ಕಿರುತೆರೆಯ ಯಶಸ್ಸು ; ಸಿನಿಮಾದಲ್ಲಿ ಪಡೆಯುವಾಸೆ: ನಟಿ ಕೌಸ್ತುಭ ಮಣಿ
ಕಿರುತೆರೆಯಲ್ಲಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಪ್ರತಿಭಾನ್ವಿತ ನಟಿ ಕೌಸ್ತುಭ ಮಣಿ ಇದೀಗ ಧಾರಾವಾಹಿಯಿಂದ ಬೆಳ್ಳಿತೆರೆಯಲ್ಲಿ ಬೆಳಗಲು ಅಡಿ ಇಟ್ಟಿದ್ದಾರೆ.” ನನ್ನರಸಿ ರಾಧೆ” ಧಾರಾವಾಹಿಯ ಮೂಲಕ ಮೋಡಿ ಮಾಡಿದ ನಟಿ ಸಿನಿಮಾದಲ್ಲಿಯೂ ಕಮಾಲ್ ಮಾಡಲು ಮುಂದಾಗಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟ ರಾಜ್ ಬಿ ಶೆಟ್ಟಿ ನಟನೆಯ “45” ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಹಿರಿತೆರೆಯಲ್ಲಿಯೂ ಮೋಡಿ ಮಾಡಲು ಮುಂದಾಗಿದ್ದಾರೆ ಮುದ್ದು ಮುಖದ ಅಪ್ಪಟ ಕನ್ನಡತಿ ಕೌಸ್ತುಭ ಮಣಿ.
ಸದಭಿರುಚಿ ಚಿತ್ರಗಳ ನಿರ್ಮಾಪಕರೆಂದೇ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ರಮೇಶ್ ರೆಡ್ಡಿ ನಿರ್ಮಾಣದ 45 ಚಿತ್ರ ನಿರ್ಮಾಣ ಮಾಡುತ್ತಿದ್ದು ಸಂಗೀತ ಮಾಂತ್ರಿಕ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವುದು ವಿಶೇಷ. ಚಿತ್ರದ ಚಿತ್ರೀಕರಣ ಸಾಗಿದೆ.“ನನ್ನರಸಿ ರಾಧೆ ” ಧಾರಾವಾಹಿ ಮೂಲಕ ನಾಡಿನ ಮನೆ ಮಾತಾದ ಪ್ರತಿಭಾನ್ವಿತ ನಟಿ ಕೌಸ್ತುಭ ಮಣಿ. ” 45″ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕೌಸ್ತುಭ ಮಣಿ ಮಾಹಿತಿ ಹಂಚಿಕೊಂಡಿದ್ದಾರೆ.
• ಚಿತ್ರಕ್ಕೆ ಆಯ್ಕೆಯಾದ ಬಗೆ ಹೇಗೆ
ಹೊಸ ಚಿತ್ರದಲ್ಲಿ ಅವಕಾಶವಿದೆ ಎಂದು ಗೊತ್ತಾಯಿತು. ಆಡಿಷನ್ ಕೊಟ್ಟಿದ್ದೆ. ಚಿತ್ರಕ್ಕೆ ಆಯ್ಕೆಯಾಗಿರುವುದು ಖುಷಿ ಕೊಟ್ಟಿದೆ.
• ಶಿವಣ್ಣ-ಉಪೇಂದ್ರ ಅವರ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದಾಗ ಹೇಗನಿಸಿತು
ಚಿತ್ರಕ್ಕೆ ಆಯ್ಕೆಯಾಗಿದ್ದೇನೆ ಎಂದಾಗ ಮೊದಲ ನಂಬಲು ಆಗಲಿಲ್ಲ. ಘಟಾನುಘಟಿಗಳ ಜೊತೆ ನಟಿಸುವುದು ಒಂದೆಡೆ ಖುಷಿ ಆದರೆ ಮತ್ತೊಂದು ಭಯ, ನಡುಕ ಕೂಡ ಇದೆ. ಶಿವಣ್ಣ,ಉಪೇಂದ್ರ ಸರ್ ಅವರ ಜೊತೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಕಲಿಯಲು ಉತ್ತಮ ವೇದಿಕೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸ ಅವರದು.
• ನಿಮ್ಮ ಪಾತ್ರ ಏನು, ಯಾರ ಜೊತೆ ನಿಮ್ಮ ಜೋಡಿ
ಚಿತ್ರದಲ್ಲಿ ನನ್ನದು ಬಬ್ಲಿ ಪಾತ್ರ. ರಾಜ್ ಬಿ ಶೆಟ್ಟಿ ಅವರಿಗೆ ನಾಯಕಿ, ಸದಭಿಚಿಯ ನಿರ್ಮಾಪಕರೆಂದೇ ಹೆಸರಾಗಿರುವ ರಮೇಶ್ ರೆಡ್ಡಿ ಅವರಂತಹ ದೊಡ್ಡ ಬ್ಯಾನರ್ ನಲ್ಲಿ ಅವಕಾಶ ಸಿಕ್ಕಿರುವುದು ಮತ್ತಷ್ಟು ಖುಷಿಗೆ ಕಾರಣವಾಗಿದೆ. 45 ಚಿತ್ರದ ಮೂಲಕ ಚಿತ್ರಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ. ಇದನ್ನು ವರ್ಣಿಸಲಸಾದ್ಯ..
• ಕಿರುತೆರೆಯಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದೀರಿ, ಈಗ ಹಿರಿತೆರೆಗೆ ಬಂದಿದ್ದೀರಿ ನಿಮ್ಮ ನಿರೀಕ್ಷೆ ಏನು ಅಥವಾ ಎಷ್ಟು ಜವಾಬ್ದಾರಿ ಹೆಚ್ಚಿದೆಯಾ
ಕಿರುತೆರೆಯಲ್ಲಿ ಪಡೆದ ಅಭಿಮಾನಿ ಬಳಗವನ್ನು ಹಿರಿ ತೆರೆಯಲ್ಲಿ ಮತ್ತಷ್ಟು ಹೆಚ್ಚಿಸಿಕೊಳ್ಳುವ ತವಕವಿದೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಕೂಡ ಅಭಿಮಾನಿಗಳನ್ನು ಸಂಪಾದಿಸುತ್ತಲೇ ಕಿರುತೆರೆಯ ಅಭಿಮಾನಿಗಳನ್ನು ಕಾಪಾಡಿಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ. ಕಿರುತೆರೆಯಲ್ಲಿ ಗಳಿಸಿರುವ ದೊಡ್ಡ ಯಶಸ್ಸು ಮತ್ತು ಕೀರ್ತಿಯನ್ನು ಚಿತ್ರರಂಗದಲ್ಲಿ ಪಡೆಯುವ ಹಂಬಲ ಮತ್ತು ಕಾತುರವಿದೆ.
• ಯಾವ ತರದ ಪಾತ್ರ ಮಾಡುವ ಆಸೆ ಇದೆ
ಹೊಸ ತನದ ಪಾತ್ರಗಳ ಮೂಲಕ ಗಮನ ಸೆಳೆಯುವ ಕನಸು ಇದೆ.ಯಾವುದೇ ರೀತಿಯ ಪಾತ್ರ ನೀಡಿದರೂ ಈ ಹುಡುಗಿ ಮಾಡಬಲ್ಲಳು ಎನ್ನುವ ಮೆಚ್ಚುಗೆ ಪಡೆಯುವ ಆಸೆ ಕೂಡ ಇದೆ. ಇಂತಹದುದೇ ಪಾತ್ರ ಅಂತ ಏನೂ ಇಲ್ಲ ಜನರ ಮನೆ ಮನಸ್ಸಿಗೆ ಹತ್ತಿರವಾಗುವ ಪಾತ್ರ ಮಾಡುವ ಕನಸಿದೆ. ಸಿಕ್ಕ ಪಾತ್ರಕ್ಕೆ ಶಕ್ತಿ ಮೀರಿ ನಟಿಸಿ ಎಲ್ಲರ ಪ್ರೀತಿ ವಿಶ್ವಾಸ ಪಡೆಯುವ ಹಂಬಲ ಮತ್ತು ಕನಸಿದೆ.