ಮಂಡ್ಯದ “ರಿಪಬ್ಲಿಕ್ ಸೆಂಟ್ರಲ್ ಶಾಲೆ” ಮಕ್ಕಳಿಗೆ ಕೆಸರು ಓಟದ ಸ್ಪರ್ಧೆ ಆಯೋಜನೆ
ಸದಾ ಹೊಸತನದ ವಿಷಯಗಳನ್ನು ಮಕ್ಕಳಿಗೆ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಮಂಡ್ಯದ “ರಿಪಬ್ಲಿಕ್ ಸೆಂಟ್ರಲ್ ಶಾಲೆ” ಅಧ್ಯಕ್ಷ ಮಂಜು ಸಾರಥ್ಯದಲ್ಲಿ ಮಕ್ಕಳುಗೆ ಕೆಸರು ಓಟ ಆಯೋಜಿಸಿ ಮಕ್ಕಳಲ್ಲಿ ನವೋಲ್ಲಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಲೆಯ ಮಕ್ಕಳು ಕೆಸರು ಓಟದಲ್ಲಿ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಪಾಲ್ಗೊಂಡಯ ಖುಷಿ, ಸಂತಸದ ಕ್ಷಣಗಳಲ್ಲಿ ಭಾಗಿಯಾಗದರು. ಈ ವೇಳೆ ಶಾಲೆಯ ಅಧ್ಯಕ್ಷ ಮಂಜು ಕೂಡ ಭಾಗಿಯಾಗಿ ಮಕ್ಕಳಲ್ಲಿ ಮಕ್ಕಳಾಗಿ ಹೋಗಿದ್ದರು., ಜೊತೆಗೆ ಶಾಲೆಯ ಬೋಧಕರು ಮತ್ತು ಬೋಧಕೇತರ ಸಿಬ್ಬಂಧಿ ಭಾಗಿಯಾಗುವ ಮೂಲಕ ಇನ್ನಷ್ಟು ರಂಗು ಮೂಡಿಸಿದ್ದಾರೆ

ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳು ಹೊರಳಾಡಿ ಸ್ಪರ್ಧೆಗಳಲ್ಲಿ ಉತ್ಸಾಹದಾಯಕವಾಗಿ ಭಾಗವಹಿಸಿ ಸಂಗೀತಕ್ಕೂ ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದ ಕ್ಷಣ ನಿಜಕ್ಕೂ ರೊಚನೀಯ ಎಂದು ಶಾಲೆಯ ಅಧ್ಯಕ್ಷ ಮಂಜು ಮಾಹಿತಿ ಹಂಚಿಕೊಂಡಿದ್ದಾರೆ
ಕೆಸರುಗದ್ದೆ ಓಟದಿಂದಾಗುವ ಅನೇಕ ಆರೋಗ್ಯಕರ ಪ್ರಯೋಜನಗಳು ಇದ್ದು ಅದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ.ದೇಹ, ಮನಸ್ಥಿತಿ ಮತ್ತು ಮೆದುಳಿನ ಮೇಲೆ ಆರೋಗ್ಯಕರ ಪರಿಣಾಮ ಬೀರುತ್ತದೆ.ಹೃದಯ ಮತ್ತು ರಕ್ತನಾಳಗಳನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ

ಒತ್ತಡ ನಿವಾರಣೆಗೆ ಸಹಾಯ ಮಾಡುವ ಜೊತೆಗೆಅಸ್ತಿಪಂಜರದ ಮೂಳೆಗಳನ್ನು ಬಲಪಡಿಸುತ್ತದೆ ಜೊತೆಗೆ ಮೆದುಳಿನ ಚಟುವಟಿಕೆ ಮತ್ತು ಪ್ರತಿಕ್ರಿಯೆಗಳನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗಾಗಿ ಕೆಸರು ಓಟ ಹಮ್ಮಿಕೊಳ್ಳಲಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಚಿಕ್ಕ ಮಕ್ಕಳು ಮತ್ತು ವಿದ್ಯಾರ್ಥಿಗಳು ಕೆಸರಲ್ಲಿ ಹೊರಳಾಡಿ ಸಂಭ್ರಮಿಸಿದರು, ಜೊತೆಗೆ ಶಾಲೆಯ ವಿದ್ಯಾರ್ಥಿಗಳು ಕೆಸರಿನಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗಿಯಾಗಿ ಸಂಭ್ರಮದ ಕ್ಷಣಗಳಲ್ಲಿ ಕಾಲಕಳೆದರು


