Mahanati-2; Auditions begin: Golden opportunity for aspiring actresses

ಮಹಾನಟಿ-2; ಆಡಿಷನ್ಸ್ ಆರಂಭ: ನಟಿಯಾಗುವರಿಗೆ ಸುವರ್ಣ ಅವಕಾಶ - CineNewsKannada.com

ಮಹಾನಟಿ-2; ಆಡಿಷನ್ಸ್ ಆರಂಭ: ನಟಿಯಾಗುವರಿಗೆ ಸುವರ್ಣ ಅವಕಾಶ

“ಮಹಾನಟಿ” ಸೀಸನ್ 1 ಯಶಸ್ವಿಯಾದ ಬೆನ್ನಲ್ಲೇ ವಿಜೇತ ನಟಿ ಪ್ರಿಯಾಂಕಾ ಬೆಳ್ಳಿತೆರೆಯಲ್ಲಿ ತನ್ನ ಚೊಚ್ಚಲ ನಟನೆ ಆರಂಭಿಸಿದ್ದಾರೆ. ಇದರ ಬೆನ್ನಲೇ ಸೀಸನ್ ಎರಡನೇ ಆವೃತ್ತಿ ಆರಂಭವಾಗಿದೆ.ನಟಿಯಾಗುವ ಕಲಾವಿದೆಯರಿಗೆ ಸುವರ್ಣ ಅವಕಾಶ ಇದಾಗಿದೆ.

ತರುಣ್ ಸುಧೀರ್ ಹಾಗೂ ಮಹಾನಟಿ ಪ್ರೇಮ ಅವರ ನಟನೆಯ ಪಾಠಗಳು ,ಮನೋಜ್ಞ ನಟಿ ನಿಶ್ವಿಕ ಅವರ ಸ್ಫೂರ್ತಿ ಮಾತುಗಳು ,ಮಾಸ್ಟರ್ ಮೈಂಡ್ ಎಂದೇ ಖ್ಯಾತರಾದ ರಮೇಶ್ ಅರವಿಂದ್ ಅವರು ಮಾಸ್ಟರ್ ಕ್ಲಾಸ್ ಮೂಲಕ ನಟಿಯರ ಅಭಿನಯವನ್ನು ತಿದ್ದಿ ತೀಡಿದ್ದಾರೆ ,ಮಹಾನಟಿ ಮತ್ತಷ್ಟು ನಟನೆಯ ಹಸಿವಿರುವವರಿಗಾಗಿ ,ಅಗತ್ಯ ವೇದಿಕೆಯಾಗಿದೆ .

ಚಂದನವನದ ನಟಿ ಆಗಿ ಕನ್ನಡಿಗರ ಮನಕ್ಕೆ ಲಗ್ಗೆ ಇಡಬೇಕೆಂಬ ಕನಸು ಕಾಣುತ್ತಿದ್ದು ವೇದಿಕೆ ಸಿಗದೇ ವಂಚಿತರಾಗಿದ್ದೀರಾ ಹಾಗಾದರೆ ಮಹಾನಟಿ ಸೀಸನ್-2 ನಿಮಗೆ ತಕ್ಕ ವೇದಿಕೆ. ಮಹಾನಟಿ ಸೀಸನ್-2 ಆಡಿಷನ್ 16 ಜಿಲ್ಲೆಗಳಲ್ಲಿ ನಡೆಯಲಿದ್ದು 18 ರಿಂದ 28 ವರುಷದ ಒಳಗಿನ ಕಲಾಸಕ್ತ ಯುವತಿಯರು ಈ ಆಡಿಷನ್‍ನಲ್ಲಿ ಭಾಗವಹಿಸಬಹುದಾಗಿದೆ

ಏಪ್ರಿಲ್ 5ರಂದು ಆರಂಭವಾಗಿದ್ದು ಮೈಸೂರು ಮತ್ತು ಬೆಳಗಾವಿ , ಏಪ್ರಿಲ್ 6 ಭಾನುವಾರ ಬೆಂಗಳೂರು ಮತ್ತು ಹುಬ್ಬಳ್ಳಿ, ಏಪ್ರಿಲ್ 12 ಶನಿವಾರ ಚಿಕ್ಕಮಗಳೂರು ಮತ್ತು ಬಿಜಾಪುರ, ಏಪ್ರಿಲ್ 13 ಭಾನುವಾರ ಮಡಿಕೇರಿ ಹಾಗು ಕೊಪ್ಪಳ, ಏಪ್ರಿಲ್ 19 ಶನಿವಾರ ಮಂಗಳೂರು ಮತ್ತು ಶಿರಸಿ, ಏಪ್ರಿಲ್ 20 ಭಾನುವಾರ ಹಾಸನ ಹಾಗು ದಾವಣಗೆರೆ, ಏಪ್ರಿಲ್ 26 ಶನಿವಾರ ತುಮಕೂರು ಹಾಗು ಬಳ್ಳಾರಿ, ಏಪ್ರಿಲ್ 27 ಭಾನುವಾರ ಶಿವಮೊಗ್ಗ ಹಾಗು ಚಿತ್ರದುರ್ಗ ದಲ್ಲಿ ಆಡಿಷನ್ ನಡೆಯಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin