Review: Heart-pounding beautiful story "Bhavanam Gaganam

Review: ಮನ ಮಿಡಿಯುವ ಸುಂದರ ಕಥನ “ಭವನಂ ಗಗನಂ - CineNewsKannada.com

Review: ಮನ ಮಿಡಿಯುವ ಸುಂದರ ಕಥನ “ಭವನಂ ಗಗನಂ

ಚಿತ್ರ : ಭುವನಂ ಗಗನಂ
ನಿರ್ದೇಶನ : ಗಿರೀಶ್ ಮೂಲಿಮನಿ
ತಾರಾಗಣ : ಪೃಥ್ವಿ ಅಂಬಾರ್, ಪ್ರಮೋದ್ , ರೆಚೆಲ್ ಡೇವಿಡ್, ಅಶ್ವಥಿ , ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ , ಕೆ .ಎಸ್. ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಮತ್ತಿತರರು
ರೇಟಿಂಗ್ : *** 3.5 / 5

ತಮ್ಮದೇ ಆದ ಕನಸು,ಆಶಯ ಇಟ್ಟುಕೊಂಡ ಎರಡು ವಿಭಿನ್ನ ಕಥೆ ಮತ್ತು ವ್ಯಕ್ತಿಗಳ ಸುಂದರ ಮತ್ತು ಭಾವನಾತ್ಮಕ ಪಯಣದ ತಿರುಳು ಹೊಂದಿರುವ ಚಿತ್ರ “ಭುವನಂ ಗಗನಂ”.

ರಾಜರು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ನಿರ್ದೇಶಕ ಗಿರೀಶ್ ಮೂಲಿ ಮನಿ ಒಂದಷ್ಟು ವರ್ಷಗಳ ನಂತರ ಇಬ್ಬರು ಪ್ರತಿಭಾನ್ವಿತ ನಟರನ್ನಿಟ್ಟುಕೊಂಡು ಮಾಡಿದ ಕಥೆ, ಸುಂದರ ಪಯಣ, ಕಣ್ಣ ಹನಿ ತರಿಸುವ ಸನ್ನಿವೇಶದ ಸುತ್ತ ಮನ ಮಿಡಿಯುವ ಸುಂದರ ಕಥನ ಇದು.

ಚಿತ್ರ ತಡವಾದರೂ ಲೇಟೆಸ್ಟ್ ಆಗಿ ಚಿತ್ರ ಮೂಡಿ ಬಂದಿದೆ. ಇದರ ಹಿಂದೆ ನಿರ್ದೇಶಕ ಗಿರೀಶ್ ಪರಿಶ್ರಮ ಮತ್ತು ನಿರ್ಮಾಪಕ ಮುನೇಗೌಡರ ಸಾಥ್ ನಿಂದಾಗಿ ಮನೆ ಮಂದಿಯಲ್ಲಾ ಮೆಚ್ಚುವ ತನಗರಿವೇ ಇಲ್ಲವೆ ಕಣ್ಣಂಚಿನಲ್ಲಿ ನೀರು ತರಿಸುವ ಕಥೆ ಹೊಂದಿರುವ ಚಿತ್ರ “ಭುವನಂ ಗಗನಂ”.

ಒಂದೊಳ್ಳೆ ಕಥೆ, ಪಾತ್ರ, ಅದಕ್ಕೆ ಒಪ್ಪುವ ಕಲಾವಿದರು ಸಿಕ್ಕರೆ ನಿರ್ದೇಶಕ ಪ್ರಯತ್ನ ಅರ್ದ ಗೆದ್ದಂತೆ. ಬಳಿಕ ಕಥೆ, ನಿರೂಪಣಾ ಶೈಲಿಯ ಮೂಲಕ ನಿರ್ದೇಶಕರು ಇನ್ನರ್ಧ ಗೆಲುವು ಸಾಧಿಸುವ ಮೂಲಕ ಕನ್ನಡಕ್ಕೆ ವಿಭಿನ್ನ ಮತ್ತು ಅಪರೂಪದ ಚಿತ್ರ ನೀಡಿದ್ದಾರೆ. ಇದರಲ್ಲಿ ನಿರ್ದೇಶಕ ಗಿರೀಶ್ ಮೂಲಿಮನಿ ಯಶಸ್ವಿಯಾಗುವ ಮೂಲಕ ಕನ್ನಡಕ್ಕೆ ಮತ್ತೊಬ್ಬ ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕ ಸಿಕ್ಕಂತಾಗಿದೆ.

