Trying to play a challenging role: Actress Akshitha Satyanarayan

ಸವಾಲಿನ ಪಾತ್ರ ಮಾಡುವಾಸೆ : ನಟಿ ಅಕ್ಷಿತಾ ಸತ್ಯನಾರಾಯಣ್ - CineNewsKannada.com

ಸವಾಲಿನ ಪಾತ್ರ ಮಾಡುವಾಸೆ : ನಟಿ ಅಕ್ಷಿತಾ ಸತ್ಯನಾರಾಯಣ್

ಕನ್ನಡಕ್ಕೆ ಹೊಸ ಹೊಸ ನಟಿಯರು ಅದೃಷ್ಟ ಕಂಡುಕೊಳ್ಳಲು ಆಗಮಿಸುತ್ತಿದ್ದಾರೆ. ಅದರ ಸಾಲಿಗೆ ಮತ್ತೊಂದು ಹೊಸ ಪ್ರತಿಭೆ ಸೇರ್ಪಡೆ. ಅವರೇ ಅಕ್ಷಿತಾ ಸತ್ಯ ನಾರಾಯಣ್. .

ಯುವ ನಿರ್ದೇಶಕ ಭರತ್ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡುತ್ತಿರುವ ಸೂಪರ್ ಬೈಕ್ ಆಧಾರಿತ ಚಿತ್ರ “ರೇಸರ್” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಮಾಡೆಲ್ ಕಮ್ ನಟಿ ಅಕ್ಷಿತಾ ಸತ್ಯನಾರಾಯಣ್ ಚಿತ್ರಕ್ಕೆ ಬೈಕ್ ಓಡಿಸುವುದುನ್ನು ಕಲಿತು ಗಮನ ಸೆಳೆದಿದ್ದಾರೆ, ಹೊಸ ಚಿತ್ರ , ಅವಕಾಶ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ

  • ಮಾಡಲಿಂಗ್ ನಿಂದ ಬಂದಿದದ್ದೀರಿ ನಿಮ್ಮ ಹಿನ್ನೆಲೆ

2019ರಲ್ಲಿ ಮಾಡಲಿಂಗ್ ಆರಂಭಿಸಿದ್ದೇನೆ. ಪತ್ರಿಕೆ ನಡೆಸುವ ನವತಾರೆ ಸ್ಪರ್ಧೆಯಲ್ಲಿ ವಿಜೇತಳಾಗಿದ್ದೇನೆ. ಜೊತೆಗೆ ಆಮಿಸ್ ಸೌತ್ ಇಂಡಿಯಾ ಸೌಂದರ್ಯ ಸ್ಪರ್ಧೆತಲ್ಲಿ ಟಾಪ್ 6 ರಲ್ಲಿ ಕಾಣಿಸಿಕೊಂಡೆ. ಇದಲ್ಲದೆ ಪ್ರಮುಖ ಸೌಂದರ್ಯಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದೇನೆ. 15 ಶೋಗೆ ವಾಕ್ ಮಾಡಿದ್ದೇನೆ ಜೊತೆಗೆ ಮುಂಬೈನಲ್ಲಿ ಅಂತರಾಷ್ಟ್ರೀಯ ಮಾಡಲಿಂಗ್ ಸಂಸ್ಥೆಯಿಂದ ತರಬೇತಿ ಪಡೆದು ವೃತ್ತಿಪರವಾಗಿ ಮಾಡಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶಿಸುವ ಅವಕಾಅಸ ಸಿಕ್ಕಿತು

  • ತೆಲುಗು ಧಾರಾವಾಹಿ ಬಗ್ಗೆ ಹೇಳುವುದಾದರೆ

ಮಾಡಲಿಂಗ್‌ನಲ್ಲಿ ಕೆಲಸ ಮಾಡಿಕೊಳ್ಳುತ್ತಲೇ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟನೆಗೆ ಪ್ರಯತ್ನ ಪಡುತ್ತಿದ್ದೆ. ಆಗಾಗ ಲುಕ್ ಟೆಸ್ಟ್ ಕೊಡುತ್ತಿದ್ದೆ. ಹೀಗೆ ಪ್ರಯತ್ನ ಮಾಡುವ ಸಮಯದಲ್ಲಿ ತೆಲುಗು ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅನ್ನಪೂರ್ಣ ಸ್ಟುಡಿಯೋ ನಿರ್ಮಾಣ ಸ್ಟಾರ್ ಮಾ ಗಾಗಿ ಕುಂಕುಮ ಪೂವ್ ನಾಯಕಿನಾಗಿ ನಟಿಸುತ್ತಿದ್ದೇನೆ. ಒಳ್ಳೆಯ ಪಾತ್ರ

  • ಬೈಕ್ ಆಧಾರಿತ ರೇಸರ್ ಚಿತ್ರ ಆಯ್ಕೆಯಾದದ್ದು ಹೇಗೆ?

ಚಿತ್ರತಂಡ ಸಾಮಾಜಿಕ ಮಾದ್ಯಮಗಳಲ್ಲಿ ಹೊಸ ಚಿತ್ರಕ್ಕೆ ನಟಿಯರು ಬೇಕು ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.ಅದನ್ನು ನೋಡಿ ನಾನೂ ಕೂಡ ಚಿತ್ರತಂಡಕ್ಕೆ ಭಾವಚಿತ್ರಗಳನ್ನು ಕಳುಹಿಸಿದ್ದೆ. ಅವುಗಳನ್ನು ನೋಡಿದ ತಂಡ ನಿಮಗೆ ಬೈಕ್ ಓಡಿಸಲು ಬರುತ್ತಾ ಎಂದು ಕೇಳಿದ್ದರು. ಮೊದಲೇ ಬೈಕ್ ಓಡಿಸುವ ಬಗ್ಗೆ ಅನುಭವ ಇದ್ದ ಹಿನ್ನೆಲೆಯಲ್ಲಿ ಹೌದು ಎಂದೆ. ಹೀಗಾಗಿ ಬೈಕ್ ಆಧಾರಿತ ಚಿತ್ರ ” ರೇಸರ್” ನಲ್ಲಿ ಅವಕಾಶ ಸಿಕ್ಕಿತ್ತು.

  • ಬೈಕ್ ಸವಾರಿಗೆ ಓಡಿಸುವುದು ಮೊದಲೇ ಗೊತ್ತಿತ್ತಾ? ಯಾರು ನಿಮ್ಮ ಗುರು

ನಾನು ಏಳನೇ ತರಗತಿಯಲ್ಲಿದ್ದ ವೇಳೆಯೇ ಬೈಕ್ ಓಡಿಸಿದ್ದೇನೆ. ನನ್ನ ಬೈಕ್ ಸವಾರಿಗೆ ಅಪ್ಪನೇ ಗುರು, ಬೈಕ್ ಓಡುಸುವುದನ್ನು ಹೇಳಿಕೊಟ್ಟಿದ್ದರು. ಈಗ ಬೈಕ್ ಆಧಾರಿತ ಚಿತ್ರ ರೇಸರ್ ಚಿತ್ರದಲ್ಲಿ ಅವಕಾಶ ಸಿಗಲು ಕಾರಣವಾಗಿದೆ. ಒಂದು ರೀತಿ ಅಪ್ಪನ ಬೆಂಬಲವೂ ಇದೆ.

  • ರೇಸರ್ ಚಿತ್ರ ಬಗ್ಗೆ ಹೇಳುವುದಾದರೆ

ರೇಸರ್ ಬೈಕ್ ಆಧಾರಿತ ನೈಜ ಘಟನೆಯ ಚಿತ್ರ. ಚಿತ್ರದಲ್ಲಿ ಸೂಪರ್ ಬೈಕ್ ಓಡಿಸುವ ಹುಡುಗಿಯ ಪಾತ್ರ ನನ್ನದು. ಮಾಮೂಲಿ ಬೈಕ್ ಓಡಿಸುವುದು ಗೊತ್ತಿತ್ತು. ಬೈಕ್ ಓಡುಸುವುದು ಗೊತ್ತು ಆದರೆ ಸೂಪರ್ ಬೈಕ್ ಓಡಿಸುವ ಬಗ್ಗೆ ತರಬೇತಿ ಪಡೆಯುತ್ತಿದ್ದೇನೆ. ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡದಂತೆ ನಿರ್ದೇಶಕರ ಕಟ್ಟಪ್ಪಣೆಯಾಗಿದೆ.

  • ನಿಮ್ಮ ಪಾತ್ರ ಯಾವ ರೀತಿಯದ್ದು

ನೋಡಲು ಟಾಮ್ ಬಾಯ್ ರೀತಿ ಕಂಡರೂ ಬಬ್ಲಿ ಬಬ್ಲಿಯ ಪಾತ್ರ. ನನ್ನ ಪಾತ್ರ ಚೆನ್ನಾಗಿದೆ. ಹಿರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಅವರು ನನ್ನ ಫೇವರೇಟ್ ಸಂಗೀತ ನಿರ್ದೇಶಕ. ಜೊತೆಗೆ ಹಿರಿಯ ಕಲಾವಿದರು ನಟಿಸುತ್ತಿರುವದರಿಂದ ಚಿತ್ರದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ

  • ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಹೇಗನಿಸುತ್ತದೆ

ಕನ್ನಡದಲ್ಲಿ ಅವಕಾಶಕ್ಕಾಗಿ 2 ವರ್ಷದಿಂದ ಕಾಯುತ್ತಿದ್ದೆ. ಕೊನೆಗೂ ಅವಕಾಶ ಸಿಕ್ಕಿದೆ. ಸಿನಿಮಾದಲ್ಲಿ ಹಿರಿಯ ಕಲಾವಿದರ ದಂದು ಇದೆ. ಜೊತೆಗೆ ಮೊದಲ ಚಿತ್ರದಲ್ಲಿಯೇ ಒಳ್ಳೆಯ ಕಥೆ, ತಂಡ ಸಿಕ್ಕಿದೆ. ಇದು ಮತ್ತಷ್ಟು ಖುಷಿಗೆ ಕಾರಣವಾಗಿದೆ. ನನ್ನ ಪಾತ್ರದಲ್ಲಿ ನಟಿಸಲು ನಾನು ಉತ್ಸಕನಾಗಿದ್ದೇನೆ,

  • ಮೊದಲ ಚಿತ್ರದ ಬಗ್ಗೆ ಹೇಳುವುದಾದರೆ

ಮೊದಲ ಚಿತ್ರ ರೇಸರ್ ಸವಾಲಿನಿಂದ ಕೂಡಿದೆ. ಹೀಗಾಗಿ ಮೊದಲ ಚಿತ್ರದ ಕಡೆ ಸಂಪೂರ್ಣ ಗಮನ ಹರಿಸಿದ್ದೇನೆ. ಇನ್ನೂ ಹೊಸ ಅವಕಾಶಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಒಳ್ಳೆಯ ಕಥೆ, ತಂಡ ಸಿಕ್ಕರೆ ಕಂಡಿತ ನಟಿಸುತ್ತೇನೆ. ಒಳ್ಳೆಯ ಚಿತ್ರದಲ್ಲಿ ನಟಿಸುವ ಅವಕಾಶ ಎದುರು ನೋಡುತ್ತಿದ್ದೇನೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin