Bollywood beauty Tabu enters Vijay Sethupathi-Puri Jagannath film

ವಿಜಯ್ ಸೇತುಪತಿ-ಪೂರಿ ಜಗನ್ನಾಥ್ ಚಿತ್ರಕ್ಕೆ ಬಾಲಿವುಡ್ ಬ್ಯೂಟಿ ಟಬು ಎಂಟ್ರಿ - CineNewsKannada.com

ವಿಜಯ್ ಸೇತುಪತಿ-ಪೂರಿ ಜಗನ್ನಾಥ್ ಚಿತ್ರಕ್ಕೆ ಬಾಲಿವುಡ್ ಬ್ಯೂಟಿ ಟಬು ಎಂಟ್ರಿ

ತೆಲುಗಿನ ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಕಾಂಬೋದ ಹೊಸ ಚಿತ್ರದ ಬಗ್ಗೆ ಲೇಟೆಸ್ಟ್ ಸುದ್ದಿಯೊಂದು ಸಿಕ್ಕಿದೆ. ಯುಗಾದಿ ಹಬ್ಬಕ್ಕೆ ಈ ಜೋಡಿ ಮೊದಲ ಬಾರಿಗೆ ಕೈ ಜೋಡಿಸಿರುವ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಪುರಿ ಜಗನ್ನಾಥ್ ಹೊಸ ಪ್ರಾಜೆಕ್ಟ್ ಬಾಲಿವುಡ್ ಪ್ರತಿಭಾನ್ವಿತ ನಟಿ ಟಬು ಎಂಟ್ರಿ ಕೊಟ್ಟಿದ್ದಾರೆ

ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದ ಟಬು ವಿಜಯ್ ಸೇತುಪತಿ ನಾಯಕನಾಗಿ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಪಾತ್ರ ಹಾಗೂ ಚಿತ್ರದ ಕಥೆ ಕೇಳಿ ಟಬು ಎಕ್ಸೈಟ್ ಆಗಿದ್ದಾರೆ.

ಜೂನ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಹಿಂದೆಂದೂ ಕಾಣದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುರಿ ಕನೆಕ್ಟ್ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುವುದು. ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin