Mumbai Ultimate League Season 5 starts from April 13

ಏಪ್ರಿಲ್ 13ರಿಂದ ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ಆರಂಭ - CineNewsKannada.com

ಏಪ್ರಿಲ್ 13ರಿಂದ ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ಆರಂಭ

ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ಅನ್ನು ಘೋಷಣೆ ಮಾಡಿದೆ. ಏಪ್ರಿಲ್ 13 ರಿಂದ ಮೇ 4, 2025 ರವರೆಗೆ ಬಾಂದ್ರಾದ ವಿಂಗ್ಸ್ ಅರೇನಾದಲ್ಲಿ ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ನಡೆಯಲಿದೆ. ದೇಶದ ಪ್ರಮುಖ ಪ್ರತಿಭೆಗಳನ್ನು ಈ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಂಬೈ ಅಲ್ಟಿಮೇಟ್ ಲೀಗ್ ನ ಸೀಸನ್ 5, ಇದೇ ಏಪ್ರಿಲ್ 13, 19, 20, 26, 27 ಮತ್ತು ಮೇ 4 ರಂದು ನಡೆಯಲಿದೆ. ಈ ಪಂದ್ಯಾವಳಿಯಲ್ಲಿಆರು ಸ್ಪರ್ಧಾತ್ಮಕ ತಂಡಗಳಿರಲಿದ್ದು ಮುಂಬೈ, ಸೂರತ್, ಪುಣೆ, ಮತ್ತು ಅಹಮದಾಬಾದ್ ನಿಂದ ಅಲ್ಟಿಮೇಟ್ ಫ್ರಿಸ್ಬೀ ಆಟಗಾರರು ಭಾಗವಹಿಸಲಿದ್ದಾರೆ.

ಹಾಲಿ ಚಾಂಪಿಯನ್‍ಗಳಾದ ಡ್ಯಾನ್ಸಿಂಗ್ ಡ್ರಾಗನ್ಸ್ ತಮ್ಮ ಪ್ರಶಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ರೀಬಾರ್ನ್ ಫೈರ್, ಬುಂಬೈ ಬಂಟೈಸ್, ದಿ ಆಫ್ಟರ್ಬರ್ನರ್ಸ್, ಬಾಂಬೆ ರೈನೋಸ್ ಮತ್ತು ದೇಸಿ ಹಾಕ್ಸ್ ಚಾಂಪಿಯನ್‍ಶಿಪ್‍ಗಾಗಿ ಸ್ಪರ್ಧಿಸಲಿವೆ. ಒಟ್ಟು 127 ಆಟಗಾರರು ಕಣಕ್ಕಿಳಿಯಲಿದ್ದು, ಇದರಲ್ಲಿ ದಾಖಲೆ ಮಟ್ಟದ 45 ಮಹಿಳಾ ಅಥ್ಲೀಟ್ ಗಳು ಭಾಗವಹಿಸುತ್ತಿದ್ದಾರೆ. ಮುಂಬೈ ಅಲ್ಟಿಮೇಟ್ ಲೀಗ್ ಭಾರತದ ಅಲ್ಟಿಮೇಟ್ ಫ್ರಿಸ್ಬೀ ಕ್ರಿಯಾಶೀಲತೆಯಲ್ಲಿ ಪ್ರಮುಖ ಸ್ಪರ್ಧೆಯಾಗಿ ಮಿಂಚುತ್ತಿದೆ.

ಆಫ್-ಸೀಸನ್ ಅಲ್ಟಿಮೇಟ್ ನ ಸಹ ಸಂಸ್ಥಾಪಕ ರಿಷಭ್ ಕಿಶೋರ್ ಮಾತನಾಡಿ ‘ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5 ಅನ್ನು ಆರಂಭಿಸಲು ತುಂಬಾ ಉತ್ಸಾಹಿತರಾಗಿದ್ದು, ಭಾರತದಲ್ಲಿ ಕ್ರೀಡೆಯ ಬೆಳವಣಿಗೆಗೆ ಸಹಕರಿಸಲು ಹಂಬಲಿಸುತ್ತಿದ್ದೇವೆ. ಲೀಗ್ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕೇವಲ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುವುದಿಲ್ಲ ಬದಲಾಗಿ ಇದು ಅಲ್ಟಿಮೇಟ್ ಫ್ರಿಸ್ಬೀಯ ಉತ್ಸಾಹ ಮತ್ತು ಚೈತನ್ಯದ ಆಚರಣೆಯಾಗಿದೆ.

ಈ ಕ್ರೀಡೆಯು ದೇಶದ ವಿವಿಧ ಭಾಗಗಳ ಆಟಗಾರರನ್ನು ಒಟ್ಟುಗೂಡಿಸಲಿದೆ. ಕ್ರೀಡೆಯು ವೇಗವನ್ನು ಪಡೆಯುತ್ತಿರುವುದನ್ನು ನೋಡಿ ನಮಗೆ ಹೆಮ್ಮೆಯಿದೆ. ಈ ಬಾರಿ ಸ್ಪರ್ಧೆ ಇನ್ನಷ್ಟು ಜನರನ್ನು ಆಟಗಾರರಾಗಿ, ಅಭಿಮಾನಿಗಳಾಗಿ ಅಥವಾ ಬೆಂಬಲಿಗರಾಗಿ ಕ್ರೀಡೆಯೊಂದಿಗೆ ಜೊತೆಯಾಗಲು ಪ್ರೇರೇಪಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.

ಈ ಲೀಗ್‍ಗೆ ಆಟಗಾರರ ಹರಾಜು ಮಾರ್ಚ್ 14 ರಂದು ನಡೆದಿದ್ದು, 102 ಆಟಗಾರರನ್ನು ಆರು ತಂಡಗಳಿಗೆ ಹರಾಜು ಮಾಡಲಾಗಿದೆ. ಈ ಲೀಗ್ ನ ಒಡೆತನ ಹೊಂದಿರುವವರು ತಂಡಗಳ ಆಟಗಾರರೂ ಆಗಿರುವುದು ಈ ಲೀಗ್ ನ ವಿಶೇಷತೆಗಳಲ್ಲೊಂದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin