ ಎಂದಿದ್ಧಾರೆ
• ಸಿನಿಮಾ ಯಾನಕ್ಕೆ ನಿಮ್ಮ ತಂದೆ ತಾಯಿ ಬೆಂಬಲವಿದೆಯಾ
ಖಂಡಿತಾ ಇಲ್ಲ. ಅವರಿಗೆ ಮಗಳು ರಾಜಕಾರಣಿಯೋ ಅಥವಾ ಉದ್ಯಮಿಯಾಗಬೇಕೆನ್ನುವ ಕನಸಿತ್ತು.ನಾನು ಆಯ್ಕೆ ಮಾಡಿಕೊಂಡ ದಾರಿ ಸರಿಯಾಗಿದೆ ಎನ್ನುವುದನ್ನು ಅಪ್ಪ ಅಮ್ಮನಿಗೆ ತೋರಿಸಬೇಕು ಚಿತ್ರರಂದಲ್ಲಿ ಒಳ್ಳೆಯವರಿದ್ದಾರೆ ಎನ್ನುವುದನ್ನು ನಿರೂಪಿಸುತ್ತಲೇ ಒಳ್ಳೆಯ ನಟಯಾಗಿ ಗುರುತಿಸಿಕೊಳ್ಳುವ ಆಸೆ ಇದೆ ಎಂದಿದ್ದಾರೆ. ಚಿಕ್ಕಂದಿನಿಂದ ಇರುವಾಗಿನಿಂದಲೂ ಹೆಚ್ಚು ಸಿನಿಮಾ ನೋಡುವ ಗೀಳು ಚಿತ್ರರಂಗಕ್ಕೆ ಕರೆತಂದಿದೆ. ಎಂಬಿಎ ಮಾಡಿಕೊಂಡಿದ್ದೇನೆ. ಜೊತೆಗೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ಯಾಕ್ಟರಿಗಳಿವೆ. ಅದನ್ನು ನೋಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಮನೆಯಲ್ಲಿ ಎಂಬಿಎ ಮಾಡಿಸಿದರು. ಆದರೆ ನನಗೆ ನಟಿಯಾಗುವ ಹುಚ್ಚು ಹೆಚ್ಚಿದ್ದರಿಂದ ನಾಯಕಿಯಾಗಿದ್ದೇನೆ.
• ಹೆಸರು ಬದಲಾಯಿಸಿಕೊಳ್ಳಲು ನ್ಯೂಮರಾಲಜಿ ಕಾರಣವೇ
ನನ್ನ ಮೂಲ ಹೆಸರು ಸೌಮ್ಯ ಪಾಟೀಲ್. ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ವೃಷ ಪಾಟೀಲ್ ಎಂದು ಹೆಸರು ಬದಲಾಯಿಸಿಕೊಂಡಿದ್ದೇನೆ. ನ್ಯೂಮರಾಲಜಿ ನಂಬುವುದಿಲ್ಲ. ಆದರೆ, ಹೆಸರು ಬದಲಾವಣೆ ಮಾಡಿಕೊಂಡ ನಂತರ ಒಂದಷ್ಟು ಅವಕಾಶಗಳು ಬರುತ್ತಿವೆ. ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎನ್ನುವ ಹುಚ್ಚು ಹೆಚ್ಚಿದೆ.
• ನಿಮಗೆ ಯಾವ ನಟಿಯರು ಸ್ಪೂರ್ತಿ
ಖ್ಯಾತ ನಟಿಯರಾದ ಸೌಂದರ್ಯ, ಅನೂಷ್ಕ ಶೆಟ್ಟಿ ಅವರ ರೀತಿ ಹೆಸರು ಮಾಡುವ ಆಸೆ ಇದೆ. ಅವರ ರೀತಿ ನಟಿಯಾಗಬೇಕು. ಯಾವುದೇ ಪಾತ್ರ ಕೊಟ್ಟರು ಈ ಹುಡುಗಿ ನಿಭಾಯಿಸುತ್ತಾಳೆ ಎನ್ನುವ ಮಟ್ಟಿಗೆ ಹೆಸರು ಪಡೆಯುವ ಹಂಬಲವಿದೆ ಎಂದಿದ್ಧಾರೆ.
