ಬಲಮುರಿ ಗಣಪತಿ ದೇವಸ್ಥಾನದಲ್ಲಿ “ತಮಟೆ ಲಚ್ಚಿ” ಚಿತ್ರದ ಸ್ಕ್ರಿಪ್ಟ್ ಪೂಜೆ
ಕೆ .ಎಸ್. ನಾಗರಾಜ್ ನಿರ್ಮಿಸಿ, ನಿರ್ದೇಶಿಸುತ್ತಿರುವ, ಡಾ.ರವಿಶೆಟ್ಟಿ ಬೈಂದೂರ್ ಅರ್ಪಿಸುವ, ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕಥಾಹಂದರ ಒಳಗೊಂಡ “ತಮಟೆ ಲಚಿ”್ಚ ಸಿನಿಮಾದ ಸ್ಕ್ರಿಪ್ ಪೂಜೆ ಸಮಾರಂಭ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರ ಕಲಾವಿದರು, ತಂತ್ರಜ್ಞರು ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು. ಕರಾವಳಿ ಕನ್ನಡಿಗ ಡಾ. ರವಿಶೆಟ್ಟಿ ಬೈಂದೂರ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು,
ಈ ವೇಳೆ ಮಾತನಾಡಿದ ರವಿಶೆಟ್ಟಿ, ಇತ್ತೀಚಿನ ದಿನಗಳಲ್ಲಿ ಪರಿಸರ ನಾಶವಾಗುವುದಲ್ಲದೆ, ಇಂದಿನ ಪೀಳಿಯಜನರಲ್ಲಿ ಪರಿಸರ ಪ್ರೇಮದ ಬಗ್ಗೆ ಕಾಳಜಿ ಕಣ್ಮರೆಯಾಗುತ್ತಿದೆ. ಕೆಲವು ಸಂಪ್ರದಾಯ, ಆಚರಣೆಗಳು ಕಣ್ಮರೆಯಾಗುತ್ತಿವೆ. ಹಿಂದಿನ ಜನರ ಕಷ್ಟಗಳು, ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಜಾತಿ ವೈಷ್ಯಗಳು. ಹೀಗ ಎಲ್ಲಾ ವಿಷಯಗಳನ್ನು ಚಲನಚಿತ್ರ ರೂಪದಲ್ಲಿ ತೋರಿಸಲು ಹಿರಿಯ ಕಲಾವಿದ ಕೆ ಎಸ್. ನಾಗರಾಜ್ ಸಿದ್ದರಾಗಿರುವುದು ಖುಷಿಯಾಗಿದೆ. “ತಮಟೆ ಲಚ್ಚಿ” ಸಿನಿಮಾ ಯಾವುದೇ ವಿಘ್ನವಿಲ್ಲದೆ ನಿರ್ಮಾಣವಾಗಿ, ಜನರ ಮನ ಸೆಳೆಯಲಿ ಎಂದು ಶುಭ ಹಾರೈಸಿದರು.
ಕೆ ಎಸ್. ನಾಗರಾಜ್ ಮಾತನಾಡಿ “ತಮಟೆ ಲಚ್ಚಿ” ಸಿನಿಮಾ ಅತ್ಯುತ್ತಮವಾಗಿ ಮೂಡಿ ಬರಲಿದ್ದು, ತಂಡ ಈ ಬಾರಿ ಹೊಸತನದ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಹಳೆಯ ಮತ್ತು ಹೊಸ ನಟ ನಟಿಯರು ,ಪೆÇೀಷಕ ನಟರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದರು.

ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಸುರೇಂದ್ರ ಶೆಟ್ಟಿ, ಹೋಟೆಲ್ ವಿಭಾಗದ ರಾಜ್ಯಾಧ್ಯಕ್ಷ ಶೈಲೇಶ್ ಪೂಜಾರಿ ಕೋಟ, ಚಾಲಕರ ವಿಭಾಗದ ರಾಜ್ಯಾಧ್ಯಕ್ಷ ಮಣಿಕಂಠ ಹಾಗೂ ಇತರರು ಹಾಜರಿದ್ದರು.
ಸಯ್ಯದ್ ಅಲಿ ಕಥೆ, ಚಿತ್ರಕಥೆ, ಸಂಭಾಷಣೆ, ಅರುಣ್ ರಾಮರಾಜ್ ಸಂಗೀತ ಈ ಚಿತ್ರಕ್ಕಿದ್ದು, ಸ್ವಾತಿ, ಕೆ.ಎಸ್. ನಾಗರಾಜ್, ಶಿವಕುಮಾರ್ ಆರಾಧ್ಯ, ಸುನಿತ ಸಿಂಗ್, ಪುಷ್ಪ ಮತ್ತಿತರು ಇದ್ದಾರೆ

