ಎರಡು ವಿಭಿನ್ನ ಸಂಸ್ಕತಿಗಳ ಸಂಗಮ “ಕಲ್ಯಾಣಿ” ಸದ್ದಿಲ್ಲದೆ ಚಿತ್ರೀಕರಣ ಪೂರ್ಣ
ಜಟ್ಟ, ಮೈತ್ರಿಯಂತಹ ಸದಭಿಚಿ ಚಿತ್ರ ನೀಡಿರುವ ನಿರ್ದೇಶಕ ಬಿ,ಎಂ ಗಿರಿರಾಜ್ ಇದೀಗ ಸ್ನೇಹಿತರ ಜತೆಗೂಡಿ ಆರ್ಕೆ ಸಿನಿಮಾಸ್ ನಿರ್ಮಾಣ ಸಂಸ್ಥೆ ಆರಂಭಿಸಿ ಮಾಡಿರುವ ಮೊದಲ ಚಿತ್ರ “ಕಲ್ಯಾಣಿ”. ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಸೂಕ್ತ ಸಮಯ ನೋಡಿಕೊಂಡು ಚಿತ್ರವನ್ನು ತೆರೆಗೆ ತರುವ ಉದ್ದೇಶಹೊಂದಿದ್ಧಾರೆ.
ಹತ್ತಾರು ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ ಕುಮಾರಸ್ವಾಮಿ ಅವರು ಕಲ್ಯಾಣಿ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ರಂಗಭೂಮಿ ಕಲಾವಿದ ಸಾಮ್ರಾಟ್ ಶೆಟ್ಟಿ ಅವರನ್ನು ನಾಯಕರನ್ನಾಗಿ ಪರಿಚಯ ಮಾಡಿರುವ ನಿರ್ದೇಶಕರು ಮುಂಬೈನ ಬೆಡಗಿ ಸಿಮ್ರಾನ್ ನಾಯಕಿ. ಬಸವರೆಡ್ಡಿ ಅವರ ಕಥೆ ಆಧರಿಸಿ ಸಿನಿಮಾಕ್ಕೆ ತಕ್ಕಂತೆ ಹೊಂದಿಕೆ ಮಾಡಿಕೊಂಡಿದ್ದಾರೆ
ಹೊಸ ನಿರ್ಮಾಣ ಸಂಸ್ಥೆ ಆರ್,ಕೆ ಮೂವೀಸ್ ಮತ್ತು ಚಿತ್ರದ ಶೀರ್ಷಿಕೆ ಅನಾವರಣ ನಡೆಯಿತು. ಈ ವೇಳೆ ಮಾತಿಗಿಳಿದ ನಿರ್ದೇಶಕ ಬಿ,ಎಂ ಗಿರಿರಾಜ್, ಜಟ್ಟ ಚಿತ್ರದಿಂದ ಕುಮಾರಸ್ಬಾಮಿ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಆಗಿನಿಂದಲೂ ಅವರು ಪರಿಚಯ. ಹತ್ತಾರು ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ., ಸುಮ್ಮನೆ ಇದ್ದರೆ ಏನೂ ಆಗುವುದಿಲ್ಲ ಎಂದಾಗ ಹೊಳೆದಿದ್ದೇ ನಿರ್ಮಾಣ ಸಂಸ್ಥೆ, ಕಲ್ಯಾಣಿ ಚಿತ್ರದ ಮೂಲಕ ಪಕ್ಕಾ ಕನ್ನಡ ಸಿನಿಮಾ ಮತ್ತು ಸದಭಿರುಚಿತ್ರ ಚಿತ್ರ ನೀಡುವ ಉದ್ದೇಶ ನಮ್ಮದು ಎಂದರು
ಕಲ್ಯಾಣಿ ಚಿತ್ರ ಎರಡು ವಿಭಿನ್ನ ಸಂಸ್ಕøತಿಗಳನ್ನು ಅನಾವರಣ ಮಾಡುವ ಚಿತ್ರ. ನಂಬಿರುವ ಮೌಲ್ಯಗಳನ್ನಿಟ್ಟಿಕೊಂಡು ಮಾಡಿರುವ ನವಿರಾದ ಒಲವಿನ ಕತೆಯನ್ನು ಒಳಗೊಂಡಿದೆ. ನಾಯಕಿ ಕಲ್ಯಾಣಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬರುತ್ತಾಳೆ. ಯಾಕೆ, ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು, ಎರಡು ಬೇರೆ ಬೇರೆ ಸಂಸೃತಿಗಳ ಮುಖಾಮಖಿಯೂ ಇಲ್ಲಿದೆ. ಜನಪದ ನೆಲೆಗಟ್ಟಿನಲ್ಲಿ ಚಿತ್ರವನ್ನು ತೆರೆಗೆ ಕಟ್ಟಿಕೊಡುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು
“ನವಿಲಾದವರು” ಕಿರುಚಿತ್ರದಿಂದ ಆರಂಭವಾದ ಸಿನಿಮಾ ಜರ್ನಿ ಇಲ್ಲಿಯ ತನಕ ಬಂದಿದೆ. ಕಲ್ಯಾಣಿ ಚಿತ್ರವನ್ನು ಭಟ್ಕಳ, ಬೆಂಗಳೂರು ಚಿತ್ರೀಕರಣ ಮಾಡಲಾಗಿದೆ. ಸೂಕ್ತ ಸಮಯ ನೋಡಿಕೊಂಡು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದು ಹೇಳಿದರು
ಕಾಂತಾರ, ಕೊರಗಜ್ಜ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದ ಸಾಮ್ರಾಟ್ ಶೆಟ್ಟಿ, “ಕಲ್ಯಾಣಿ” ಚಿತ್ರದ ಮೂಲಕ ನಾಯಕರಾಗಿದ್ದಾರೆ, ನೀನಾಸಂ ಪ್ರತಿಭೆ,
ನಟ ಸಾಮ್ರಾಟ್ ಶೆಟ್ಟಿ ಮಾತನಾಡಿ ಉಡುಪಿ ಬಳಿಯ ಕೋಟಾ, ಉತ್ತಮ ಪಾತ್ರ ಸಿಕ್ಕಿದೆ, ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.
ನಾಯಕಿ ಸಿಮ್ರಾನ್ ಮಾತನಾಡಿ ಈಗ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ ಮುಂದಿನ ದಿನಗಳಲ್ಲಿ ಕನ್ನಡ ಕಲಿಯುವುದಾಗಿ ತಿಳಿಸಿದರು
ನಿರ್ಮಾಪಕ ಕುಮಾರಸ್ವಾಮಿ ಮಾತನಾಡಿ ಹಲವು ಸಿನಿಮಾಗಳ ಅನುಭವದ ನಂತರ ಕಲ್ಯಾಣಿ ಸಿನಿಮಾ ನಿರ್ಮಾಣ ಮಾಡಿದ್ದು ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು
ಸಂಗೀತ ನಿರ್ದೇಶಕ ಭರತ್ ಬಿಜೆ ಮಾತನಾಡಿ ಚಿತ್ರದಲ್ಲಿ ನಾಲ್ಕು ಹಾಡಿವೆ. ಜಾನಪದ ಹಿನ್ನೆಲೆಯಲ್ಲಿ ಹಾಡು ಮೂಡಿಬಂದಿದೆ ಎಂದರು
ಕಲಾವಿದರಾದ ಪಿಡಿ ಸತೀಶ್ ಚಂದ್ರ, ಸಾಮ್ರಾಜ್ಞೆ, ಶಮಂತ ರಾವ್ , ಛಾಯಾಗ್ರಾಹಕ ಪ್ರಶಾಂತ್ ಸಾಗರ್ , ನೃತ್ಯ ನಿರ್ದೇಶಕಿ ಗೀತಾ ಸೇರಿದಂತೆ ಹಲವು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