ಎರಡು ಕುಟುಂಬಗಳ ಪ್ರೀತಿ, ಬಾಂಧವ್ಯ, ತಳಮಳಗಳ ನಡುವೆ ಎದುರಾಗುವ ಘಟನೆಗಳ ಸುತ್ತ ಸಾಗುವ ಕಥೆ, ಭೂಮಿ, ಆಕಾಶದಂತೆ ಎರಡೂ ಕಣ್ಣೆದುರೇ ಕಂಡರೂ ಅವುಗಳ ಕಾರ್ಯವೈಖರಿ ಭಿನ್ನ ಪ್ರೀತಿ , ಸಂಬಂಧಗಳ ನೋವು , ನಲಿವಿನ ರೂಪಕವಾಗಿ ಭುವನಂ ಗಗನಂ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.ಒಂದಷ್ಟು ತಿರುವು ಮತ್ತು ಕುತೂಹಲ ಮತ್ತು ಪರಿಸದ ನಡುವೆ ಚಿತ್ರ ಸಾಗಿ ಬಂದ ರೀತಿ ರೋಚಕವಾಗಿದೆ.

ತಾಯಿ ಅಸ್ಥಿ ವಿಸರ್ಜಿಸಲು ಹೊರಟ ಮಾನಸಿಕ ಅಸ್ಬಸ್ಥ ರಾಮ ( ಪೃಥ್ವಿ ಅಂಬರ್); ಪ್ರೇಮಿ ಹುಡುಕಿಕೊಂಡು ಅಭಿ ( ಪ್ರಮೋದ್ ) ಇಬ್ಬರೂ ಕನ್ಯಾಕುಮಾರಿಗೆ ಹೊರಟಿರುತ್ತಾರೆ. ಇಬ್ಬರ ಈ ಪ್ರಯಾಣದಲ್ಲಿ ನಡೆಯುವ ಮನ‌ಮಿಡಿಯುವ ಕಥೆ ,ಸನ್ನಿವೇಶ ಚಿತ್ರದ ಹೂರಣ. ಕಾಲೇಜು ವಿದ್ಯಾರ್ಥಿ ಅಭಿ ಮತ್ತು ರಾಮ ತಮ್ಮ ತಮ್ಮ ಕನಸು ಆಸೆ ಈಡೇರಿಸಿಕೊಳ್ಳುತ್ತಾರಾ ಎನ್ನುವುದು ಚಿತ್ರದ ಕುತೂಹಲ.ಅದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.

ನಿರ್ದೇಶಕ ಗಿರೀಶ್ ಮೂಲಿಮನಿ ವಿಶೇಷವಾಗಿ ಕೌಟುಂಬಿಕ ಸಂಬಂಧಗಳ ಸಂಕೀರ್ಣತೆಯನ್ನು ಚಿತ್ರಿಸುವಲ್ಲಿ ಹಾಗು ಪ್ರೇಕ್ಷಕರ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬಹಳ ದಿನಗಳ ನಂತರ ಕನ್ನಡ ಚಿತ್ರರಂಗಕ್ಕೆ ಮನಮಿಡಿಯುವ ಸುಂದರ ಕಥನ ನೀಡಿದ್ದಾರೆ

ನಟ ಪೃಥ್ವಿ ಅಂಬಾರ್ ತಮ್ಮ ಪಾತ್ರದ ಮೂಲಕ‌ ಮತ್ತೊಮ್ಮೆ ಗಮನ‌ ಸೆಳೆದಿದ್ದಾರೆ. ಅಲ್ಲಲ್ಲಿ ಒಂದಷ್ಟು ಸಣ್ಣ ಪುಟ್ಟ ಲೋಪ, ಅದರಲ್ಲಿಯೂ ನೃತ್ಯ ಮತ್ತು ಹೊಡೆದಾಟದ ಸನ್ನಿವೇಶ ಇನ್ನಷ್ಟು ಸೂಕ್ಷ್ಮವಾಗಿ ನಿಭಾಯಿಸಿದ್ದರೆ ಮತ್ತಷ್ಟು ಅದ್ಬುತವಾಗಿರುತ್ತಿತ್ತು. ನಟನೆಯ ವಿಷಯದಲ್ಲಿ ಎರಡು ಮಾತು ಆಡುವಂತಿಲ್ಲ. ಸವಾಲಿನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

ನಟ ಪ್ರಮೋದ್ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿಂದಿನ ಚಿತ್ರಗಳಿಗಿಂತ ಇಲ್ಲಿ ಅವರ ಅಭಿನಯದಲ್ಲಿ ಪ್ರಬುದ್ದತೆ, ಪಕ್ವತೆ ಕಾಣಿಸುತ್ತದೆ.

ನಾಯಕಿ ರಾಚೆಲ್ ಡೇವಿಡ್,ಅಚ್ಯುತ್ ಕುಮಾರ್ ಮತ್ತು ಶರತ್ ಲೋಹಿತಾಶ್ವ ಪಾತ್ರ ಚಿತ್ರಕ್ಕೆ ಮತ್ತೊಂದು ಫ್ಲಸ್ ಪಾಯಿಂಟು. ಜೊತೆಗೆ ಛಾಯಾಗ್ರಹಣ ಮತ್ತು ಸಂಗೀತ ಚಿತ್ರಕ್ಕೆ ಮತ್ತಷ್ಟು ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin