Kiccha Sudeep plants sapling in memory of mother: Family members participate
ಅಮ್ಮನ ನೆನಪಿಗೆ ಸಸಿ ನೆಟ್ಟ ಕಿಚ್ಚ ಸುದೀಪ್: ಕುಟುಂಬದ ಸದಸ್ಯರು,ಅಭಿಮಾನಿಗಳು ಭಾಗಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಕೆಲ ತಿಂಗಳ ಹಿಂದೆಯಷ್ಟೇ ಇಹಲೋಕ ತ್ಯಜಿಸಿದ್ದರು, ಅಮ್ಮನಿಲ್ಲದ ಮೊದಲ ಹುಟ್ಟುಹಬ್ಬನ್ನು ಸ್ಮರಣೀಯವಾಗಿಸಿದ್ದಾರೆ ಕಿಚ್ಚ ಸುದೀಪ್.

ಅಮ್ಮನ ಹುಟ್ಟು ಹಬ್ಬದ ನೆನಪಿಗೆ “ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ” ಎಂಬ ಸಾಲಿನೊಂದಿಗೆ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದು”ಪ್ರತಿ ಮರಕ್ಕೂ ಒಂದು ಕಥೆ ಇದೆ. ಈ ಮರ ನನ್ನ ಅಮ್ಮನ ಕಥೆ ಹೇಳಲಿ ಎಂದು ಕಿಚ್ಚ ಸುದೀಪ್ ಅವರ ಅಭಿಲಾಷೆ.
ಕಿಚ್ಚ ಸುದೀಪ್ ಕೇರ್ ಪೌಂಡೇಷನ್ ವತಿಯಿಂದ ಪ್ರತಿಷ್ಠಾನದ ಸದಸ್ಯರು ಕುಟುಂಬದ ಸದಸ್ಯರ ಜೊತೆ ಭಾಗಿಯಾದ ಕಿಚ್ಚ ಸುದೀಪ್, ಅಮ್ಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶಿರಭಾಗಿ ನಮಸ್ಕರಿಸಿದರು. ಬಳಿಕ ಅಮ್ಮನ ಹೆಸರಲ್ಲಿ ಸಸಿ ನೆಟ್ಟು ಹಸಿರು ಕ್ರಾಂತಿ ಆರಂಭಿಸುವ ಮೂಲಕ ಅಮ್ಮನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಈ ವೇಳೆ ಕಿಚ್ಚ ಸುದೀಪ್ ಅವರ ಸಹೋದರಿ ಮತ್ತು ಅವರ ಮಕ್ಕಳು, ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಅಭಿಮಾನಿಗಳು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.


