ಚಿತ್ರರಂಗ ಪ್ರವೇಶಿಸಿ ದಶಕ ಪೂರೈಸಿದ ನಟಿ ಅದ್ವಿತಿ ಶೆಟ್ಟಿ: ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಉತ್ತಮ ಪಾತ್ರ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಾರಾ ಜೋಡಿ ನಟಿಸಿದ್ದ ” ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ ” ಚಿತ್ರದ ಮೂಲಕ ಅವಳಿ ಸಹೋದರಿ ಅಶ್ವಥಿ ಶೆಟ್ಟಿ ಅವರೊಂದಿಗೆ ಬಣ್ಧದ ಜಗತ್ತಿಗೆ ಕಾಲಿಟ್ಟ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ , ಚಿತ್ರರಂಗದಲ್ಲಿ ದಶಕ ಪೂರ್ಣಗೊಳಿಸಿದ್ದಾರೆ.ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕಿರುವುದು ಅವರ ಖುಷಿ ಹೆಚ್ಚಿಸಿದೆ

ಇನ್ನೂ ತೆರೆಗೆ ಸಿದ್ದವಾಗಿರುವ ” ಬ್ರಹ್ಮ ಕಮಲ” ಚಿತ್ರಕ್ಕೆ ವಿವಿದ ದೇಶಗಳ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಸೇರಿದಂತೆ ಹಲವು ಪ್ರಶಸ್ತಿ ಪಡೆದ ಹೆಮ್ಮೆ ಮತ್ತು ಖುಷಿ ಅದ್ವಿತಿ ಅವರಲ್ಲಿದೆ. ಚಿತ್ರರಂಗಕ್ಕೆ ಬಂದ ಘಳಿಗೆಯಿಂದ ಬಣ್ಣದ ಬದುಕಿನಲ್ಲಿ 10 ವರ್ಷ ಪೂರೈಸುವ ತನಕ ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.

- ಚಿತ್ರರಂಗಕ್ಕೆ ಬರುವ ಉದ್ದೇಶ ಇತ್ತಾ ಹೇಗೆ
ಕಂಡಿತಾ ಇರಲಿಲ್ಲ. ಐಎಎಸ್ ಮಾಡಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಎಲ್ಲಾ ತಯಾರಿ ಮತ್ತು ಸಿದ್ದತೆ ಮಾಡಿಕೊಂಡಿದ್ದೆ. ಜೊತೆಗೆ ಎಂಬಿಎ ಮಾಡಿದ್ದ ಎಚ್ ಆರ್ ಆಗಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ ಚಿತ್ರಕ್ಕೆ ಅವಳಿ ಹುಡುಗಿಯರು ಬೇಕು ಎಂದು ಕೇಳಿದಾಗ ಮೊದಲ ಇಲ್ಲ ಎಂದೇ ಹೇಳಿದ್ದೆವು. ಕೊನೆಗೆ ಬಣ್ಣದ ಜಗತ್ತು ಚಿತ್ರರಂಗಕ್ಕೆ ಕರೆದುಕೊಂಡು ಬಂದಿತು.

- ನಟಿಯಾಗುವ ಕನಸಿತ್ತಾ ಅಥವಾ ಆಕಸ್ಮಿಕವೋ
ನಟಿಯಾಗುತ್ತೇನೆ ಎಂದು ಕನಸು ಮನಸಿಲ್ಲಿಯೂ ಯೋಚನೆ ಮಾಡಿರಲಿಲ್ಲ. ಕ್ರೀಡೆ, ಇಲ್ಲವೆ ಡ್ಯಾನ್ಸ್ ಜೊತೆ ಜೊತೆಗೆ ಐಎಎಸ್ ಮಾಡಬೇಕು ಎನ್ನುವ ಕನಸಿತ್ತು. ಅನಿರೀಕ್ಷಿತವಾಗಿ ಬಂದ ಅವಕಾಶ.

- ನಟಿಯಾಗಿರದಿದ್ದರೆ ಏನಾಗಿರುತ್ತಿದ್ರಿ
ಎಚ್. ಆರ್ ಮುಂದುವರಿಯುತ್ತಿದ್ದೆ. ಇಲ್ಲ ಐಎಎಸ್ ಆಗುವ ಕನಸು ಇತ್ತು. ಅದರಲ್ಲಿ ಪಾಸು ಆಗುತ್ತಿದ್ದೆನೋ ಅಥವಾ ಬಿಡುತ್ತಿದ್ದೇನೋ ಪ್ರಯತ್ನ ಅಂತ ಮಾಡುತ್ತಿದ್ದೆ. ಐಎಎಸ್ ಅಧಿಕಾರಿ ಆಗಬೇಕು ಎನ್ನುವುದು ಅಪ್ಪನ ಕನಸಾಗಿತ್ತು. ನಟಿಯಾಗದಿದ್ರೆ ಮಾಡಲಿಂಗ್ ಅಥವಾ ಡ್ಯಾನ್ಸ್ ಮಾಡಿಕೊಂಡು ಇರುತ್ತಿದ್ದೆ.

- ಮೊದಲ ಚಿತ್ರ ಯಾವುದು, ಇದುವರೆಗೆ ಎಷ್ಟು ಚಿತ್ರ ಮಾಡಿದ್ದೀರಿ
ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ ಮೊದಲ ಸಿನಿಮಾ. ಆ ನಂತರ ನಟಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದುವರೆಗೂ 7 ಸಿನಿಮಾ ತೆರೆಗೆ ಬಂದಿದೆ. ಇನ್ನೂ ಮೂರು ಸಿನಿಮಾ ಬಿಡುಗಡೆಯಾಗಬೇಕಾಗಿದೆ. ಎರಡು ಆಲ್ಬಂ ನಲ್ಲಿ ನಟಿಸಿದ್ದೇನೆ

- ಯಾವ ರೀತಿ ಪಾತ್ರ ಮಾಡುವಾಸೆ ಇದೆ
ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇರುವ ಯಾವುದೇ ಪಾತ್ರ ಮಾಡಬೇಕು ಎನ್ನುವ ಆಸೆ ಇದೆ.ಅದರಲ್ಲಿಯೂ ಐತಿಹಾಸಿಕ ಪಾತ್ರ, ಆಕ್ಷನ್ ಸೀನ್ ಇರುವ ಪಾತ್ರ,ಮಹಿಳಾ ಕೇಂದ್ರಿತ ಪಾತ್ರಗಳಲ್ಲಿ ನಟಿಸುವುದರಿಂದ ನಟನೆಯನ್ನು ಹೊರ ಹಾಕಲು ಸಹಕಾರಿಯಾಗಲಿದೆ. ಹಾಗಂತ ಗ್ಲಾಮರಸ್ ಪಾತ್ರ ಮಾಡುವುದಿಲ್ಲ ಎಂದಲ್ಲ. ಜೊತೆಗೆ ಅದ್ಬುತವಾದ ಡುಯಟ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಆದೆ ಇದೆ.

- ಯಾವ ನಟಿಯರು, ಅವರ ಪಾತ್ರ ಇಷ್ಟ. ನಾನೂ ಹೀಗೆ ಮಾಡಬಹುದು ಅನ್ನಿಸಿದುಂಟಾ
ತುಂಬಾ ಚಿತ್ರಗಳು ಮತ್ತು ನಟಿಯರು ಇದ್ದಾರೆ.ಕನ್ನಡದಲ್ಲಿ ಶೃತಿ, ಮಾಲಾಶ್ರೀ, ಇತ್ತೀಚಿನ ನಟಿಯರಲ್ಲಿ ಕೀರ್ತಿ ಸುರೇಶ್, ಸಾಯಿ ಪಲ್ಲವಿ ಅವರು ಮಾಡುವ ಪಾತ್ರ ಇಷ್ಟ. ಅವರು ಒಂದು ರೀತಿ ಸ್ಪೂರ್ತಿ.ಅವರ ಅಭಿನಯಕ್ಕೆ ಮಾರು ಹೋಗಿದ್ದೇನೆ. ಬಹುತೇಕ ನಟಿಯರು ಸ್ಪೂರ್ತಿಯಾಗಿದ್ದಾರೆ.

- ಚಿತ್ರರಂಗದ ಅನುಭವ ಹೇಗಿದೆ
2013 ರಲ್ಲಿ ಚಿತ್ರರಂಗಕ್ಕೆ ಬಂದೆ. ಈ ವರ್ಷ 10 ವರ್ಷ ಪೂರ್ಣಗೊಳಿಸಿದ್ದೇನೆ. ನಟಿಯಾಗಿರುವುದು ಹೆಮ್ಮೆ ಮತ್ತು ಖುಷಿ ಇದೆ. ಜೊತೆಗೆ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ಆಶ್ಚರ್ಯವೂ ಆಗುತ್ತಿದೆ.ಚಿತ್ರರಂಗದಲ್ಲಿ ಏಳು ಬೀಳು ಕಂಡಿದ್ದೇನೆ. ಯಾವುದೇ ಗಾಡ್ ಪಾಧರ್ ಇಲ್ಲದೆ ಸ್ವಯಂ ಸಾಮಥ್ರ್ಯದಿಂದ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಬ್ರಹ್ಮ ಕಮಲ ಚಿತ್ರಕ್ಕೆ ಹಲವು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ಮಹಾನ್ ಹುತಾತ್ಮ ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದು ಖುಷಿ ಇದೆ.
- ನಿಮಗೆ ಖುಷಿಕೊಡುವ ತಾಣ ಯಾವುದು
ಚಿತ್ರೀಕರಣ ಸ್ಥಳ ನನಗೆ ಖುಷಿ ಕೊಡುವ ತಾಣ. ಚಿತ್ರೀಕರಣಲ್ಲಿದ್ದಾಗ ಅಥವಾ ಕೈ ತುಂಬಾ ಕೆಲಸವಿದ್ದಾಗ ಅದರಲ್ಲಿ ಸಿಗುವ ಖುಷಿಯೇ ಬೇರೆ. ಹೀಗಾಗಿ ಚಿತ್ರೀಕರಣದ ಸ್ಥಳ ಇಷ್ಟಪಡುವೆ
- ನಿಮ್ಮ ಸ್ಟ್ರೆಂಥ್ ಅಂಡ್ ವೀಕ್ನೇಸ್ ಏನು
ಒನ್ ಟೇಕ್ ನಲ್ಲಿ ಡೈಲಾಗ್ ಹೇಳುವುದು, ಗ್ಲಿಸರಿನ್ ಇಲ್ಲದೆ ಅಳುವುದು ನನ್ನ ಸಾಮಥ್ರ್ಯ. ವೀಕ್ನೆಸ್ ಅಂತ ಏನೂ ನನಗೆ ಗೊತ್ತಂತೆ ಇಲ್ಲ.

- ಚಿತ್ರರಂಗದಲ್ಲಿ ಮುಂದೆ ನಿಮ್ಮ ಗುರಿ
ಗಾಡ್ ಪಾಧರ್ ಇಲ್ಲಸೆ ಚಿತ್ರರಂಗದಲ್ಲಿ ಹತ್ತು ವರ್ಷ ಪೂರ್ಣ ಮಾಡಿದ್ದೇನೆ. ಗುರಿ ಇಲ್ಲದೆ ಚಿತ್ರರಂಗಕ್ಕೆ ಬಂದೆ.ಒಳ್ಳೆಯ ಪಾತ್ರ ಮಾಡಬೇಕು. ಜನರನ್ನು ರಂಜಿಸಬೇಕು ಎನ್ನುವುದು ನನ್ನ ಉದ್ದೇಶ. ಮುಂದೆ ಎಷ್ಟು ಸಿನಿಮಾ ಮಾಡುತ್ತೆನೋ ಗೊತ್ತಿಲ್ಲ ಆದರೆ ಮಾಡಿದ ಪ್ರತಿ ಸಿನಿಮಾ ಜನರಿಗೆ ಇಷ್ಟವಾಗಬೇಕು ಎನ್ನುವ ಆಸೆ ಇದೆ.
- ನಿಮ್ಮಲ್ಲಿ ಏನಾದರೂ ಕೊರಗು ಇದೆಯಾ
ಹೌದು .ನನ್ನ ಪ್ರತಿಭೆಯನ್ನು ನಿರ್ದೇಶಕರು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವ ಕೊರಗು ಇದೆ. ಮುಂದೆ ಒಳ್ಳೆಯ ಪಾತ್ರ ಸಿನಿಮಾ ಸಿಗಬಹುದು ಎನ್ನುವ ವಿಶ್ವಾಸಲ್ಲಿ ನಾನಿದ್ದೇನೆ.
- ನಟಿಯಾಗುತ್ತೇನೆ ಎಂದಾಗ ಮನೆಯವರ ಬೆಂಬಲ ಹೇಗಿತ್ತು.
ಆರಂಭದಲ್ಲಿ ಸಿನಿಮಾ ನಟಿಯಾಗುತ್ತೇನೆ ಎಂದಾಗ ಅಪ್ಪ ,ಅಣ್ಣ ಒಪ್ಪಿರಲಿಲ್ಲ. ಐಎಎಸ್ ಆಗಬೇಕು ಎನ್ನುವ ಕನಸು ಕಂಡಿದ್ದೀಯಾ ಆ ಕಡೆ ಗಮನ ಹರಿಸು ಎಂದಿದ್ದರು. ಚಿತ್ರರಂಗದಲ್ಲಿ ನನಗೆ ಸಿಕ್ಕ ಪಾತ್ರಗಳು, ಒಳ್ಳತನ, ಶ್ರದ್ದೆ ನೋಡಿ ಅಪ್ಪ, ಅಮ್ಮ, ಅಣ್ಣ ಸಹಕಾರ ನೀಡಿದರು ಬೆಂಗಳೂರಿನಲ್ಲಿ ನಾನು ನನ್ನ ಸಹೋದರಿ ಅಶ್ವಥಿ ಇದ್ದೇವೆ. ಅಪ್ಪ ಇತ್ತೀಚೆಗೆ ನಮ್ಮನ್ನು ಬಿಟ್ಟು ಹೋದರು.ಅವರ ನೆನಪು ಸದಾ ನಮ್ಮೊಂದಿಗೆ ಇದೆ.ಯಾವಾಗ ಕಾಲ್ ಮಾಡಿದಾಗಲೆಲ್ಲಾ ನಿನ್ನ ಸಿನಿಮಾ ಯಾವಾಗ ತೋರಿಸಿತ್ತೀಯಾ ಅನ್ನುತ್ತಿದ್ದರು. ಕಡೆಯದಾಗಿ ಐರಾವನ್ ಸಿನಿಮಾ ಅವರಿಗೆ ತೋರಿಸಿದ್ದೆ. ಆ ಖುಷಿ ಇದೆ. ಒಳ್ಳೆಯ ಚಿತ್ರ ಮಾಡಿ ಅಪ್ಪನ ಆಸೆ ಈಡೇಸುವ ಗುರಿ ಇದೆ.

- ನಿಮ್ಮ ಮನಸಿನ ಮಾತು ಹೇಳುವುದಾದರೆ
ಕನ್ನಡದಲ್ಲಿ ಒಳ್ಳೆಯ ಪ್ರತಿಭೆಗಳಿದ್ದಾರೆ. ಹೊಸಬರಿರಲಿ ಅಥವಾ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ನಟಿಯರು ಇರಲಿ ಅವರಿಗೂ ನಿರ್ದೇಶಕರು ನಿರ್ಮಾಪಕರು ಅವಕಾಶ ಮಾಡಿಕೊಡಬೇಕು. ಕೊಟ್ಟವರಿಗೆ ಅವಕಾಶ ಕೊಡಲಾಗಿತ್ತಿದೆ. ಆಚೆ ಈಚೆ ಆ ಕಡೆ ಈ ಕಡೆ ನೋಡಿ ಒಳ್ಳೆಯ ಪ್ರತಿಭೆಗಳು ಸಿಗುತ್ತಾರೆ. ಅವರನ್ನು ಚಿತ್ರಗಳಿಗೆ ಆಯ್ಕೆ ಮಾಡಿ, ನೀವು ಅವಕಾಶ ಕೊಟ್ಟರೆ ತಾನೆ ನಟಿಯರು ಬೆಳೆಯಲು ಸಾದ್ಯ ಪ್ರತಿಭೆಗಳಿಗೆ ಅವಕಾಶ ನೀಡಿ . ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆಯಲು ಅಭಿಮಾನಿಗಳು ಕಾರಣ ಅವರುವೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎನ್ನುತ್ತಾರೆ ಎನ್ನುವುದು ನಟಿ ಅದ್ವಿತಿ ಶೆಟ್ಟಿ