• ಮನೆಯವರ ಸಹಕಾರ ಬೆಂಬಲ ಹೇಗಿದೆ
ಚಿಕ್ಕಂದಿನಿಂದ ಇರುವಾಗಲೇ ಮನೆ ಮಂದಿಯ ಜೊತೆ ಗುದ್ದಾಡಿಕೊಂಡು ಚಿತ್ರರಂಗದಲ್ಲಿ ಸಾಧನೆ ಮಾಡುವ ಉದ್ದೇಶವಿಂದ ಸಿನಿಮಾ ರಂಗಕ್ಕೆ ಬಂದಿದ್ದೇನೆ. ನಾನು ಆಯ್ಕೆ ಮಾಡಿಕೊಂಡ ದಾರಿ ಅಪ್ಪ,ಅಮ್ಮನಿಗೆ ತಪ್ಪು ಎನ್ನಿಸಬಾರದು ಮಗಳು ಒಳ್ಳೆಯ ದಾರಿಯೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೆಮ್ಮೆ ಪಡುವ ರೀತಿ ನಟಿಯಾಗಿ ಗುರುತಿಸಿಕೊಳ್ಳುವ ಆಸೆ ಇದೆ.
ಅದರಲ್ಲಿಯೂ ಕುಟುಂಬದ ಸದಸ್ಯರು ಹೆಣ್ಣು ಮಕ್ಕಳನ್ನು ಅಲ್ಲಿ ನಡೆಸಿಕೊಳ್ಳುವ ರೀತಿ ಸರಿಯಿಲ್ಲ ಎನ್ನುವ ಭಾವನೆಯಿಂದ ಮಗಳು ಚಿತ್ರರಂಗ ಪ್ರವೇಶ ಮಾಡುವುದು ಬೇಡ ಎಂದು ಹೇಳಿದ್ದರು. ಅಪ್ಪ ಅಮ್ಮನಿಗೆ ಹೆಮ್ಮೆ ತರುವ ಕೆಲಸ ಮಾಡುವ ಉದ್ದೇಶ ನನ್ನದು
• ಮೊದಲ ಚಿತ್ರ ಬಿಡುಗಡೆಯಾಗಿದೆ ಹೇಗನಿಸುತ್ತದೆ
ಮೊದಲ ಚಿತ್ರ ಲವ್ ಬಿಡುಗಡೆಯಾದ ಕ್ಷಣ ಕಂಡು ಭಾವುಕನಾಗಿದ್ದೇನೆ. ಬೆಳ್ಳಿ ಪರದೆಯ ಮೇಲೆ ನನ್ನನ್ನು ನಾನು ನೋಡಿಕೊಳ್ಳುತ್ತಿದ್ದ ಪ್ರತಿ ಸನ್ನಿವೇಶದಲ್ಲಿಯೂ ಕಣ್ಣೀರು ಹಾಕಿದ್ದೇನೆ. ಇದೇ ಗಳಿಗೆ ಅಲ್ಲವೇ ಮನೆಯರನ್ನೆಲ್ಲಾ ಎದುರು ಹಾಕಿಕೊಂಡು ಸಿನಿಮಾಗೆ ಬಂದದ್ದು ಎಂದು ಭಾವುಕನಾಗಿದ್ದೇನೆ .ಚಿತ್ರರಂಗದಲ್ಲಿ ಹೊಸಬರು ಗುರುತಿಸಿಕೊಳ್ಳುವುದು ಕಷ್ಟ ಇದೆ. ಇದೇ ಕಾರಣಕ್ಕೆ ಹೆಸರು ಇರುವ ನಟರ ಜೊತೆ ನಟಿಸುವ ಆಸೆ ಇದೆ. ಆಗ ನಮ್ಮನ್ನು ನಾವು ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವ ಒಂದೇ ಉದ್ದೇಶವೇ ಹೊರತು ಹೊಸಬರ ಜೊತೆ ನಟಿಸಬಾರದು ಎಂದಲ್ಲ. ನಾನು ಹೊಸಬಳಾಗಿ ನಾಯಕನೂ ಹೊಸಬರಾದರೆ ಚಿತ್ರರಂಗದಲ್ಲಿ ಯಶಸ್ಸು ಗಳಿಸಲು ಪರದಾಡಬೇಕು. ಈ ಕಾರಣಕ್ಕಾಗಿಯೇ ಹೆಸರಾಂತ ನಟರ ಜೊತೆ ನಿರ್ದೇಶಕರ ಜೊತೆ ಕೆಲಸ ಮಾಡುವ ಉದ್ದೇಶವಿದೆ ಎಂದರು
• ಕೆಎಎಸ್ ಕನಸು ಬಿಟ್ಟದ್ದು ಯಾಕೆ
ಕೆಎಎಸ್ ಅಧಿಕಾರಿಯಾಗಬೇಕು ಎನ್ನುವ ಕನಸಿತ್ತು. ಇದಕ್ಕಾಗಿ ಪೂರ್ವಬಾವಿ ಪರೀಕ್ಷೆಯನ್ನೂ ಪಾಸು ಮಾಡಿಕೊಂಡಿದ್ದೆ. ಮುಖ್ಯ ಪರೀಕ್ಷೆಗೆ ತಯಾರಾಗಬೇಕು ಎನ್ನುವ ವೇಳೆ ಕೋವಿಡ್ ಬಂತು, ಹೀಗಾಗಿ ಮನೆಯಲ್ಲಿಯೇ ಇದ್ದುದರಿಂದ ನಾಯಕನಾಗುವ ಕನಸು ಮತ್ತಷ್ಟು ಹೆಚ್ಚಾಯಿತು, ನಾಯಕಿ ಆಗುವ ಹುಚ್ಚಿಗೆ ಕೆಎಎಸ್ ಅಧಿಕಾರಿಯಾಗು ಕನಸು ಕೈ ಬಿಟ್ಟೆ .ಚಿತ್ರರಂಗಕ್ಕೆ ಬಂದು ಐದಾರು ವರ್ಷ ಆಗಿದೆ. ಕನ್ನಡದಲ್ಲಿ ಮೊದಲ ಚಿತ್ರ ಬಿಡುಗಡೆಯಾಯಿತು. ಅದು ಮಂಗಳೂರಿನಲ್ಲಿ ಮಾತ್ರ ಬಿಡುಗಡೆಯಾದರಿಂದ ಲವ್ ನನ್ನ ಮೊದಲ ಚಿತ್ರ
• ಹೊಸಬರ ಜೊತೆ ನಟಿಸುವ ಆಸೆ ಇದೆಯಾ
ಒಳ್ಳೆಯ ಕಥೆ, ನಿರ್ದೇಶಕರು ಸಿಕ್ಕರೆ ಹೊಸಬರೊಂದಿಗೂ ನಟಿಸುತ್ತೇನೆ. ಚಿತ್ರರಂಗಲ್ಲಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಹೆಸರಾಂತ ನಟರು, ನಿರ್ದೇಶಕರ ಜೊತೆ ಕೆಲಸ ಮಾಡುವ ಆಸೆ ಇದೆ,ಅದರಲ್ಲಿಯೂ ಯೋಗರಾಜ್ ಭಟ್, ಪ್ರೇಮ್, ಸಂತೋಷ್ ಆನಂದ್ ರಾಮ್ ಸೇರಿದಂತೆ ಒಂದಷ್ಟು ನಿರ್ದೇಶಕರು ಹೆಸರು ಮಾಡಿದ ನಟರ ಜೊತೆ ಕೆಲಸ ಮಾಡುವ ಆಸೆ ಇದೆ.
• ಗ್ಲಾಮರಸ್ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯ
ಕಥೆಗೆ ಪೂರಕವಾಗಿದ್ದರೆ ಇತಿ ಮಿತಿಯಲ್ಲಿ ಮಾಡಲು ಅಡ್ಡಿಯಿಲ್ಲ ಆದರೆ ಆದೇ ಹೆಚ್ಚಾದರೆ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ಲಿಪ್ ಲಾಕ್ ಸೇರಿದಂತೆ ಕೆಲ ಸನ್ನಿವೇಶಗಳಲ್ಲಿ ಭಾಗಿಯಾಗುವುದು ಇಷ್ಟವಿಲ್ಲ. ಮನೆಯವರಿಗೂ ಇಷ್ಟವವಿಲ್ಲ. ಹೀಗಾಗಿ ನಾನೂ ಕೂಡ ಅದನ್ನು ಮಾಡುವುದಿಲ್ಲ.
• ತೆಲುಗು ಸಿನಿಮಾ ಕೈ ಬಿಡಲು ಕಾರಣವೇನು
ತೆಲುಗು ಚಿತ್ರದಲ್ಲಿ ಹೆಚ್ಚಿನ ಕಿಸ್ಸಿಂಗ್ ಸೀನ್ ಹೆಚ್ಚಿಗೆ ಇದ್ದ ಕಾರಣಕ್ಕೆ ತೆಲುಗಿನ ಚಿತ್ರ ಕೈಬಿಟ್ಟೆ. ಇದಲ್ಲದೆ ಕನ್ನಡದಲ್ಲಿ ಎರಡು ಚಿತ್ರಗಳು ಕನ್ಫರ್ಮ್ ಆಗಿದೆ. ತೆಲುಗಿನ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಒಳ್ಳೆಯ ನಟಿಯಾಗಿ ಗುರುತಿಸಿಕೊಂಡು ಅಪ್ಪಮ್ಮನಿಗೆ ಹೆಸರು ತರುವ ಉದ್ದೇಶವಿದೆ. ಮೊದಲೇ ಮನೆಯವರ ವಿರೋಧ ಕಟ್ಟಿಕೊಂಡು ಸಿನಿಮಾಗೆ ಬಂದಿದ್ದೇನೆ. ಹೀಗಾಗಿ ಚಿತ್ರರಂಗದಲ್ಲಿ ನನ್ನದೇ ಆದ ಕಟ್ಟುಪಾಡುಗಳನ್ನು ಹಾಕಿಕೊಂಡಿದ್ದು ಉತ್ತಮ ಕತೆಗಳು, ಉತ್ತಮ ತಂಡದೊಂದಿಗೆ ಕೆಲಸ ಮಾಡಲು ನಿರ್ದರಿಸಿದ್ದೇನೆ.
• ನಿರ್ಮಾಣ ಮಾಡುವ ಆಸೆ ಇದೆ
ಖಂಡಿತಾ ಇದೆ. ಇದೇ ಕಾರಣಕ್ಕೆ ನಿರ್ಮಾಣ, ವಿತರಣೆಯ ವಿಷಯಗಳನ್ನು ಕಲಿಯುತ್ತಿದ್ದೇನೆ. ಅದಕ್ಕೂ ಮುನ್ನ ಒಳ್ಳೆಯ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು. ಯಾವುದೇ ಪಾತ್ರ ಕೊಟ್ಟರೂ ಮಾಡುತ್ತಾರೆ ಎನ್ನುವ ಭಾವನೆ ನಿರ್ದೇಶಕರು ನಿರ್ಮಾಪಕರಲ್ಲಿ ಬರಬೇಕು. ಆ ಮಟ್ಟಿನ ನಟಿಯಾಗುವ ಆಸೆ ಇದೆ .ನೇಮ್ ಫೇಸ್ ಬಂದ ನಂತರ ಪ್ರೊಡಕ್ಷನ್ ಪ್ಲಾನ್ ಇದೆ. ದುಡ್ಡು ಬೇಕು ಹಾಗಂತ ಅದೇ ಮುಖ್ಯವಲ್ಲ. ಒಳ್ಳೆಯ ಪಾತ್ರಗಳ ಮೂಲಕ ಜನ ಮನ ಗೆಲ್ಲುವ ಆಸೆ ಇದೆ ಎಂದಿದ್ಧಾರೆ.
ವಿಭಿನ್ನ ಪಾತ್ರ ಸಿಕ್ಕಿದೆ.
“ಫುಲ್ ಮೀಲ್ಸ್ “ಚಿತ್ರದಲ್ಲಿ ಪ್ರಮುಖ ಮತ್ತು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದಲ್ಲದೆ ಎರಡು ಚಿತ್ರಗಳು ಖಚಿತವಾಗಿವೆ. ಅದರ ಬಗ್ಗೆ ತಂಡೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬೇಕು ಸದ್ಯದಲ್ಲಿಯೇ ಮಾಹಿತಿ ಹೊರಬರಲಿದೆ. ಒಳ್ಳೆಯ ನಟಿಯಾಗಿ ಗುರುತಿಸಿಕೊಂಡು ಮನೆಯವರಿಗೆ ಮತ್ತು ಉತ್ತರ ಕರ್ನಾಟಕ ಹಾಗು ರಾಜ್ಯಕ್ಕೆ ಹೆಸರು ತರುವ ಉದ್ದೇಶವಿದೆ ಎಂದಿದ್ಧಾರೆ ನಟಿ ವೃಷಾ ಪಾಟೀಲ್.